ಉಡುಪಿ: ಕರಾವಳಿಯ ಪ್ರಸಿದ್ಧ ದೇವಿಯ ದೇಗುಲ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಿಗೆ ಉಡುಪಿಯಲ್ಲಿ ಚಿನ್ನದ ಪಲ್ಲಕ್ಕಿ ಸಿದ್ಧಗೊಂಡಿದೆ.
ಈ ಪಲ್ಲಕ್ಕಿ ತಯಾರಿಗೆ 12 ಕಿಲೋ ತೂಕದ ಚಿನ್ನ ಬಳಸಲಾಗಿದೆ. ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ಈ ಕಲಾತ್ಮಕ ಪಲ್ಲಕ್ಕಿ ಸಿದ್ಧಗೊಳಿಸಲಾಗಿದೆ. ದೇವಾಲಯಗಳ ಆಭರಣ, ರಥ ಹಾಗೂ ಪಲ್ಲಕ್ಕಿ ನಿರ್ಮಾಣಕ್ಕೆ ಹೆಸರುವಾಸಿಯಾದ ಉಡುಪಿಯ ಸ್ವರ್ಣ ಜುವೆಲ್ಲರ್ಸ್ ಒಂದು ತಿಂಗಳ ಕಾಲಾವಧಿಯಲ್ಲಿ ಪಲ್ಲಕ್ಕಿಯನ್ನು ನಿರ್ಮಾಣ ಮಾಡಿದೆ.
Advertisement
Advertisement
ಉಡುಪಿಯಲ್ಲಿ ಸಿದ್ಧಗೊಂಡ ಸ್ವರ್ಣ ಪಲ್ಲಕ್ಕಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಬಪ್ಪನಾಡು ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಗಿದೆ. ಈ ಹಿಂದೆ ಸ್ವರ್ಣ ಜುವೆಲ್ಲರ್ಸ್ ಬೇರೆ ಬೇರೆ ದೇವಸ್ಥಾನಗಳಿಗೆ ಬೆಳ್ಳಿ ರಥ, ಸತ್ತಿಗೆ, ದ್ವಾರ, ಧ್ವಜಸ್ತಂಭದ ಕವಚಗಳನ್ನು ತಯಾರುಮಾಡಿತ್ತು.