ಕೊಲಂಬೊ: ಅಕ್ಟೋಬರ್ 5 ರಿಂದ ಭಾರತದಲ್ಲಿ ಆರಂಭವಾಗಲಿರುವ ಏಕದಿನ ವಿಶ್ವಕಪ್ (World Cup 2023) ಟೂರ್ನಿಗೂ ಮುನ್ನವೇ ಶ್ರೀಲಂಕಾ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಲಂಕಾ ತಂಡದ ಸ್ಪಿನ್ ಮಾಂತ್ರಿಕ ವಾನಿಂದು ಹಸರಂಗ ಗಾಯದ ಸಮಸ್ಯೆಗೆ (Wanindu Hasaranga Injury) ತುತ್ತಾಗಿದ್ದು, ವಿಶ್ವಕಪ್ ಟೂರ್ನಿಯಿಂದ ಬಹುತೇಕ ಹೊರಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಸರಂಗ ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆಯೇ ಇಲ್ಲವೇ ಎಂಬುದನ್ನ ಪರಿಶೀಲಿಸಲು ಶ್ರೀಲಂಕಾ (Sri Lanka) ವಿದೇಶಿ ವೈದ್ಯರೊಂದಿಗೆ (Doctors) ಸಮಾಲೋಚನೆ ನಡೆಸುತ್ತಿದೆ. ಒಂದು ವೇಳೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದರೇ ಅವರು ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಬಾಬರ್ ಆಜಂ ಬಳಿಕ ನವೀನ್ ಉಲ್ ಹಕ್‌ನನ್ನ ಹೊಗಳಿದ ಗಂಭೀರ್ – ಕಾಲೆಳೆದ ಕೊಹ್ಲಿ ಫ್ಯಾನ್ಸ್
ಕಳೆದ ಆಗಸ್ಟ್ ತಿಂಗಳಲ್ಲಿ ಲಂಕಾ ಪ್ರೀಮಿಯರ್ ಲೀಗ್ ವೇಳೆ ಹಸರಂಗ ಮಂಡಿರಜ್ಜು ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಆದ್ದರಿಂದ ಏಷ್ಯಾಕಪ್ ವೇಳೆಯೂ ತಂಡದಿಂದ ಹೊರಗುಳಿದಿದ್ದರು. ಇದೀಗ 2023ರ ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸುತ್ತಿರುವ ಶ್ರೀಲಂಕಾ ತಂಡ ಅ.7 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇದನ್ನೂ ಓದಿ: Asian Games 2023: ಕ್ರಿಕೆಟ್‌ನಲ್ಲಿ ಚಿನ್ನ – ಇತಿಹಾಸ ನಿರ್ಮಿಸಿದ ಭಾರತದ ಮಹಿಳೆಯರು
ಈ ಪಂದ್ಯದಲ್ಲಿ ಪಾಲ್ಗೊಳ್ಳಲು ಹಸರಂಗ ಫಿಟ್‌ನೆಸ್ ಸಾಬೀತು ಮಾಡಬೇಕಿದೆ. ಆದ್ದರಿಂದ ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆಯೇ ಇಲ್ಲವೇ ಎಂಬುದನ್ನ ತಿಳಿಯಲು ವಿದೇಶಿ ವೈದ್ಯರನ್ನ ಸಂಪರ್ಕಿಸಲಾಗುತ್ತಿದೆ. ಒಂದು ವೇಳೆ ಅವರಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದರೆ ಕನಿಷ್ಠ 3 ತಿಂಗಳು ವಿಶ್ರಾಂತಿ ಪಡೆಯಬೇಕಾಗುತ್ತದೆ. ಜೊತೆಗೆ ವಿಶ್ವಕಪ್ ಟೂರ್ನಿಯಿಂದಲೂ ಹೊರಗುಳಿಯಬೇಕಾಗುತ್ತದೆ ಎಂದು ಶ್ರೀಲಂಕಾ ವೈದ್ಯಕೀಯ ಸಮಿತಿಯ ಮುಖ್ಯಸ್ಥ ಅರ್ಜುನ ಡಿ ಸಿಲ್ವಾ ತಿಳಿಸಿದ್ದಾರೆ. ಇದನ್ನೂ ಓದಿ: Asian Games : ಶೂಟಿಂಗ್‌ನಲ್ಲಿ ವಿಶ್ವದಾಖಲೆ – ಚಿನ್ನ ಗೆದ್ದ ಭಾರತದ ಪುರುಷರು
ಇದೇ ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ಭಾರತದ ವಿವಿಧ ಸ್ಥಳಗಳಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]