– 6 ದಿನಗಳ ಟೆಸ್ಟ್ ಪಂದ್ಯ ನಡೆಯುತ್ತಿರುವುದು ಇದೇ ಮೊದಲಲ್ಲ
– ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ 6 ದಿನದ ಪಂದ್ಯ
ಕೊಲಂಬೊ: ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ ಎರಡು ಟೆಸ್ಟ್‌ಗಳ ಸರಣಿಯ (NZ vs SL Test Series) ಮೊದಲ ಪಂದ್ಯ 6 ದಿನಗಳ ಕಾಲ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಟೆಸ್ಟ್ ಪಂದ್ಯ 5 ದಿನ ಮಾತ್ರ, 6 ದಿನ ಹೇಗೆ ಎಂದು ಅಚ್ಚರಿಪಡಬೇಡಿ. ಸೆಪ್ಟೆಂಬರ್ 18 ರಂದು ಪ್ರಾರಂಭವಾಗುವ ಮೊದಲ ಶ್ರೀಲಂಕಾ – ನ್ಯೂಜಿಲೆಂಡ್ ಟೆಸ್ಟ್ ಆರು ದಿನಗಳ ಕಾಲ ನಡೆಯಲಿದ್ದು, ಸೆಪ್ಟೆಂಬರ್ 21 ರಂದು ವಿಶ್ರಾಂತಿ ದಿನ ನಿಗದಿಪಡಿಸಲಾಗಿದೆ.
ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆ (Sri Lanka Presidential Election) ಸೆಪ್ಟೆಂಬರ್ 21ರಂದು ನಡೆಯಲಿದ್ದು ಅಂದು ದಿನದಾಟ ನಡೆಯುವುದಿಲ್ಲ. ಆದರೆ ಸೆ.22ರಿಂದ ಟೆಸ್ಟ್ ಪಂದ್ಯ ಮುಂದುವರೆಯಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೇಳಿದೆ. ಇದನ್ನೂ ಓದಿ: ಜಯ್ ಶಾ ಮುಂದಿನ ಐಸಿಸಿ ಅಧ್ಯಕ್ಷ? – ಆಸೀಸ್, ಇಂಗ್ಲೆಂಡ್ ಬೆಂಬಲ
Advertisement
Advertisement
ಶ್ರೀಲಂಕಾ ಕ್ರಿಕೆಟ್ (SLC) ಶುಕ್ರವಾರ ನ್ಯೂಜಿಲೆಂಡ್ ವಿರುದ್ಧದ ಮುಂಬರುವ 2 ಪಂದ್ಯಗಳ ಟೆಸ್ಟ್ ಸರಣಿಯ ಪಂದ್ಯಗಳ ವೇಳಾ ಪಟ್ಟಿಯನ್ನು ಪ್ರಕಟಿಸಿದ್ದು, ಎರಡೂ ಪಂದ್ಯಗಳು ಗಾಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ (JICS) ನಡೆಯಲಿದೆ. ಸರಣಿಯ ಮೊದಲ ಪಂದ್ಯವು ಸೆಪ್ಟೆಂಬರ್ 18 ರಂದು ಪ್ರಾರಂಭವಾಗಲಿದ್ದು, ಆರು ದಿನಗಳ ಕಾಲ ನಡೆಯಲಿದೆ. ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಸೆಪ್ಟೆಂಬರ್ 26ರಂದು ಆರಂಭವಾಗಲಿದೆ. ಇದನ್ನೂ ಓದಿ: ಇಂಗ್ಲೆಂಡ್ ತಂಡದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಪುತ್ರ
Advertisement
Advertisement
ಇದೇ ಮೊದಲಲ್ಲ!
ಟೆಸ್ಟ್ ಪಂದ್ಯವೊಂದರಲ್ಲಿ ವಿಶ್ರಾಂತಿ ದಿನವನ್ನು ಸೇರಿಸಿರುವುದು ಇದೇ ಮೊದಲಲ್ಲ. ಕಳೆದ ಶತಮಾನದ ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಸಾಮಾನ್ಯವಾಗಿತ್ತು, ಇಂಗ್ಲೆಂಡ್‌ನಲ್ಲಿ ಆರು ದಿನಗಳ ಕಾಲ ಅನೇಕ ಪಂದ್ಯಗಳನ್ನು ಆಡಲಾಗುತ್ತಿತ್ತು. ಕೆಲವು ಬಾರಿ ಭಾನುವಾರ ಆಟಕ್ಕೆ ಒಂದು ದಿನದ ವಿಶ್ರಾಂತಿಯನ್ನು ನೀಡಲಾಗುತ್ತಿತ್ತು.
20 ವರ್ಷಗಳ ನಂತರ ಶ್ರೀಲಂಕಾವು ಆರು ದಿನಗಳ ಟೆಸ್ಟ್ ಪಂದ್ಯದ ಆತಿಥ್ಯ ವಹಿಸಲಿದೆ. 2001ರಲ್ಲಿ ಕೊಲಂಬೋದಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಒಂದು ದಿನದ ಬ್ರೇಕ್ ನೀಡಲಾಗಿತ್ತು. ಅಂದು ಪೋಯಾ ದಿನ (ಹುಣ್ಣಿಮೆ) ಕಾರಣದಿಂದಾಗಿ ವಿಶ್ರಾಂತಿ ದಿನವನ್ನು ನೀಡಿದ್ದರು. ಇದನ್ನೂ ಓದಿ: Ind vs Eng Test | 2025ರ ಭಾರತ – ಇಂಗ್ಲೆಂಡ್ ವೇಳಾಪಟ್ಟಿ ಬಿಡುಗಡೆಗೊಳಿಸಿದ ಬಿಸಿಸಿಐ
2008ರಲ್ಲಿ ಢಾಕಾದಲ್ಲಿ ವಿಶ್ರಾಂತಿ ದಿನದೊಂದಿಗಿನ ಮತ್ತೊಂದು ಟೆಸ್ಟ್ ಪಂದ್ಯ ನಡೆದಿತ್ತು. ಬಾಂಗ್ಲಾದೇಶದ ಸಂಸತ್ ಚುನಾವಣೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ತಂಡ ಶ್ರೀಲಂಕಾದ ವಿರುದ್ಧದ ಪಂದ್ಯವನ್ನು 6 ದಿನಗಳ ಕಾಲ ಆಡಿತ್ತು. 2008ರ ಡಿಸೆಂಬರ್ 29ರಂದು ಚುನಾವಣೆ ಹಿನ್ನೆಲೆಯಲ್ಲಿ ವಿಶ್ರಾಂತಿ ದಿನವಾಗಿ ನಿಗದಿಪಡಿಸಲಾಗಿತ್ತು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಯಾವ ಸ್ಥಾನ?
2023-2025ರ ನಡುವೆ ನಡೆಯುತ್ತಿರುವ ಈ ಟೆಸ್ಟ್ ಪಂದ್ಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಭಾಗವಾಗಿದೆ. ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಕ್ರಮವಾಗಿ ಮೂರು ಮತ್ತು 4ನೇ ಸ್ಥಾನದಲ್ಲಿದೆ.
ಶ್ರೀಲಂಕಾ ವಿರುದ್ಧದ ಪಂದ್ಯದ ಬಳಿಕ ನ್ಯೂಜಿಲೆಂಡ್ ತಂಡ ಭಾರತಕ್ಕೆ ಆಗಮಿಸಲಿದ್ದು ಮೂರು ಪಂದ್ಯಗಳನ್ನು ಆಡಲಿದೆ. ಇದನ್ನೂ ಓದಿ: ಮುಟ್ಟಾಗಿದ್ದರೂ ನಿಗದಿತ ತೂಕ ಹೊಂದಿರಬೇಕು, ತೂಕದ ಮಾಪಕದಲ್ಲಿ ದೋಷವಿಲ್ಲ: ಫೋಗಟ್ ಅನರ್ಹತೆಗೆ ಕಾರಣ ನೀಡಿದ CAS