ಚಿಕ್ಕಮಗಳೂರು: ದತ್ತಪೀಠವೇ (Sri Guru Dattatreya Swami Dattapita) ಬೇರೆ – ಬಾಬಾಬುಡನ್ ದರ್ಗಾವೇ (Baba Budangiri dargah) ಬೇರೆ. ಈ ವಿಚಾರದಲ್ಲಿ ವಾಸ್ತವಿಕ ಸತ್ಯ ಎತ್ತಿಹಿಡಿಯುವ ಸಲುವಾಗಿ ತನಿಖೆ ನಡೆಸುವಂತೆ ಒತ್ತಾಯಿಸಿ ಶೀಘ್ರದಲ್ಲೇ ಮುಖ್ಯಮಂತ್ರಿಗಳು ಹಾಗೂ ಸಚಿವರ ಬಳಿ ನಿಯೋಗ ತೆರಳುವುದಾಗಿ ಶಾಸಕ ಸಿ.ಟಿ ರವಿ (CT Ravi) ಹೇಳಿದ್ದಾರೆ.
Advertisement
ತಾಲೂಕಿನ ದತ್ತಪೀಠದಲ್ಲಿನ ದತ್ತಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದತ್ತಾತ್ರೇಯ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಸ್ಲಾಂ (Islam) ಹುಟ್ಟುವ ಮುಂಚೆಯೇ ಇಲ್ಲಿನ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ದತ್ತಪೀಠವಿತ್ತು. ಬಾಬಾಬುಡನ್ ದರ್ಗಾ (Baba Budangiri dargah) ವಾಸ್ತಕವಿಕವಾಗಿ ಬೇರೆ ಇದೆ. ಈ ಸತ್ಯವನ್ನು ಎತ್ತಿ ತೋರಿಸುವುದಕ್ಕಾಗಿ ನಿವೃತ್ತ ನ್ಯಾಯಾಧೀಶರು ಅಥವಾ ಹಿರಿಯ ಅಧಿಕಾರಿಗಳ ತಂಡ ರಚಿಸಿ ದಾಖಲೆಗಳನ್ನ ಪರಿಶೀಲನೆ ಮಾಡಲಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: 47 ವರ್ಷದ ಹೋರಾಟದ ಬಳಿಕ ದತ್ತಪೀಠದಲ್ಲಿ ನೆರವೇರಿತು ಹಿಂದೂ ಅರ್ಚಕರಿಂದ ಪೂಜೆ
Advertisement
Advertisement
ಬಾಬಾಬುಡನ್ ದರ್ಗಾ ಜಾಗರ ಹೋಬಳಿಯ ನಾಗೇನಹಳ್ಳಿ ಗ್ರಾಮದ ಸರ್ವೇ ನಂ.57 ರಲ್ಲಿದೆ. ದತ್ತಪೀಠ ಕ್ಷೇತ್ರ ಜಾಗರ ಹೋಬಳಿ ಇನಾಂ ದತ್ತಾತ್ರೇಯ ಪೀಠದ ಸರ್ವೇ ನಂ.195 ರಲ್ಲಿದೆ. ಈ ನ್ಯಾಯವನ್ನು ಎತ್ತಿ ಹಿಡಿಯಬೇಕು ಎಂದು ಒತ್ತಾಯಿಸಿ ಸದ್ಯದಲ್ಲೇ ಮುಖ್ಯಮಂತ್ರಿಗಳು (Chief Minister), ಕಂದಾಯ ಸಚಿವರು ಹಾಗೂ ಮುಜರಾಯಿ ಸಚಿವರನ್ನ ಭೇಟಿ ಮಾಡಿ ಚರ್ಚಿಸುತ್ತೇವೆ. ಅವರ ಪ್ರತಿಕ್ರಿಯೆ ನೋಡಿ ಮುಂದಿನ ಹೋರಾಟ ನಿರ್ಣಯಿಸುತ್ತೇವೆ. ಕಾನೂನು ಹೋರಾಟವನ್ನೂ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ತೋಟದ ಮನೆಯಲ್ಲಿದ್ದ ಸಾಕು ನಾಯಿ ಕೊಂದ ಚಿರತೆ- ಮನೆಯಿಂದ ಹೊರಬರಲು ಅನ್ನದಾತರು ಹಿಂದೇಟು
Advertisement
ದತ್ತಪೀಠಕ್ಕೆ ಸರ್ಕಾರ ಹಿಂದೂ ಅರ್ಚಕರನ್ನ ನೇಮಿಸಿರುವುದು ಭಕ್ತಾದಿಗಳಲ್ಲಿ ಆನಂದ ತಂದಿದೆ. ಅದನ್ನು ವರ್ಣಿಸಲು ಆಗುವುದಿಲ್ಲ. ಅರ್ಚಕರು ಗುಹೆಯೊಳಗಡೆ ಪೂಜೆ ಮಾಡಿ, ಪ್ರಾಣ ಪ್ರತಿಷ್ಠೆ ಮಾಡಿ, ಅರ್ಚನೆ, ಗಣಪತಿ ಹೋಮ, ದತ್ತ ಹೋಮಗಳು ನಡೆದಿವೆ. ನಗರದಲ್ಲಿ ನಡೆದ ಶೋಭಾಯಾತ್ರೆ ಕೂಡ ಹಿಂದಿನ ಎಲ್ಲಾ ದಾಖಲೆಗಳನ್ನ ಮೀರಿ ವೈಭವೋಪೇತವಾಗಿ ನಡೆದಿದೆ ಎಲ್ಲದಕ್ಕೂ ದತ್ತಾತ್ರೇಯರ ಕೃಪೆ ಇದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.