InternationalLatestMain Post

ಶ್ರೀಲಂಕಾಗೆ ಬೆಂಬಲ ಬೇಕು, ಅನಗತ್ಯ ಒತ್ತಡ ಅಲ್ಲ- ಚೀನಾವನ್ನು ತರಾಟೆಗೆ ತೆಗೆದುಕೊಂಡ ಭಾರತ

ಕೊಲಂಬೋ: ಶ್ರೀಲಂಕಾದ ಹಂಬಂಟೋಟಾ ಬಂದರಿನಲ್ಲಿ ಚೀನಾ ತನ್ನ ಹೈಟೆಕ್ ಹಡಗನ್ನು ನಿಲ್ಲಿಸಿದ್ದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿಚಾರಕ್ಕೆ ಚೀನಾ ಭಾರತದ ಕುರಿತು ಟೀಕೆಗಳನ್ನು ಮಾಡಿದ್ದು, ಇದೀಗ ಭಾರತವೂ ಚೀನಾಗೆ ಟಾಂಗ್ ನೀಡಿದೆ.

ಭಾರತದ ದೃಷ್ಟಿಕೋನ ಹೇಗಿದೆ ಎಂಬುದನ್ನು ಅದರ ವರ್ತನೆಯಿಂದಲೇ ಬಣ್ಣಿಸಬಹುದು ಎಂದು ಚೀನಾದ ರಾಯಭಾರಿ ಕ್ವಿ ಝೆನ್‌ಹಾಂಗ್ ಹೇಳಿಕೆ ನೀಡಿದ್ದರು. ಇದಕ್ಕೆ ಚೀನಾವನ್ನು ತರಾಟೆಗೆ ತೆಗೆದುಕೊಂಡ ಭಾರತ, ಇದೀಗ ಶ್ರೀಲಂಕಾಗೆ ಬೇಕಾಗಿರುವುದು ಬೆಂಬಲ. ಅನಗತ್ಯ ಒತ್ತಡ ಅಥವಾ ವಿವಾದವಲ್ಲ ಎಂದು ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನ್ ಹೇಳಿದೆ.

ಚೀನಾ ರಾಯಭಾರಿಯವರ ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ. ಅವರ ಮೂಲ ರಾಜತಾಂತ್ರಿಕ ಶಿಷ್ಟಾಚಾರದ ಉಲ್ಲಂಘನೆ ವೈಯಕ್ತಿಕ ಲಕ್ಷಣವಾಗಿರಬಹುದು ಅಥವಾ ದೊಡ್ಡ ರಾಷ್ಟ್ರೀಯ ಮನೋಭಾವವನ್ನು ಪ್ರತಿಬಿಂಬಿಸಬಹುದು ಎಂದು ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನ್ ಟ್ವೀಟ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಪಕ್ಷ ಬಿಡಲು ರಾಹುಲ್ ಕಾರಣ – ಕಾಂಗ್ರೆಸ್‍ಗೆ ಎಂಎ ಖಾನ್ ಗುಡ್ ಬೈ

1948 ರ ಬಳಿಕ ದ್ವೀಪ ರಾಷ್ಟ್ರ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರಿಂದಾಗಿ ಶ್ರೀಲಂಕಾಗೆ ಇದೀಗ ಬೆಂಬಲದ ಅಗತ್ಯವಿದೆ, ಬದಲಿಗೆ ಅನಗತ್ಯ ಒತ್ತಡ, ಅನಗತ್ಯ ವಿವಾದಗಳು ಹಾಗೂ ಮತ್ತೊಂದು ದೇಶದ ಕಾರ್ಯಸೂಚಿಯ ಪೂರೈಕೆ ಅಲ್ಲ ಎಂದು ಟಾಂಗ್ ನೀಡಿದೆ. ಇದನ್ನೂ ಓದಿ: ಹಣದ ವಿಚಾರಕ್ಕೆ ಟಿಎಂಸಿ ಬೆಂಬಲಿಗನನ್ನು ಹಿಗ್ಗಾಮುಗ್ಗಾ ಥಳಿಸಿದ ಬಿಜೆಪಿ ಮುಖಂಡ

Live Tv

Leave a Reply

Your email address will not be published.

Back to top button