ಸಿಡ್ನಿ: ಅತ್ಯಾಚಾರ ಆರೋಪದಿಂದಾಗಿ ಸಿಡ್ನಿ ಜೈಲು ಸೇರಿದ್ದ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ (Danushka Gunathilaka) ಅವರಿಗೆ 11 ದಿನಗಳ ಬಳಿಕ ಸಿಡ್ನಿ (Sydney) ನ್ಯಾಯಾಲಯ ಷರತ್ತುಬದ್ಧ ಜಾಮೀನು (Bail) ಮಂಜೂರು ಮಾಡಿದೆ.
ಶ್ರೀಲಂಕಾದ ಟಿ20 ವಿಶ್ವಕಪ್ ತಂಡದಲ್ಲಿದ್ದ (T20 World Cup) ಗುಣತಿಲಕ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು. ಅವರ ಬದಲಿಗೆ ಬೇರೆ ಆಟಗಾರನನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ನಂತರ ಟೀಮ್ ಮ್ಯಾನೇಜ್ ಮೆಂಟ್ ಸಲಹೆ ಮೇರೆಗೆ ಗುಣತಿಲಕ ಆಸ್ಟ್ರೇಲಿಯಾದಲ್ಲೇ ಉಳಿದುಕೊಂಡಿದ್ದರು. ಈ ವೇಳೆ ದನುಷ್ಕ ಗುಣತಿಲಕ ಅವರನ್ನು ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾದ 29 ವರ್ಷದ ಮಹಿಳೆ, ಅತ್ಯಾಚಾರದ ಆರೋಪ ಹೊರಿಸಿದ್ದರು. ನಂತರ ನವೆಂಬರ್ 6 ರಂದು ಸಿಡ್ನಿಯ ಸಸೆಕ್ಸ್ ಸ್ಟ್ರೀಟ್ ಹೋಟೆಲ್‍ನಿಂದ ಪೊಲೀಸರು ಗುಣತಿಲಕರನ್ನು ಬಂಧಿಸಿದ್ದರು. ಇದನ್ನೂ ಓದಿ: ಇಂಡಿಯಾ, ನ್ಯೂಜಿಲೆಂಡ್ ಕ್ರಿಕೆಟ್ ಸರಣಿ – ಡಿ.ಡಿ ಸ್ಪೋರ್ಟ್ಸ್‌ನಲ್ಲಿ ಮಾತ್ರ ನೇರ ಪ್ರಸಾರ
ಬಂಧನದ ನಂತರ ಅವರನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಸಿಡ್ನಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಕೋರ್ಟ್ ಜಾಮೀನು ನಿರಾಕರಿಸಿತ್ತು. ಇದರಿಂದ ದನುಷ್ಕ ಗುಣತಿಲಕ 11 ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದರು. ಇಂದು ಸಿಡ್ನಿಯ ಸ್ಥಳೀಯ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸಹಕಾರದೊಂದಿಗೆ ಜಾಮೀನು ಮಂಜೂರಾಗಿದ್ದು ಸಿಡ್ನಿ ನ್ಯಾಯಾಲಯ 1 ಕೋಟಿ ರೂ. ಠೇವಣಿ ಇಟ್ಟು ಜಾಮೀನು ನೀಡಿದ್ದು, ಜೊತೆಗೆ ಟಿಂಡರ್ ಸೇರಿದಂತೆ ಯಾವುದೇ ಇತರ ಡೇಟಿಂಗ್ ಅಪ್ಲಿಕೇಶನ್‍ಗಳನ್ನು ಬಳಸದಿರುವಂತೆ ಷರತ್ತು ವಿಧಿಸಿದೆ. ಪ್ರತಿದಿನ 2 ಬಾರಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಸ್‍ಪೋರ್ಟ್‍ನೊಂದಿಗೆ ಸಿಡ್ನಿ ಪೊಲೀಸ್ ಠಾಣೆಗೆ ಗುಣತಿಲಕ ಹಾಜರಾಗಬೇಕು. ಮತ್ತು ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಮನೆಯಿಂದ ಹೊರ ಹೋಗದಂತೆ ನಿಷೇಧ ಹೇರಿದೆ. ಇದನ್ನೂ ಓದಿ: ಅತ್ಯಾಚಾರ ಆರೋಪ – ಎಲ್ಲ ಮಾದರಿಯ ಕ್ರಿಕೆಟ್‌ನಿಂದ ದನುಷ್ಕ ಅಮಾನತು
ಜೀವಾವಧಿ ಶಿಕ್ಷೆಯ ತೂಗುಗತ್ತಿ:
ಗುಣತಿಲಕ ಮೇಲೆ ಮಹಿಳೆ ಮಾಡಿದ್ದ ಆರೋಪವೇನಾದರೂ ಸಾಭೀತಾಗಿದ್ದರೆ, ಆಸ್ಟ್ರೇಲಿಯಾದ ಕಾನೂನಿನ ಪ್ರಕಾರ ಜೀವಾವಧಿ ಶಿಕ್ಷೆ ಖಚಿತವಾಗುತ್ತಿತ್ತು. ಆದರೆ ಇದೀಗ ನ್ಯಾಯಾಲಯ ಜಾಮೀನು ನೀಡಿದೆ. ಆರೋಪ ಸಾಭೀತಾದರೆ ಮುಂದಿನ ಕ್ರಮದ ಬಗ್ಗೆ ಸಾಕಷ್ಟು ಕುತೂಹಲವಿದೆ. ಗುಣತಿಲಕರನ್ನು ಈಗಾಗಲೇ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದಲೂ ಅಮಾನತುಗೊಳಿಸಿದೆ. ಇದನ್ನೂ ಓದಿ: ರಿಟೈನ್ ಪಟ್ಟಿಯಲ್ಲಿ RCB ಗೇಮ್ ಪ್ಲಾನ್ – 10 ತಂಡಗಳ ರಿಟೈನ್-ರಿಲೀಸ್ ಲಿಸ್ಟ್