ಮುಂಬೈ: ಸೂರ್ಯಕುಮಾರ್ ಯಾದವ್ (Suryakumar Yadav) ಸಿಡಿಲಬ್ಬರದ ಶತಕ ಹಾಗೂ ಸಂಘಟಿತ ಬೌಲಿಂಗ್ ಪ್ರದರ್ಶನದಿಂದಾಗಿ ಟೀಂ ಇಂಡಿಯಾ (Team India) ಶ್ರೀಲಂಕಾ (Srilanka) ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ 91 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 2-1 ಅಂತರದಲ್ಲಿ ಗೆದ್ದು ಸರಣಿ ಕಿರೀಟ ಮುಡಿಗೇರಿಸಿಕೊಂಡಿದೆ.
Advertisement
ಶ್ರೀಲಂಕಾ ವಿರುದ್ಧದ T20 ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಹಾರ್ದಿಕ್ ಪಡೆ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್‌ಗಳ ಬೃಹತ್ ಮೊತ್ತ ಪೇರಿಸಿತು. 229 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಶ್ರೀಲಂಕಾ ನಿಗದಿತ 16.4 ಓವರ್‌ಗಳಲ್ಲಿ 137 ರನ್‌ಗಳಿಗೆ ಸರ್ವಪತನ ಕಂಡು, ಸೋಲೊಪ್ಪಿಕೊಂಡಿತು. ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿ ಗೆದ್ದು ಬೀಗಿತು.
Advertisement
Advertisement
ಟೀಂ ಇಂಡಿಯಾದ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಶ್ರೀಲಂಕಾ (SriLanka) ಉತ್ತಮ ಶುಭಾರಂಭ ನೀಡಿತು. ಒಂದೆಡೆ ರನ್ ಕಲೆಹಾಕುತ್ತಿದ್ದರೂ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ ಬೌಲರ್‌ಗಳು ತಮ್ಮ ಮಾರಕ ದಾಳಿಯಿಂದ ಲಂಕನ್ನರಿಗೆ ಲಗಾಮು ಹಾಕಿದರು. ಪರಿಣಾಮ ಪವರ್ ಪ್ಲೇ ಮುಗಿಯುವಷ್ಟರಲ್ಲೇ 51 ರನ್ ಗಳಿಸಿದ್ದ ಲಂಕಾ ತಂಡ 2 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
Advertisement
ಆರಂಭಿಕರಾಗಿ ಕಣಕ್ಕಿಳಿದ ಪಾತುಮ್ ನಿಸಾಂಕ 3 ಬೌಂಡರಿಗಳೊಂದಿಗೆ 15 ರನ್ ಗಳಿಸಿದ್ರೆ, ಕುಸಾಲ್ ಮೆಂಡಿಸ್ (Kusal Mendis) 15 ಎಸೆತಗಳಲ್ಲಿ 23ರನ್ (2 ಸಿಕ್ಸರ್, 2 ಬೌಂಡರಿ) ಬಾರಿಸಿ ಪೆವಿಲಿಯನ್ ನತ್ತ ಮುಖ ಮಾಡಿದ್ರು. 2ನೇ ಕ್ರಮಾಂಕದಲ್ಲಿ ಬಂದ ಅವಿಷ್ಕಾ ಫರ್ನಾಂಡೋ 1 ರನ್ ಗಳಿಸಿದರು. ವಾನಿಂದು ಹಸರಂಗ (Wanindu Hasaranga de Silva) ಸಹ 9 ರನ್, ಚಮಿಕ ಕರುಣ ರತ್ನೆ (Chamika Karunaratne) ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದ್ರು.
ನಂತರ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಧನಂಜಯ ಡಿ ಸಿಲ್ವಾ ಹಾಗೂ ಚರಿತ್ ಅಸಲಂಕಾ ಉತ್ತಮ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. ಸೆಲ್ವಾ 14 ಎಸೆತಗಳಲ್ಲಿ 22 ರನ್ ಗಳಿಸಿದ್ರೆ, ಅಸಲಂಕಾ 14 ಎಸೆತಗಳಲ್ಲಿ 19 ರನ್ ಗಳಿಸಿದರು. ಇವರಿಬ್ಬರ ಆಟಕ್ಕೆ ಭಾರತದ ಬೌಲರ್‌ಗಳು ಬ್ರೇಕ್ ಹಾಕಿದ್ರು. ನಾಯಕ ದಸುನ್ ಶನಕ (Dasun Shanaka) ಕೂಡ 23 ರನ್‌ಗಳಿಸಿ ಔಟಾದರು. ಮಹೀಶ್ ತೀಕ್ಷಣ 2 ರನ್ ದಿಲ್ಶನ್ 9ರನ್ ಗಳಿಸಿದ್ರೆ, ಕುಸನ್ ರಜಿತ ಶೂನ್ಯಕ್ಕೆ ನಿರ್ಗಮಿಸಿದರು. ಕಳಪೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನದಿಂದಾಗಿ ಶ್ರೀಲಂಕಾ ತಂಡ ಹೀನಾಯ ಸೋಲನ್ನು ಅನುಭವಿಸಿತು.
ಅರ್ಷ್‌ದೀಪ್, ಹಾರ್ದಿಕ್, ಚಾಹಲ್ ಬೌಲಿಂಗ್ ಕಮಾಲ್:
ಬೌಲಿಂಗ್‌ನಲ್ಲೀ ತಮ್ಮ ಕೈಚಳಕ ತೋರಿದ ಭಾರತೀಯ ಬೌಲರ್‌ಗಳು ಪ್ರಮುಖ ವಿಕೆಟ್‌ಗಳನ್ನು ಉರುಳಿಸುವಲ್ಲಿ ಯಶಸ್ವಿಯಾದರು. ಕಳೆದ ಪಂದ್ಯದಲ್ಲಿ ನೋಬಾಲ್ ನೀಡಿ ಕೆಟ್ಟ ದಾಖಲೆ ಬರೆದಿದ್ದ ಅರ್ಷ್‌ದೀಪ್ ಸಿಂಗ್ (Arshdeep Singh) ಈ ಬಾರಿ 3 ವಿಕೆಟ್ ಪಡೆದು ಗೆಲುವಿಗೆ ಶ್ರಮಿಸಿದರು. ನಾಯಕ ಹಾರ್ದಿಕ್ ಪಾಂಡ್ಯ (Hardik Pandya), ಯಜುವೇಂದ್ರ ಚಾಹಲ್, ಉಮ್ರಾನ್ ಮಲಿಕ್ ತಲಾ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.
ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕನಾಗಿ ಕಣಕ್ಕಿಳಿದ ಇಶಾನ್ ಕಿಶನ್ 1 ರನ್ ಗಳಿಸಿ ಟೀಂ ಇಂಡಿಯಾಕ್ಕೆ ನಿರಾಸೆ ಮೂಡಿಸಿದರು. ಈ ವೇಳೆ 2ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರಾಹುಲ್ ತ್ರಿಪಾಟಿ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಪವರ್ ಪ್ಲೇನಲ್ಲಿ ಭರ್ಜರಿ ರನ್ ತಂದುಕೊಟ್ಟರು. 16 ಎಸೆತಗಳನ್ನು ಎದುರಿಸಿದ ತ್ರಿಪಾಟಿ 218.75 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿ 35 ರನ್ (2 ಸಿಕ್ಸರ್, 5 ಬೌಂಡರಿ) ಸಿಡಿಸಿದರು. ಈ ವೇಳೆ ಚಮಿಕ ಕರುಣರತ್ನೆ ಬೌಲಿಂಗ್‌ನಲ್ಲಿ ಬೌಂಡರಿಗೆ ತಳ್ಳಲುಹೋಗಿ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಸೂರ್ಯನ ಅಬ್ಬರ ಶುರುವಾಯಿತು.
2ನೇ ಪಂದ್ಯದಲ್ಲಿ ಅರ್ಧ ಶತಕ ಗಳಿಸಿ ಔಟಾಗಿದ್ದ ಸೂರ್ಯ ಈ ಬಾರಿ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದರು. ಸಿಕ್ಸರ್- ಬೌಂಡರಿಗಳನ್ನು ಬಾರಿಸುತ್ತಾ ಲಂಕಾ ಬೌಲರ್‌ಗಳು ಕಂಗಾಲಾಗುವಂತೆ ಮಾಡಿದ್ರು. 219.60 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಸೂರ್ಯ 51 ಎಸೆತಗಳಲ್ಲಿ 7 ಬೌಂಡರಿ ಹಾಗೂ 9 ಸಿಕ್ಸರ್ ಗಳೊಂದಿಗೆ 112 ರನ್ ಗಳಿಸಿ ಅಜೇಯರಾಗುಳಿದರು.
ಈ ವೇಳೆ ಸೂರ್ಯನಿಗೆ ಸಾಥ್ ನೀಡಿದ ಶುಭಮನ್ ಗಿಲ್ 36 ಎಸೆತಗಳಲ್ಲಿ 46 ರನ್ (3 ಸಿಕ್ಸರ್, 2 ಬೌಂಡರಿ) ಸಿಡಿಸಿ ಪೆವಿಲಿಯನ್‌ಗೆ ಮರಳಿದರು. ಅಂತಿಮ ಹಂತದಲ್ಲಿ ಅಕ್ಷರ್ ಪಟೇಲ್ ಕೂಡ ಭರ್ಜರಿ ಬ್ಯಾಟಿಂಗ್ ಮಾಡಿದರು. 9 ಎಸೆತ ಎದುರಿಸಿದ ಅಕ್ಷರ್ 21 ರನ್‌ಗಳಿಸಿ ಅಜೇಯವಾಗುಳಿದರು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ಹಾರ್ದಿಕ್ ಪಾಂಡ್ಯ 4 ಎಸೆತಗಳಲ್ಲಿ 4 ರನ್ ಗಳಿಸಿ ಔಟಾದರು.
ಶ್ರೀಲಂಕಾ ತಂಡದ ಪರ ದಿಲ್ಶನ್ ಮಧುಶಂಕ 2 ವಿಕೆಟ್ ಪಡೆದರೆ, ಕಸುನ್ ರಜಿತಾ, ಚಮಿಕ ಕರುಣರತ್ನೆ ಹಾಗೂ ವಾನಿಂದು ಹಸರಂಗ ತಲಾ ಒಂದೊಂದು ವಿಕೆಟ್ ಪಡೆದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k