ಕೊಲಂಬೋ: ಶ್ರೀಲಂಕಾ ಕ್ರಿಕೆಟಿಗ ಜಯಸೂರ್ಯ ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಭಿಕ್ಕಟ್ಟಿಗೆ ಭಾರತ ಸಹಾಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೃತಜ್ಞತಾಪೂರ್ವವಾಗಿ ‘ಬಿಗ್ ಬ್ರದರ್'(ದೊಡ್ಡ ಅಣ್ಣ) ಎಂದು ಕರೆದಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ನಡೆಯುತ್ತಿರುವ ಶ್ರೀಲಂಕಾದ ಅತೀದೊಡ್ಡ ಆರ್ಥಿಕ ಭಿಕ್ಕಟ್ಟು ಇದೀಗ ತಲೆದೋರಿದ್ದು, ಭಾರತ ನೆರೆಯ ದೇಶಕ್ಕೆ ಸಹಾಯ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕ್ರಿಕೆಟಿಗ ಭಾರತ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ವಿಎಲ್‍ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ
Advertisement
Advertisement
ನೆರೆಯ ದೇಶವಾಗಿ ಹಾಗೂ ನಮ್ಮ ದೇಶದ ಹಿರಿಯ ಸಹೋದರನಾಗಿ, ಭಾರತ ಯಾವಾಗಲೂ ನಮಗೆ ಸಹಾಯ ಮಾಡಿದೆ. ನಾವು ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿಯವರಿಗೆ ಕೃತಜ್ಞರಾಗಿರುತ್ತೇವೆ. ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಬದುಕು ಕಷ್ಟಕರವಾಗಿದೆ. ಭಾರತ ಹಾಗೂ ಇತರ ದೇಶಗಳ ಸಹಾಯದಿಂದ ನಾವು ಈ ಆರ್ಥಿಕ ಭಿಕ್ಕಟ್ಟಿನಿಂದ ಹೊರಬರಲು ಆಶಿಸುತ್ತೇವೆ ಎಂದರು.
Advertisement
ಪ್ರಸ್ತುತ ಶ್ರೀಲಂಕಾ ತೀವ್ರ ಗತಿಯಲ್ಲಿ ಆಹಾರ ಹಾಗೂ ಇಂಧನ ಕೊರತೆಯನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟನ್ನು ತಗ್ಗಿಸಲು ಭಾರತ ಇದುವರೆಗೆ ಶ್ರೀಲಂಕಾಗೆ 2,70,000 ಮೆಟ್ರಿಕ್ ಟನ್(ಎಂಟಿ) ಇಂಧನವನ್ನು ಪೂರೈಸಿದೆ. ಕಳೆದ 24 ಗಂಟೆಗಳಲ್ಲಿ ಭಾರತ 36,000 ಎಂಟಿ ಪೆಟ್ರೋಲ್ ಹಾಗೂ 40,000 ಎಂಟಿ ಡೀಸೆಲ್ ರವಾನಿಸಿದೆ. ಇದರೊಂದಿಗೆ ಔಷಧ, ಧಾನ್ಯ, ಅಕ್ಕಿಯನ್ನೂ ಕಳುಹಿಸಿದೆ. ಇದನ್ನೂ ಓದಿ: ಇಮ್ರಾನ್ ಖಾನ್ ಅಧಿಕಾರಕ್ಕೆ ಕತ್ತರಿ ಬೀಳ್ತಿದ್ದಂತೇ ಆಪ್ತರಿಗೆ ಸಂಕಷ್ಟ
Advertisement
ಕೋವಿಡ್-19 ಹಾವಳಿ ಪ್ರಾರಂಭವಾದಾಗಿನಿಂದ ಶ್ರೀಲಂಕಾದಲ್ಲಿ ಆರ್ಥಿಕ ಭಿಕ್ಕಟ್ಟು ನಿಧಾನವಾಗಿ ಪ್ರಾರಂಭವಾಯಿತು. ಪ್ರವಾಸೋದ್ಯಮವೇ ಉಸಿರಾಗಿರುವ ದ್ವೀಪ ದೇಶದಲ್ಲಿ ಕೋವಿಡ್ ಪ್ರಾರಂಭವಾದಂತೆ ಪ್ರವಾಸೋದ್ಯಮಕ್ಕೆ ಬೇಡಿಕೆ ಕಡಿಮೆಯಾದ್ದರಿಂದ ಇದೀಗ ಶ್ರೀಲಂಕಾ ಕಷ್ಟದ ದಿನಗಳನ್ನು ಎದುರಿಸುತ್ತಿದೆ.