ಬೆಂಗಳೂರು: ಪಾಸ್‌ಪೋರ್ಟ್ ಇಲ್ಲ .. ವೀಸಾ ಇಲ್ಲ.. ಬೋಟ್ ಮೂಲಕ ಅಕ್ರಮವಾಗಿ ಶ್ರೀಲಂಕಾದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ನಟೋರಿಯಸ್ ಕ್ರಿಮಿನಲ್‌ಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಶ್ರೀಲಂಕಾ ಕ್ರಿಮಿನಲ್‌ಗಳಿಗೆ ಆಶ್ರಯ ಕೊಟ್ಟಿದ್ದು ಬೆಂಗಳೂರು ಕ್ರಿಮಿನಲ್.
ಬೆಂಗಳೂರು ನಗರ ಸಿಸಿಬಿ ಪೊಲೀಸರ ಟೀಂ ಮತ್ತೊಂದು ಬೃಹತ್ ಬೇಟೆಯಾಡಿದೆ. ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲಸಿದ್ದ ಶ್ರೀಲಂಕಾದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳನ್ನ ಬಂಧಿಸಿದ್ದಾರೆ. ಶ್ರೀಲಂಕಾದಲ್ಲಿ ಬರೋಬ್ಬರಿ ಒಂಭತ್ತು ಕೊಲೆ ಮಾಡಿ ನುಸುಳಿ ಬಂದಿದ್ದ ಕಾಸಿನ್ ಕುಮಾರ್ ಸನಕ, ಅಮಿಲಾ ನುವಾನ್, ರಂಗಪ್ರಸಾದ್ ಎಂಬ ಮೂವರು ಹಾಗೂ ಬೆಂಗಳೂರಿನ ಕೊಲೆ ಆರೋಪಿಯೊಬ್ಬ ಜೈಪರಮೇಶ್ ಸೇರಿ ನಾಲ್ವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: BSNL ಟವರ್‌ಗೆ ಜಾಗ ನೀಡಿದ ಆದೇಶ ವಾಪಸ್ ಪಡೆದ ಉತ್ತರ ಕನ್ನಡ ಡಿಸಿ
Advertisement
Advertisement
ಶ್ರೀಲಂಕಾದಲ್ಲಿ ಈ ಮೂವರ ಮೇಲೂ ಸಾಕಷ್ಟು ಕೊಲೆ ಕೇಸ್‌ಗಳಿವೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಅಮಿಲಾ ನುವಾನ್ ಮೇಲೆ ಐದು ಕೊಲೆ ಕೇಸ್, ಕಾಸಿನ್ ಕುಮಾರ್ ಸನಕ ಮೇಲೆ ನಾಲ್ಕು ಮರ್ಡರ್ ಕೇಸ್ ಹಾಗೂ ರಂಗಪ್ರಸಾದ್ ಮೇಲೆ ಎರಡು ಆಫ್ ಮರ್ಡರ್ ಕೇಸ್ ಮತ್ತು ಕೊಲೆ ಕೇಸ್ ಇರೋದು ತನಿಖೆ ವೇಳೆ ತಿಳಿದುಬಂದಿದೆ. ಶ್ರೀಲಂಕಾ ಅಂಡರ್ ವರ್ಲ್ಡ್‌ನಲ್ಲಿ ಕುಖ್ಯಾತಿ ಪಡೆದಿರುವ ಈ ಮೂವರೂ ಶ್ರಿಲಂಕಾದಿಂದ ಬೋಟ್‌ನಲ್ಲಿ ಭಾರತದ ಕೋಸ್ಟ್ ಗಾರ್ಡ್ ನೌಕಾಪಡೆ ಕಣ್ತಪ್ಪಿಸಿ ಬಂದಿದ್ದಾರೆ. ಚೆನ್ನೈ ಬಳಿ ಸಮುದ್ರ ತೀರದ ಮೂಲಕ ಭಾರತಕ್ಕೆ ಬಂದವರು ಚೆನ್ನೈನಿಂದ ರಸ್ತೆ ಮಾರ್ಗದಿಂದ ಬೆಂಗಳೂರಿಗೆ ಎಂಟರ್ ಆಗಿರುವುದು ತನಿಖೆ ವೇಳೆ ಗೊತ್ತಾಗಿದೆ. ಇವರ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದೇ ರೋಚಕ. ಕೊಲೆ ಆರೋಪಿಗಳ ಬಗ್ಗೆ ಮಾಹಿತಿ ಪಡೆದು ವಿಚಾರಣೆ ನಡೆಸುತ್ತಿದ್ದ ಸಿಸಿಬಿ ಟೀಂ ಕೈಗೆ 2016ರಲ್ಲಿ ಹೆಚ್‌ಎಎಲ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಮಾಡಿದ್ದ ಜೈಪರಮೇಶ್ ಸಿಕ್ಕಿದ್ದ. ಆತನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಈ ಸುಪಾರಿ ಕಿಲ್ಲರ್‌ಗಳಿಗೆ ತಾನೇ ಆಶ್ರಯ ಕೊಟ್ಟಿರುವುದಾಗಿ ಬಾಯ್ಬಿಟ್ಟಿದ್ದ.
Advertisement
Advertisement
ಈ ಆರೋಪಿಗಳಿಗೆ ಓರ್ವ ಲೀಡರ್ ಇರುವುದು ಕೂಡ ತನಿಖೆ ವೇಳೆ ಗೊತ್ತಾಗಿದ್ದು, ಒಮಾನ್ ದೇಶದಲ್ಲಿ ಅರೆಸ್ಟ್ ಆಗಿರುವ ಜಲಾನ್‌ಗೆ ಇವರ ನೇರ ಲಿಂಕ್ ಇರೋದು ಗೊತ್ತಾಗಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾದ ಕಾಂಟ್ಯಾಕ್ಟ್ ಇರುವ ಜುಲಾನ್ ಡ್ರಗ್ಸ್ ಟ್ರಾಫಿಕಿಂಗ್‌ನಲ್ಲಿ ತೊಡಗಿರುವ ಆರೋಪಿ. ಈತನಿಗೆ ಶ್ರೀಲಂಕಾದ ಎಲ್‌ಟಿಟಿಇ ಲಿಂಕ್ ಇರುವ ಶಂಕೆ ಕೂಡ ಇದೆ. ಈ ಜಲಾನ್ ಆಜ್ಞೆ ಮೇರೆಗೆ ಈ ಮೂವರಿಗೂ ಜೈಪರಮೇಶ್ ಯಲಹಂಕ ಬಳಿಯ ವಿಶ್ವ ಪ್ರಕೃತಿ ಅಪಾರ್ಟ್ಮೆಂಟ್‌ನ 203 ರಲ್ಲಿ ಫ್ಲ್ಯಾಟ್ ಕೊಟ್ಟಿದ್ದ ಎನ್ನುವುದು ತನಿಖೆ ವೇಳೆ ಪತ್ತೆಯಾಗಿದೆ. ಇದನ್ನೂ ಓದಿ: ತಮಿಳುನಾಡು ಕೇಳಿದಷ್ಟು ನೀರು ಹರಿಸಲು ಸಾಧ್ಯವಿಲ್ಲ: ಅಫಿಡವಿಟ್‌ನಲ್ಲಿ ಕರ್ನಾಟಕ ಹೇಳಿದ್ದೇನು?
ಸಿಸಿಬಿ ಪೊಲೀಸರ ದಾಳಿ ವೇಳೆ ಆರೋಪಿಗಳ ಬಳಿ ಒಂದಷ್ಟು ದಾಖಲೆಗಳು ಸಿಕ್ಕಿವೆ. 13 ಮೊಬೈಲ್‌ಗಳು, ಶ್ರೀಲಂಕಾದ ಕೆಲ ದಾಖಲೆಗಳು, ಗುರುತಿನ ಚೀಟಿ ಜೆರಾಕ್ಸ್, ವಿಸಿಟಿಂಗ್ ಕಾರ್ಡ್‌ಗಳು ಸೇರಿದಂತೆ ಒಂದಷ್ಟು ದಾಖಲೆಗಳು ಪತ್ತೆಯಾಗಿವೆ. ಸದ್ಯ ಎಲ್ಲವನ್ನೂ ವಶಕ್ಕೆ ಪಡೆದಿರುವ ಸಿಸಿಬಿ ಟೀಂ, ಮೂವರನ್ನೂ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ನಂತರವೇ ಇವರು ಬೆಂಗಳೂರಿನಲ್ಲಿ ಯಾಕಿದ್ದರು? ಇಲ್ಲೇನಾದರು ಕೃತ್ಯ ಎಸಗುವುದಕ್ಕೆ ಪ್ಲಾನ್ ಮಾಡಿದ್ರಾ? ಇವರ ನೆಕ್ಸ್ಟ್ ಮೂಮೆಂಟ್ ಏನಿತ್ತು ಎನ್ನುವುದು ಗೊತ್ತಾಗಬೇಕಿದೆ.
Web Stories