ಕೊಲಂಬೋ: ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತ ಅಕ್ಕಿ, ಔಷಧ, ಹಾಲಿನ ಪುಡಿ ಹೀಗೆ ಅಗತ್ಯ ವಸ್ತುಗಳನ್ನು ಕಳುಹಿಸಿದೆ. ಭಾನುವಾರ ದ್ವೀಪರಾಷ್ಟ್ರದ ರಾಜಧಾನಿ ಕೊಲಂಬೋ ತಲುಪಿದ ಹಡಗು, ಅಗತ್ಯ ವಸ್ತುಗಳನ್ನು ಶ್ರೀಲಂಕಾ ಸರ್ಕಾರಕ್ಕೆ ಹಸ್ತಾಂತರಿಸಿದೆ.
9,000 ಮೆಟ್ರಿಕ್ ಟನ್ ಅಕ್ಕಿ, 50 ಮೆಟ್ರಿಕ್ ಟನ್ ಹಾಲಿನ ಪುಡಿ ಹಾಗೂ 25 ಮೆಟ್ರಿಕ್ ಟನ್‌ಗಿಂತ ಹೆಚ್ಚು ಔಷಧಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ಭಾರತೀಯ ಹೈಕಮಿಷನರ್ ಗೋಪಾಲ್ ಬಾಗ್ಲೆ ಲಂಕಾದ ವಿದೇಶಾಂಗ ಸಚಿವ ಜಿಎಲ್ ಪೀರಿಸ್ ಅವರಿಗೆ ಹಸ್ತಾಂತರಿಸಿದರು. ಇದನ್ನೂ ಓದಿ: ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ನಿಷೇಧಿಸಿದ ಸೌದಿ ಅರೇಬಿಯಾ
Advertisement
Sri Lanka today received Rs. 2 Billion worth Humanitarian aid including milk powder, rice and medicines from India. Our sincere gratitude to the Tamil Nadu Chief Minister Hon. @mkstalin and the People of India for the support extended (1/2)
— Ranil Wickremesinghe (@RW_UNP) May 22, 2022
Advertisement
ಶ್ರೀಲಂಕಾ ಇಂದು ಭಾರತದಿಂದ ಹಾಲಿನ ಪುಡಿ, ಅಕ್ಕಿ ಹಾಗೂ ಔಷಧ ಸೇರಿದಂತೆ 200 ಕೋಟಿ ರೂ. ಮೌಲ್ಯದ ಮಾನವೀಯ ನೆರವು ಪಡೆದಿದೆ. ಈ ಸಹಾಯಕ್ಕೆ ತಮಿಳುನಾಡು ಮುಖ್ಯಮಂತ್ರಿಯವರಿಗೆ ಹಾಗೂ ಭಾರತಕ್ಕೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಭಾರೀ ಮಳೆ- ವಿಮಾನ ಸಂಚಾರದಲ್ಲಿ ತೊಡಕು
Advertisement
A message of care!!! From the people of ???????? to the people of ????????…High Commissioner handed over rice,milk powder& medicines worth more than SLR 2 billion to Hon’ble FM Prof.G.L Peiris in #Colombo today.Hon’ble Minister @nimaldsilva, @VajiraAbey, @SagalaRatnayaka, @S_Thondaman pic.twitter.com/WNDoSiQPjE
— India in Sri Lanka (@IndiainSL) May 22, 2022
Advertisement
ಭಾರತದ ಜನರು ಶ್ರೀಲಂಕಾದ ಜನರಿಗೆ 200 ಕೋಟಿ ರೂ.ಗೂ ಅಧಿಕ ಮೌಲ್ಯದ ಅಕ್ಕಿ, ಹಾಲಿನ ಪುಡಿ, ಔಷಧಿಯನ್ನು ನೀಡಿದೆ. ಇದನ್ನು ಕೊಲಂಬೋದಲ್ಲಿ ಜಿಎಲ್ ಪೀರೀಸ್ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನರ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆಯಲಾಗಿದೆ.