ಕೊಲಂಬೊ: ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ಕೈ ಮೀರುತ್ತಿದ್ದು ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗುತ್ತಿವೆ. ಇಂಧನ ಬೆಲೆಯಂತೂ ರಾಕೆಟ್ ವೇಗದಲ್ಲಿ ಹೆಚ್ಚಾಗುತ್ತಿದೆ. ಕಳೆದ ಎರಡು ವಾರಗಳಲ್ಲಿ ಲಂಕಾ ಸರ್ಕಾರ ಮೂರು ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ.
ಇದೀಗ ಮತ್ತೆ ಪೆಟ್ರೋಲ್ ಬೆಲೆ ಶೇ.22 ರಷ್ಟು ಹಾಗೂ ಡೀಸೆಲ್ ಬೆಲೆ ಶೇ.15ರಷ್ಟು ಏರಿಸಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 460 ರೂ. ಹಾಗೂ ಪೆಟ್ರೋಲ್ ಬೆಲೆ 550 ರೂ.ಗೆ ತಲುಪಿದೆ. ಇದನ್ನೂ ಓದಿ: ನಾನೂ ಸೈನಿಕನಂತೆ ಹೋರಾಡಿದ್ದೆ – ಮನ್ ಕಿ ಬಾತ್‌ನಲ್ಲಿ 1975ರ ತುರ್ತು ಪರಿಸ್ಥಿತಿ ನೆನಪಿಸಿಕೊಂಡ ಮೋದಿ
ಇಂದು ಮಧ್ಯಾಹ್ನ 2 ಗಂಟೆಯಿಂದಲೇ ಶ್ರೀಲಂಕಾದಲ್ಲಿ ಇಂಧನ ಬೆಲೆ ಏರಿಕೆಯಾಗಿದೆ ಎಂದು ಸಾರ್ವಜನಿಕ ವಲಯದ ಕಂಪನಿ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ ತಿಳಿಸಿದೆ. ಲಂಕಾದ ಐಒಸಿ ಸಹ ಅದೇ ಪ್ರಮಾಣದಲ್ಲಿ ಬೆಲೆಯನ್ನು ಹೆಚ್ಚಿಸಿದೆ. ಇದನ್ನೂ ಓದಿ: ನೈಟ್‍ಕ್ಲಬ್‍ನಲ್ಲಿ 20 ಯುವಕರ ನಿಗೂಢ ಸಾವು
ಕಳೆದ ವಾರ ಬರಬೇಕಿದ್ದ ತೈಲವು ಲಂಕಾವನ್ನು ತಲುಪಿಲ್ಲ. ಅಲ್ಲದೆ ಮುಂದಿನ ವಾರ ನಿಗದಿಪಡಿಸಿದ ಸರಕಗಳೂ ಸಹ ಬರುವುದಿಲ್ಲ ಈ ರೀತಿಯ ಬ್ಯಾಂಕಿಂಗ್ ಕಾರಣಗಳಿಂದಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ ಎಂದು ಲಂಕಾದ ಇಂಧನ ಸಚಿವರಾದ ಕಾಂಚನಾ ವಿಜೆಶೇಖರ ಹೇಳಿದ್ದಾರೆ.
ವಿದೇಶಿ ವಿನಿಮಯ ಮಿತಿ ಕಡಿತ: ವಿದೇಶಿ ವಿನಿಮಯದ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾದಲ್ಲಿ, ಒಬ್ಬ ವ್ಯಕ್ತಿಯು ವೈಯಕ್ತಿಕವಾಗಿ ಇಡಬಹುದಾದ ವಿದೇಶಿ ವಿನಿಮಯದ ಮಿತಿಯನ್ನು ಕಡಿತಗೊಳಿಸಲಾಗಿದೆ. ಇದನ್ನೂ ಓದಿ: ಮಂಕಿಪಾಕ್ಸ್ ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿಯಲ್ಲ, ಆದರೆ ಹರಡುವ ಭೀತಿಯಿದೆ: WHO
ಯುಸ್‌ನೊಂದಿಗೆ ಮಾತುಕತೆ: ಲಂಕಾದ ಆರ್ಥಿಕ ಬಿಕ್ಕಟ್ಟು ಪರಿಹರಿಸುವ ಸಲುವಾಗಿ ಅಗತ್ಯ ಶ್ರೀಲಂಕನ್ನರನ್ನು ಬೆಂಬಲಿಸಲು ಅಮೆರಿಕಾ ಅತ್ಯಂತ ಪರಿಣಾಮಕಾರಿ ಮಾರ್ಗಗಳನ್ನು ಅನ್ವೇಶಿಸಲು ಮಾತುಕತೆಗೆ ಕರೆದಿದೆ.
ಅಮೆರಿಕವು ಕಳೆದ ಎರಡು ವಾರಗಳಲ್ಲಿ ಶ್ರೀಲಂಕಾಗೆ 158.75 ಮಿಲಿಯನ್ ಡಾಲರ್‌ಗಳಷ್ಟು ಹಣಕಾಸು ಒದಗಿಸಿದೆ. ದುರ್ಬಲ ವರ್ಗದವರ ಆಹಾರಕ್ಕಾಗಿ 47 ಮಿಲಿಯನ್ ಡಾಲರ್‌ಗಳನ್ನು ಸಂಗ್ರಹಿಸಲು ಈಗಾಗಲೇ ತುರ್ತು ಮನವಿಯನ್ನು ನೀಡಿದೆ ಎಂದು ರಾಯಭಾರಿ ಹೇಳಿದ್ದಾರೆ.