ಹಾವೇರಿ: ಧರ್ಮ ಎಂದರೆ ಕಾರ್ಯ ಮಾಡುವುದು. ಬಿದ್ದವರು, ಬೀಳುತ್ತಿರುವರನ್ನು ಮೇಲೆತ್ತುವುದು. ಕಾಯಕವೇ ಧರ್ಮ ಎಂದು ನೆಗಳೂರು ಹಿರೇಮುಗದೂರ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.
ಜಿಲ್ಲೆಯ ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದ ಶ್ರೀ ಬಸವೇಶ್ವರ ಹಾಗೂ ಶ್ರೀ ವೀರಾಂಜನೇಯ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಸಾನಿಧ್ಯವಹಿಸಿ, ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮದಿಂದ ಎಲ್ಲರ ರಕ್ಷಣೆ ಸಾಧ್ಯ. ಮಾದರಿ ಗ್ರಾಮ ಮಾಡಬೇಕಾದರೆ ಶ್ರದ್ಧೆ ಹಾಗೂ ಕಾಯಕ ಮುಖ್ಯ. ಊರಿನವರ ಸಹಕಾರದಿಂದ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಕಾರ್ಯಕ್ರಮಕ್ಕೆ ಶ್ರಮವಹಿಸುವ ಎಲ್ಲ ಕಾಯಕಯೋಗಿಗಳಿಗೆ ಹಾಗೂ ಭಕ್ತಾದಿಗಳಿಗೆ ಶುಭ ಕೋರಿದರು. ಇದನ್ನೂ ಓದಿ: ಯಾರು ಸತ್ತರೂ ಹೆಣದ ಮೇಲೆ ಬಿಜೆಪಿಯವರು ರಾಜಕಾರಣ ಮಾಡ್ತಾರೆ: ತಂಗಡಗಿ
ಶ್ರೀ ಗುಬ್ಬಿ ಅಜ್ಜನ ಮಠದ ಸುಕ್ಷೇತ್ರ ಹೇರೂರ ಶ್ರೀ ಷ.ಬ್ರ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಸಾನಿಧ್ಯವಹಿಸಿ ಶ್ರೀ ಬಸವೇಶ್ವರ ಹಾಗೂ ಶ್ರೀ ವೀರಾಂಜನೇಯ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮಗಳ ಪೂಜಾ ವಿಧಾನಗಳ ಬಗ್ಗೆ ಭಕ್ತಿಯ ಮಾತನಾಡಿ ಆರ್ಶೀವಾದ ನೀಡಿದರು. ಹಿರೇಮುಗದೂರ ಶ್ರೀ ಮ.ಘ.ಚ ಘನ ಬಸವ ಅಮರೇಶ್ವರ ಸ್ವಾಮಿಗಳು ಸಾನಿಧ್ಯವಹಿಸಿ ಈ ಊರಿಗೆ ಮಹಾಸ್ವಾಮಿಗಳ ಆರ್ಶೀವಾದ ಹಾಗೂ ಪ್ರೀತಿ, ಪುಣ್ಯವಂತಿಕೆ ಇಲ್ಲಿದೆ. ಮಾದರಿ ಊರು ಮಾಡಲು ತಾವೆಲ್ಲರೂ ಮನಸ್ಸು ಮಾಡಬೇಕಿದೆ. ಉತ್ತಮ ಶಿಕ್ಷಣ ಪಡೆದು ಸಂಸ್ಕಾರ ಹಾಗೂ ಜಾಗೃತಿ ಮೂಡಿಸಲು ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಕಾರ್ಯಕ್ರಮ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಕುರಿತು ಮಾಜಿ ಸಚಿವ ರುದ್ರಪ್ಪ ಲಮಾಣಿ ಹಾಗೂ ಎಂ.ಎಂ.ಹಿರೇಮಠ ಅವರು ಮಾತನಾಡಿದರು. ಶ್ರೀಗಳಿಗೆ, ಮುಖ್ಯ ಅಥಿತಿಗಳಿಗೆ ಹಾಗೂ ಗಣ್ಯರಿಗೆ ಗೌರವ ಸನ್ಮಾನ ಸಲ್ಲಿಸಲಾಯಿತು. ವೇದಿಕೆ ಮೇಲೆ ಶಿವ ಸ್ವರೂಪಿಯಾಗಿ ಸ್ಫೂರ್ತಿ ಹಾಗೂ ವೀಣಾ ವಿದ್ಯಾರ್ಥಿಗಳು ನೃತ್ಯ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್‍ನವರು ಕೇಸರಿ ಶಲ್ಯ ಧರಿಸಿರೋದು ಒಳ್ಳೆಯ ಸಂಕೇತ: ಬೊಮ್ಮಾಯಿ
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರಾದ ಶಿವಯೋಗಿ ಕುಲಕರ್ಣಿ, ಗಣ್ಯರಾದ ಪರಮಯ್ಯಸ್ವಾಮಿ ಹಿರೇಮಠ, ಬಸಪ್ಪ ಕಡ್ಲೆಪ್ಪನವರ, ಉಮೇಶ ಮಾಲಿ, ಶಂಬಣ್ಣ ಆರೇರ, ರಾಘವೇಂದ್ರ ಪವಾರ, ಮಲ್ಲಪ್ಪ ಸೋಮಸಾಗರ, ಗುರುಬಸಯ್ಯ ಚಪ್ಲರದಹಳ್ಳಿಮಠ, ಶರಣಪ್ಪ ಸೋಮಸಾಗರ, ಶಿಕ್ಷಕರಾದ ಎನ್.ಎಂ.ಪಾಟೀಲ್, ಪಿ.ಕೆ.ಹಳೇರಿತ್ತಿ, ಗಂಗಾಧರ ಹಿರೇಮಠ, ರಾಜಾಭಕ್ಷ ಮಣ್ಣೂರ, ಎಸ್.ವ್ಹಿ.ಹಿರೇಮಠ ಮೌನೇಶ ಬಡಿಗೇರ, ಶಂಕ್ರಪ್ಪ ಸವಣೂರ ಸೇರಿದಂತೆ ಶ್ರೀ ಬಸವೇಶ್ವರ ಹಾಗೂ ಶ್ರೀ ವೀರಾಂಜನೇಯ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಗಣ್ಯರು, ಗೌರವಾನ್ವಿತರು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.