ಕೊಲಂಬೊ: ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಶ್ರೀಲಂಕಾದಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆಡಳಿತದ ವಿರುದ್ಧ ರೊಚ್ಚಿಗೆದ್ದಿರುವ ಪ್ರತಿಭಟನಾಕಾರರು ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ಜನರು ರೋಷಾವೇಷಕ್ಕೆ ಬೆಚ್ಚಿದ ಮಹಿಂದಾ ರಾಜಪಕ್ಸ ಸೋಮವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಶ್ರೀಲಂಕಾ ದೇಶಾದ್ಯಂತ ಕಳೆದ ಒಂದು ವಾರದಿಂದ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಅನೇಕ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದೆ. ದೇಶದಲ್ಲಿ ಹಿಂಸಾಚಾರದಿಂದಾಗಿ ಐದು ಮಂದಿ ಸಾವನ್ನಪ್ಪಿದ್ದು, 225 ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ರೊಚ್ಚಿಗೆದ್ದ ಜನ – ಸಂಸದ, ಮಾಜಿ ಸಚಿವರ ಮನೆಗೆ ಬೆಂಕಿ
Advertisement
Advertisement
ಏಪ್ರಿಲ್ 9 ರಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ನಿರ್ಗಮಿತ ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸ ಅವರ ಬೆಂಬಲಿಗರಿಂದ ದಾಳಿ ನಂತರ ಪ್ರತೀಕಾರ ನಡೆಸಲು ಮುಂದಾದರು.
Advertisement
ಪ್ರತಿಭಟನಾಕಾರರ ಮೇಲೆ ಗುಂಡುಹಾರಿಸಿದ ಸಂಸದ
ಸೋಮವಾರ ರಾಜಧಾನಿ ಕೊಲಂಬೊದಿಂದ ಹೊರಟಿದ್ದ ಆಡಳಿತ ಪಕ್ಷದ ಶಾಸಕ ಅಮರಕೀರ್ತಿ ಅತುಕೋರಾಲ ಅವರ ವಾಹನವನ್ನು ತಡೆದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದರು. ಈ ವೇಳೆ 27 ವರ್ಷದ ವ್ಯಕ್ತಿ ಗುಂಡಿಗೆ ಬಲಿಯಾಗಿ, ಇಬ್ಬರು ಗಾಯಗೊಂಡರು. ಘಟನೆ ನಂತರ ಸಂಸದರು ತಾವೇ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಪಕ್ಷ ಆರೋಪಿಸಿದೆ. ಶಾಸಕರ ಅಂಗರಕ್ಷಕ ಕೂಡ ಸಾವನ್ನಪ್ಪಿದ್ದಾನೆ. ಅಲ್ಲಿ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
Advertisement
ಸೋಮವಾರದಂದು ದಕ್ಷಿಣದ ವೀರಕೇಟಿಯ ಪಟ್ಟಣದಲ್ಲಿ ರಾಜಪಕ್ಸ ಅವರ ಪಕ್ಷದ ಪ್ರಾಂತೀಯ ರಾಜಕಾರಣಿಯೊಬ್ಬರು ಗುಂಡು ಹಾರಿಸಿ ಇಬ್ಬರನ್ನು ಕೊಂದು ಮೂವರನ್ನು ಗಾಯಗೊಳಿಸಿದ್ದಾರೆ. ಕೃತ್ಯದ ನಂತರ ರಾಜಕಾರಣಿ ಕಾಣೆಯಾಗಿದ್ದಾನೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಬುಗಿಲೆದ್ದ ಆಕ್ರೋಶಕ್ಕೆ ಆಡಳಿತ ಪಕ್ಷದ ಸಂಸದ ಬಲಿ
ರಾಜಕಾರಣಿಗಳ ಮನೆಗಳಿಗೆ ಬೆಂಕಿ
ಕರ್ಫ್ಯೂ ಹೊರತಾಗಿಯೂ ಆಡಳಿತ ಪಕ್ಷದ ಉನ್ನತ ರಾಜಕಾರಣಿಗಳ ಕನಿಷ್ಠ 41 ಮನೆಗಳನ್ನು ರಾತ್ರಿಯಿಡೀ ಸುಟ್ಟು ಹಾಕಲಾಗಿದೆ. ಆ ಮನೆಗಳಲ್ಲಿ ನಿಲ್ಲಿಸಿದ್ದ ನೂರಾರು ದ್ವಿಚಕ್ರ ವಾಹನಗಳೂ ಸುಟ್ಟು ಕರಕಲಾಗಿವೆ.
ರಾಜಪಕ್ಸ ಮ್ಯೂಸಿಯಂ ಧ್ವಂಸ
ಮೆಡಾ ಮುಲಾನಾ ಎಂಬ ಆಡಳಿತ ಕುಟುಂಬದ ಪೂರ್ವಜರ ಗ್ರಾಮದಲ್ಲಿರುವ ರಾಜಪಕ್ಸ ಮನೆತನದವರ ಕುರಿತಾದ ವಸ್ತುಸಂಗ್ರಹಾಲಯದ ಮೇಲೆ ಗುಂಪೊಂದು ದಾಳಿ ನಡೆಸಿ ಅದನ್ನು ನೆಲಸಮಗೊಳಿಸಿದೆ. ರಾಜಪಕ್ಸ ಪೋಷಕರ ಎರಡು ಮೇಣದ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ. ವಾಯುವ್ಯ ಪಟ್ಟಣವಾದ ಕುರುನೆಗಾಲದಲ್ಲಿ ರಾಜಪಕ್ಸರ ರಾಜಕೀಯ ಕಚೇರಿಯೂ ಸಹ ನಾಶವಾಗಿದೆ. ಇದನ್ನೂ ಓದಿ: ಶ್ರೀಲಂಕಾ ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸ ರಾಜೀನಾಮೆ
ಆಸ್ಪತ್ರೆಯಲ್ಲಿ ನಿರ್ಬಂಧ
ರಾಜಪಕ್ಸ ವಿರೋಧಿ ಪ್ರತಿಭಟನಾಕಾರರೊಂದಿಗಿನ ಘರ್ಷಣೆಯಲ್ಲಿ ಗಾಯಗೊಂಡ ಸರ್ಕಾರಿ ಬೆಂಬಲಿಗರನ್ನು ರಕ್ಷಿಸಲು ಮುಖ್ಯ ಕೊಲಂಬೊ ರಾಷ್ಟ್ರೀಯ ಆಸ್ಪತ್ರೆಯ ವೈದ್ಯರು ಮುಂದಾದರು. ಆದರೆ ಅವರಿಗೆ ಚಿಕಿತ್ಸೆ ನೀಡದಂತೆ ಪ್ರತಿಭಟನಾಕಾರರು ತಡೆಯಲು ಮುಂದಾದರು. ʻಅವರು ಕೊಲೆಗಾರರಾಗಿರಬಹುದು, ಆದರೆ ಚಿಕಿತ್ಸೆ ಪಡೆಯಬೇಕಾದ ರೋಗಿಗಳುʼ ಎಂದು ವೈದ್ಯರು ನಿರ್ಬಂಧಕ್ಕೆ ವಿರೋಧ ವ್ಯಕ್ತಪಡಿಸಿದರು.
ಒಟ್ಟು 219 ಮಂದಿಯನ್ನು ಕೊಲಂಬೊ ರಾಷ್ಟ್ರೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐವರು ತೀವ್ರ ನಿಗಾದಲ್ಲಿದ್ದಾರೆ ಎಂದು ಆಸ್ಪತ್ರೆಯ ವಕ್ತಾರ ಪುಷ್ಪಾ ಸೊಯ್ಸಾ ತಿಳಿಸಿದ್ದಾರೆ. ಗಾಯಗೊಂಡ ಸರ್ಕಾರಿ ಬೆಂಬಲಿಗರನ್ನು ಕರೆತರಲು ಸೈನಿಕರು ಗೇಟ್‌ಗಳನ್ನು ಬಲವಂತವಾಗಿ ತೆರೆಯಬೇಕಾದ ಪರಿಸ್ಥಿತಿ ಇತ್ತು. ಪ್ರತಿಭಟನಾಕಾರರ ವಿರೋಧದಿಂದಾಗಿ ಆಸ್ಪತ್ರೆಗೆ ಪ್ರವೇಶಿಸಲು ಬೀಗಗಳನ್ನು ಮುರಿಯಬೇಕಾಯಿತು. ಇದನ್ನೂ ಓದಿ: 1945 ರಲ್ಲಿದ್ದಂತೆ, ವಿಜಯವು ನಮ್ಮದಾಗಿರುತ್ತದೆ: ಪುಟಿನ್ ಪ್ರತಿಜ್ಞೆ
ಬಸ್‌ಗಳಿಗೆ ಬೆಂಕಿ
ಕೊಲಂಬೊಗೆ ಪ್ರಯಾಣಿಸಲು ರಾಜಪಕ್ಸ ಬೆಂಬಲಿಗರು ಬಳಸುತ್ತಿದ್ದ ಹತ್ತಾರು ಬಸ್‌ಗಳಿಗೆ ದೇಶದಾದ್ಯಂತ ಬೆಂಕಿ ಹಚ್ಚಲಾಯಿತು. ಮಹಾರಾಗಮಾದ ಉಪನಗರದಲ್ಲಿ ಜನಸಮೂಹವು ಸರ್ಕಾರಿ ಪರ ಗುಂಪಿನ ನಾಯಕನನ್ನು ಬಸ್‌ನಿಂದ ಬಲವಂತವಾಗಿ ಕೆಳಗಿಳಿಸಿ ಕಸದ ಗಾಡಿಗೆ ಎಸೆದರು. ಮೊದಲು ವಾಹನವನ್ನು ಬುಲ್ಡೋಜರ್‌ನಿಂದ ಜಖಂಗೊಳಿಸಿದರು.
ಜನರನ್ನು ಕೆರೆಗೆ ತಳ್ಳಿ ದುಷ್ಕೃತ್ಯ
ಆಕ್ರೋಶಗೊಂಡ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಟೆಂಪಲ್ ಟ್ರೀಸ್ ನಿವಾಸದ ಬಳಿಯ ಕೆರೆಯೊಂದಕ್ಕೆ ಹತ್ತಾರು ಮಂದಿಯನ್ನು ತಳ್ಳಿ ಆಕ್ರೋಶ ಹೊರಕಾಕಿದರು. ಕೆರೆಗೆ ತಳ್ಳಲ್ಪಟ್ಟವರನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು.