ಉಡುಪಿ: ದೇವರೂರು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಜೋರಾಗಿದೆ. ಮುಂಜಾನೆಯಿಂದಲೇ ಕೃಷ್ಣ ಭಕ್ತರು ಮಠಕ್ಕೆ ಬಂದು ದೇವರ ದರ್ಶನದಲ್ಲಿ ತೊಡಗಿದ್ದಾರೆ.
ಶ್ರೀಕೃಷ್ಣ ಪರಮಾತ್ಮ ಇಂದು ರಾತ್ರಿ 12.12ಕ್ಕೆ ಸರಿಯಾಗಿ ಚಂದ್ರೋದಯದ ಕಾಲದಲ್ಲಿ ಜನ್ಮ ಪಡೆಯುತ್ತಾನೆ ಎಂಬ ನಂಬಿಕೆಯಿದೆ. ಇದೇ ಘಳಿಗೆಯಲ್ಲಿ ಮಠದ ಒಳಗೆ ಅರ್ಘ್ಯ ಪ್ರಧಾನ ನಡೆಯಲಿದೆ. ಅಷ್ಟಮಿಯ ಹಿನ್ನೆಲೆಯಲ್ಲಿ ಭಕ್ತರು ದಿನಪೂರ್ತಿ ಉಪವಾಸ ಇರುತ್ತಾರೆ. ದೇವರ ಜನ್ಮಾ ನಂತರ ಉಪವಾಸ ತೊರೆಯುತ್ತಾರೆ.
Advertisement
Advertisement
ಶ್ರೀಕೃಷ್ಣನ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಣೆಗೆ ಒಂದೂವರೆ ಲಕ್ಷ ಚಕ್ಕುಲಿ, ಒಂದೂವರೆ ಲಕ್ಷ ಲಡ್ಡು ಸಿದ್ಧವಾಗಿದೆ. ಶನಿವಾರ ವಿಟ್ಲಪಿಂಡಿಯ ದಿನ (ಶ್ರೀಕೃಷ್ಣ ಲೀಲೋತ್ಸವದ ದಿನ) ಸಾವಿರಾರು ಮಂದಿಗೆ ಮಠದಲ್ಲಿ ಸಿಹಿಯೂಟದ ವ್ಯವಸ್ಥೆ, ಉಂಡೆ ಚಕ್ಕುಲಿ ವಿತರಣೆ ನಡೆಯಲಿದೆ. ನೂರಾರು ಬಾಣಸಿಗರು ಉಂಡೆ ಚಕ್ಕುಲಿ ತಯಾರು ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಅಷ್ಟಮಠಗಳ ರಥಬೀದಿಯಲ್ಲಿ ಹೂವು ಹಣ್ಣಿನ ವ್ಯಾಪಾರ ಜೋರಾಗಿದೆ.