ಬೆಳಗಾವಿ: ನಾಡಿನಾದ್ಯಂತ ಶ್ರೀಕೃಷ್ಣನ ಜನ್ಮಾಷ್ಟಮಿ ಹಿನ್ನೆಲೆ ಬೆಳಗಾವಿ ಸದಾಶಿವ ನಗರದಲ್ಲಿ ಮುಸ್ಲಿಂ ಕುಟುಂಬವೊಂದು ಹಿಂದೂ-ಮುಸ್ಲಿಂ ಎಂಬ ಬೇಧ-ಭಾವ ಮಾಡದೇ ತಮ್ಮ ಮುದ್ದಿನ ಮೊಮ್ಮಗನಿಗೆ ಕೃಷ್ಣನ ವೇಷಭೂಷಣ ಹಾಕಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.
Advertisement
ಸದಾಶಿವ ನಗರದ ದಸ್ತಗೀರ್ ಮೊಕಾಶಿ ಎಂಬುವವರು ತಮ್ಮ ಮುದ್ದಿನ ಮೊಮ್ಮಗ ಅದ್ನಾನ್ ಆಸೀಪ್ ಮೊಕಾಶಿಗೆ ಕೃಷ್ಣನ ವೇಷಭೂಷಣ ಹಾಕಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದಾರೆ. ಶ್ರೀಕೃಷ್ಣನಂತೆ ಪೋಷಾಕು ಹಾಕಿ ಮಗುವಿನ ಕೈಗೆ ಕೊಳಲು ನೀಡಿ ಕೃಷ್ಣನ ಜನ್ಮಾಷ್ಟಮಿ ಆಚರಣೆ ಮಾಡಿದ್ದಾರೆ. ಶ್ರೀಕೃಷ್ಣನ ವೇಷಧರಿಸಿದ ಅದ್ವಾನ್ ಆಸೀಪ್ ಮೊಕಾಶಿ ನಗರದ ಲವ್ ಡೇಲ್ ಶಾಲೆಯಲ್ಲಿ ನಡೆದ ಕೃಷ್ಣನ ಪೋಷಾಕು ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಮುಸ್ಲಿಂ ಕುಟುಂಬದ ಸಾಮರಸ್ಯದ ಮನಸ್ಥಿತಿಗೆ ನಾಡಿನೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಅಪ್ಪು ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ ನಟ ವಿಜಯ್ ದೇವರಕೊಂಡ
Advertisement
Advertisement
ಹಲವು ಜಾತಿ-ಧರ್ಮಗಳ ವೈವಿಧ್ಯಮಯ ರಾಷ್ಟ್ರ ಭಾರತ. ಐಕ್ಯತೆಯಲ್ಲಿ ವಿಶೇಷತೆ ಕಾಣುವ ದೇಶದಲ್ಲಿ ಬೆಳಗಾವಿಯ ಮುಸ್ಲಿಂ ಕುಟುಂಬ ಭಾವೈಕ್ಯ ಸಂದೇಶ ಸಾರಿದೆ. ಇತ್ತೀಚಿನ ದಿನಗಳಲ್ಲಿ ಧರ್ಮ-ಧರ್ಮಗಳ ನಡುವೆ ಒಡಕು ಕಾಣುತ್ತಿದೆ. ಸಾಮರಸ್ಯವನ್ನು ಹದಗೆಡಿಸುತ್ತಿರುವ ಕೆಲಸಗಳೂ ನಡೆಯುತ್ತಿವೆ. ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಆಗುತ್ತಿದೆ. ಇದಕ್ಕೆ ತದ್ವಿರುದ್ಧವಾಗಿರುವ ಬೆಳಗಾವಿಯ ಈ ಮುಸ್ಲಿಂ ಕುಟುಂಬ ರಾಮ್ ರಹೀಮ್ ಎಲ್ಲರೂ ಒಂದೇ ಎಂಬ ಸಂದೇಶ ನೀಡಿದೆ. ಇದನ್ನೂ ಓದಿ: ಮಹಾತ್ಮಾ ಗಾಂಧಿ ಕೊಂದವರು, ನನ್ನನ್ನ ಬಿಡ್ತಾರಾ: ಸಿದ್ದರಾಮಯ್ಯ
Advertisement
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ದಸ್ತಗೀರ್ ಸಾಬ್ ಮೊಕಾಶಿ ಅವರು, ನಮ್ಮ ದೇಶದಲ್ಲಿ ಹಿಂದೂ ಮುಸ್ಲಿಂ ಎಲ್ಲರೂ ಭಾವೈಕ್ಯತೆಯಿಂದ ಇರುವ ರಾಷ್ಟ್ರವಾಗಿದೆ. ಗೋಕುಲಾಷ್ಟಮಿ ನಿಮಿತ್ತ ಮೊಮ್ಮಗನಿಗೆ ಕೃಷ್ಣನ ವೇಷಭೂಷಣ ತೊಡಿಸಿದ್ದೇವೆ. ರಾಮನವಮಿ ಸೇರಿದಂತೆ ಎಲ್ಲಾ ಹಬ್ಬಗಳಲ್ಲಿ ನಾವು ಭಾಗಿಯಾಗುತ್ತೇವೆ. ಹಿಂದೂ, ಮುಸ್ಲಿಂ ಎಂಬ ಭೇದಭಾವ ಏನೂ ಇಲ್ಲ. ರಾಮ್ ರಹೀಮ್ ಎಲ್ಲರೂ ಒಂದೇ ಎಂದು ದಸ್ತಗೀರ್ ಸಾಬ್ ಮೊಕಾಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.