InternationalLatestMain Post

ಚೀನಾದ ಸರ್ವೇಕ್ಷಣಾ ಹಡಗಿಗೆ ಲಂಕಾ ಪ್ರವೇಶಕ್ಕೆ ಅನುಮತಿ – ಭಾರತಕ್ಕೆ ಕಳವಳ

ಕೊಲಂಬೋ: ಭಾರತದ ಸೇನಾ ನೆಲೆಗಳ ಮೇಲೆ ಚೀನಾ ಕಣ್ಣಿಡುವ ಭೀತಿಯ ನಡುವೆಯೇ ಚೀನಾದ ಸರ್ವೇಕ್ಷಣಾ ಹಡಗಿಗೆ ಶ್ರೀಲಂಕಾ ಪ್ರವೇಶಿಸಲು ಅನುಮತಿ ದೊರೆತಿದೆ. ಶನಿವಾರ ಶ್ರೀಲಂಕಾ ಸರ್ಕಾರ ಚೀನಾದ ನೌಕೆಗೆ ದ್ವೀಪವನ್ನು ಪ್ರವೇಶಿಸಲು ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀಲಂಕಾ ದಡಕ್ಕೆ ಬರುತ್ತಿರುವ ಚೀನಾದ ಯುವಾನ್ ವಾಂಗ್ 5 ಹಡಗು ಸಂಶೋಧನೆ ಹಾಗೂ ಸಮೀಕ್ಷೆ ನಡೆಸುವ ಸಲುವಾಗಿ ಆಗಮಿಸುತ್ತಿದೆ ಎನ್ನಲಾಗಿದೆ. ಆದರೆ ಈ ಹಡಗು 2 ರೀತಿಯ ಕೆಲಸ ಮಾಡಬಲ್ಲ ಪತ್ತೇದಾರಿ ಹಡಗು ಎಂದು ಭಾರತ ಕಳವಳ ವ್ಯಕ್ತಪಡಿಸುತ್ತಿದೆ. ಇದನ್ನೂ ಓದಿ: ಕೋವಿಡ್ ಏರಿಳಿತ; ರಾಜ್ಯದಲ್ಲಿಂದು 1,329 ಮಂದಿಗೆ ಕೊರೊನಾ – ಮೂರೇ ದಿನಗಳಲ್ಲಿ 16 ಜೀವ ಬಲಿ

ಯುವಾನ್ ವಾಂಗ್ ಹಡಗು ಜುಲೈ 13 ರಂದು ಚೀನಾದಿಂದ ಹೊರಟಿತ್ತು. ಇದರ ಆಗಮನಕ್ಕೆ ಶ್ರೀಲಂಕಾ ಈಗಾಗಲೇ ಅನುಮತಿ ನೀಡಿದ್ದು, ಇದು ಆಗಸ್ಟ್ 17ರ ವರೆಗೂ ಶ್ರೀಲಂಕಾದಲ್ಲಿಯೇ ಉಳಿಯುವ ಸಾಧ್ಯತೆಗಳಿವೆ. ಇದನ್ನೂ ಓದಿ: ತಮಿಳುನಾಡು ಸಚಿವರ ಕಾರಿಗೆ ಚಪ್ಪಲಿ ಎಸೆತ – 5 ಬಿಜೆಪಿ ಕಾರ್ಯಕರ್ತರ ಬಂಧನ

ದುರಾಲೋಚನೆಯನ್ನು ಮೈಗೂಡಿಸಿಕೊಂಡಿರುವ ಚೀನಾ ತನ್ನ ಸ್ಥಾನವನ್ನು ಭದ್ರಪಡಿಸಲು ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲದು ಎಂಬುದು ಎಲ್ಲರಿಗೂ ತಿಳಿದಿದೆ. ಇದೀಗ ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಉಪಸ್ಥಿತಿ ಹಾಗೂ ಶ್ರೀಲಂಕಾದ ವರ್ತನೆ ಭಾರತವನ್ನು ಗೊಂದಲಕ್ಕೀಡು ಮಾಡಿದೆ.

Live Tv

Leave a Reply

Your email address will not be published.

Back to top button