ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್‍ನ (Sri Guru Raghavendra Sahakara Bank) ಅಕ್ರಮದ ತನಿಖೆಯನ್ನು ಸಿಬಿಐಗೆ (CBI) ಒಪ್ಪಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ವಿಧಾನ ಪರಿಷತ್‍ನಲ್ಲಿ ಸಹಕಾರ ಸಚಿವ ಕೆ.ಎನ್ ರಾಜಣ್ಣ (KN Rajanna) ಈ ಬಗ್ಗೆ ಘೋಷಣೆ ಮಾಡಿದ್ದಾರೆ.
ಈ ವಿಚಾರವಾಗಿ ನಿಯಮ 72ರಲ್ಲಿ ಕಾಂಗ್ರೆಸ್‍ನ (Congress) ಯು.ಬಿ ವೆಂಕಟೇಶ್ ವಿಷಯ ಪ್ರಸ್ತಾಪ ಮಾಡಿದರು. ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಅಕ್ರಮದ ಬಗ್ಗೆ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಈಗ ಇರುವ ಆಡಳಿತಾಧಿಕಾರಿಯನ್ನು ಬದಲಾವಣೆ ಮಾಡಬೇಕು. ಈ ಅಕ್ರಮದ ಹಿಂದೆ ಪಟ್ಟ ಭದ್ರ ಹಿತಾಸಕ್ತಿಗಳು ಇದ್ದಾರೆ. ಬ್ಯಾಂಕ್ ಉಳಿಸಲು ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಅಕ್ರಮಗಳ ಹಿನ್ನೆಲೆಯಲ್ಲಿ ಆರ್‍ಬಿಐ ಬ್ಯಾಂಕ್ ರದ್ದು ಮಾಡಲು ಪತ್ರ ಬರೆದಿದೆ. ಆದರೆ ಸರ್ಕಾರ ರದ್ದು ಮಾಡದಂತೆ ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆ ಸ್ವಾಗತಿಸಿದ ಬೈಂದೂರಿನ ಬಿಜೆಪಿ ಶಾಸಕ
Advertisement
ಇದಕ್ಕೆ ಸಚಿವ ರಾಜಣ್ಣ ಉತ್ತರ ನೀಡಿದ್ದಾರೆ. ಬ್ಯಾಂಕ್ ದಾಖಲಾತಿಗಳು ಕನ್ನಡದಿಂದ ಇಂಗ್ಲಿಷ್‍ಗೆ ಭಾಷಾಂತರ ಕೆಲಸ ನಡೆಯುತ್ತಿದೆ. ತರ್ಜುಮೆ ಕೆಲಸ ಮುಗಿದ ಕೂಡಲೇ ಸಿಬಿಐ ತನಿಖೆಗೆ ಒಪ್ಪಿಸುತ್ತೇವೆ. ಸರ್ಕಾರ ಆರ್‍ಬಿಐಗೆ ನಿಲುವನ್ನು ತಿಳಿಸಲಿದೆ. ರದ್ದು ಮಾಡದಂತೆ ಮನವಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
Advertisement
Advertisement
ಸಿಬಿಐಗೆ ಪ್ರಕರಣ ಕೊಡುವ ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವಿನ ಕಿತ್ತಾಟಕ್ಕೆ ಕಾರಣವಾಯ್ತು. ಸಿಬಿಐ ತನಿಖೆಗೆ ನಿಡಲು ಬಿಜೆಪಿ ಸರ್ಕಾರದ ಅವಧಿಯಲ್ಲೇ ನಿರ್ಧಾರವಾಗಿತ್ತು. ಈಗ ಕಾಂಗ್ರೆಸ್ ಸಿಬಿಐ ತನಿಖೆಗೆ ಕೊಡುವ ನಾಟಕವಾಡುತ್ತಿದೆ ಎಂದು ಬಿಜೆಪಿಯ ಸದಸ್ಯ ಡಿ.ಎಸ್ ಅರುಣ್, ಭಾರತಿ ಶೆಟ್ಟಿ ಹಾಗೂ ನಾರಾಯಣಸ್ವಾಮಿ ತಿಳಿಸಿದ್ದಾರೆ.
Advertisement
ಬಿಜೆಪಿ (BJP) ಸದಸ್ಯರ ಮಾತಿಗೆ ಕಾಂಗ್ರೆಸ್‍ನ ಯು.ಬಿ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು. ನಿಮ್ಮ ಸಚಿವರ ಕಾಲಿಗೆ ಬೀಳ್ತೀನಿ ಎಂದರೂ ಸಿಬಿಐ ತನಿಖೆಗೆ ಕೊಡಲಿಲ್ಲ. ತನಿಖೆಗೆ ಕೊಡುವುದಾಗಿ ಸದನದಲ್ಲಿ ಹೇಳಿದ್ದರು ಆದರೆ ನಿಮ್ಮ ಸಚಿವರು ಕೊಡಲಿಲ್ಲ. ಬಡ ಬ್ರಾಹ್ಮಣರ ಹಣ ಆ ಬ್ಯಾಂಕ್‍ನಲ್ಲಿ ಇದೆ. ಬಿಜೆಪಿಯವರು ಏನು ಮಾಡದೇ ಈಗ ನಾವು ಮಾಡಿದ್ದಕ್ಕೆ ಹೊಟ್ಟೆ ಉರಿಸಿಕೊಳ್ಳುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಭೀಮನ ಅಮವಾಸ್ಯೆಯ ದಿನವೇ ಪತಿಯಿಂದ ಪತ್ನಿ ಕಿಡ್ನಾಪ್
Web Stories