ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರನ್ನು ಭೋವಿಗುರು ಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಭೇಟಿ ನೀಡಿ, ಭೋವಿ ಸಮಾಜಕ್ಕೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದರು.
ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸದಲ್ಲಿ ಭೇಟಿಮಾಡಿದ ಅವರು, ಅಭಿವೃದ್ಧಿ ನಿಗಮಕ್ಕೆ ಮೂರು ವರ್ಷಗಳಾದರೂ ಅಧ್ಯಕ್ಷರನ್ನು ನೇಮಕಮಾಡಿಲ್ಲ. ಪ್ರಾದೇಶಿಕ ನ್ಯಾಯದಡಿ ಕಲಬುರಗಿ, ಬೆಳಗಾವಿ, ಮೈಸೂರು ಮತ್ತು ಮಧ್ಯಕರ್ನಾಟಕದಲ್ಲಿ ಕಛೇರಿಗಳನ್ನು ಆರಂಭಿಸುವುದರೊಂದಿಗೆ ನಿರ್ದೇಶಕರನ್ನು ನೇಮಕಮಾಡಿ ಅಧ್ಯಕ್ಷರನ್ನು ಆಯ್ಕೆಮಾಡುವುದರೊಂದಿಗೆ 500ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ತಿಳಿಸಿದರು. ಇದನ್ನೂ ಓದಿ: ಸಾಮಾನ್ಯ ಮಹಿಳೆಯರ ನೋವಿನ ಬಗ್ಗೆ ನಾವು ಯಾವಾಗ ಮಾತಾಡುವುದು: ಪ್ರಿಯಾಂಕಾ ಗಾಂಧಿ
Advertisement
Advertisement
ಭೋವಿ ವಡ್ಡರಲ್ಲದವರು ಅನುದಾನ ಪಡೆಯುವುದನ್ನು ತಡೆಯುವ ದೃಷ್ಟಿಯಿಂದ ಭೋವಿ ಅಭಿವೃದ್ಧಿ ನಿಗಮವನ್ನು ಭೋವಿ ವಡ್ಡರ ಅಭಿವೃದ್ಧಿ ನಿಗಮ ಎಂದು ಮರುನಾಮಕರಣ ಮಾಡುವದು. ಚಿತ್ರದುರ್ಗ ವ್ಯಾಪ್ತಿಯ ವಿಶ್ವವಿದ್ಯಾಲಯದಲ್ಲಿ ಶ್ರೀ ಸಿದ್ಧರಾಮೇಶ್ವರ ಅಧ್ಯಯನ ಪೀಠ ಪ್ರಾರಂಭಿಸುವುದು, ಭೋವಿ ಗುರುಪೀಠದಲ್ಲಿ ಭೋವಿ ಜನಾಂಗದ ಸಂಸ್ಕೃತಿ ಮತ್ತು ಸಂಶೋಧನಾ ಕೇಂದ್ರ ಮಾಡುವುದು, ಭೋವಿ ನಿಗಮದಿಂದ ಕಟ್ಟಡ, ಕಲ್ಲುಕ್ವಾರೆ, ರಸ್ತೆಚರಂಡಿ, ಅರೆಅಲೆಮಾರಿ ಮತ್ತು ಭೂರಹಿತ ಭೋವಿವಡ್ಡರ ಕಾರ್ಮಿಕರ ಸಮೀಕ್ಷೆ ನಡೆಸಿ ವಿಶೇಷ ಗುರುತಿನ ಚೀಟಿ ವಿತರಿಸುವುದು ಮತ್ತು ಅವರಿಗೆ ಸರ್ಕಾರದಿಂದ ಸಹಾಯಧನ ಒದಗಿಸಬೇಕೆಂದು ಕೋರಿದರು. ಇದನ್ನೂ ಓದಿ: ನಿನ್ನ ಬಳಿ ದುಡ್ಡಿಲ್ಲ ಎಂದು ಮಜಾ ಭಾರತದ ಕಲಾವಿದನಿಗೆ ಕೈ ಕೊಟ್ಟ ಪತ್ನಿ
Advertisement
Advertisement
ಕಲ್ಲುಕ್ವಾರಿ ಕುಲವೃತ್ತಿಯಾಗಿರುವುದರಿಂದ ಆ ವೃತ್ತಿಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯಿಂದ ತೊಡಕಾಗಿರುವ ಕಾನೂನುಗಳನ್ನು ನಿವಾರಣೆಮಾಡುವುದು ಮತ್ತು ಆ ವೃತ್ತಿಗೆ ಶೇ.75 ರಷ್ಟು ಅಥವಾ 2 ಕೋಟಿವರೆಗೆ ಯಂತ್ರಗಳ ಖರೀದಿಗೆ ಸಬ್ಸಿಡಿ ಒದಗಿಸುವುದು. ಮುಂದಿನ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸಾಮೂಹಿಕ ನ್ಯಾಯದಡಿ ಸಮುದಾಯದ ಸ್ಪರ್ಧಾಕಾಂಕ್ಷಿಗಳಿಗೆ ಟಿಕೇಟ್ ಹಂಚಿಕೆ ಮಾಡಬೇಕೆಂದು ಭೇಟಿ ಸಂದರ್ಭದಲ್ಲಿ ಚರ್ಚಿಸಿದರು.