ಕೊಲಂಬೋ: ಶ್ರೀಲಂಕಾ ತನ್ನ ಸ್ವತಂತ್ರ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಇದೀಗ ಎದುರಿಸುತ್ತಿದೆ. ಆಹಾರದಿಂದ ಹಿಡಿದು ಅಡುಗೆ ಅನಿಲದವರೆಗಿನ ತೀವ್ರವಾದ ಕೊರತೆಯನ್ನು ದ್ವೀಪರಾಷ್ಟ್ರ ಅನುಭವಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಶೇ.30 ರಷ್ಟು ಏರಿಕೆಯಾಗಿದ್ದು, ಸಾಮಾಜಿಕವಾಗಿ ಅಶಾಂತಿ, ರಾಜಕೀಯ ಪ್ರಕ್ಷುಬ್ಧತೆ ಉಂಟಾಗಿದೆ.
ಇದೀಗ ಕೈಗೆಟಕುವಷ್ಟು ದೂರದಲ್ಲಿ ಇಂಧನ ಹೊತ್ತ ಹಡಗುಗಳು ಪಾವತಿಗಾಗಿ ಕಾಯುತ್ತಿದ್ದರೂ ಶ್ರೀಲಂಕಾದ ಬಳಿ ಡಾಲರ್‌ಗಳಿಲ್ಲದ ಕಾರಣ ಖರೀದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶ್ರೀಲಂಕಾ ಸರ್ಕಾರ ತನ್ನ ನಾಗರಿಕರಲ್ಲಿ ಇಂಧನ ಕೊಳ್ಳಲು ಸರದಿ ಸಾಲಿನಲ್ಲಿ ನಿಲ್ಲದಂತೆ ಕೇಳಿಕೊಂಡಿದೆ. ಇದನ್ನೂ ಓದಿ: ಹಾಲಿ ಓಬಿಸಿ ನೀತಿಯಡಿ ಬಿಬಿಎಂಪಿ ಚುನಾವಣೆ ನಡೆಸಿ – ಸುಪ್ರೀಂ ಮರು ಆದೇಶ
Advertisement
Advertisement
ನಮ್ಮ ನೀರಿನಲ್ಲಿ ಪೆಟ್ರೋಲ್ ಹಡಗು ಇದೆ. ಆದರೆ ಹಡಗಿಗೆ ಪಾವತಿಸಲು ವಿದೇಶೀ ವಿನಿಮಯ ಹೊಂದಿಲ್ಲ ಎಂದು ಇಂಧನ ಸಚಿವ ಕಾಂಚನಾ ವಿಜೆಶೇಖರ್ ಬುಧವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.
Advertisement
ನಮ್ಮಲ್ಲಿ ಸದ್ಯ ಡೀಸೆಲ್‌ನಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ ಪೆಟ್ರೋಲ್‌ನ ಸೀಮಿತ ದಾಸ್ತಾನು ಇದೆ. ಮಾರ್ಚ್ 28ರಿಂದ ಪೆಟ್ರೋಲ್ ಹೊತ್ತಿರುವ ಹಡಗು ಇಲ್ಲಿನ ಸಮುದ್ರದಲ್ಲಿ ವಿನಿಮಯಕ್ಕೆ ಕಾದು ಕುಳಿತಿದೆ. ಆದರೆ ಪೆಟ್ರೋಲ್ ಪಡೆಯುವುದಕ್ಕಾಗಿ ಹಡಗಿಗೆ ಪಾವತಿಸಲು ನಮ್ಮಲ್ಲಿ ಅಮೇರಿಕನ್ ಡಾಲರ್‌ಗಳಿಲ್ಲ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 122 ಕೇಸ್ – ಇಂದು ದಾಖಲಾಯಿತು ಏಕೈಕ ಮರಣ ಪ್ರಕರಣ
Advertisement
ಈ ಹಿನ್ನೆಲೆಯಲ್ಲಿ ವಿಜೆಶೇಖರ್, ನಾವು ಪೆಟ್ರೋಲ್‌ನ ಸೀಮಿತ ದಾಸ್ತಾನು ಹೊಂದಿದ್ದೇವೆ. ಅದನ್ನು ಅಗತ್ಯ ಸೇವೆಗಳಿಗೆ, ವಿಶೇಷವಾಗಿ ಅಂಬುಲೆನ್ಸ್ಗಳಿಗೆ ಉಪಯೋಗಕ್ಕೆ ವಿತರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.