ಕನ್ನಡ ಕಿರುತೆರೆಯಲ್ಲಿ ಹಲವು ಮೊದಲುಗಳಿಗೆ ಸಾಕ್ಷಿಯಾಗಿರುವ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕಥೆಗಳನ್ನು ನೀಡುವ ಸಲುವಾಗಿ ಗುರು ರಾಘವೇಂದ್ರ ವೈಭವ, ಹರ ಹರ ಮಹಾದೇವ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಹಾಗು ಎಡೆಯೂರು ಶ್ರೀ ಸಿದ್ದಲಿಂಗೇಶ್ವರದಂತಹ ಧಾರಾವಾಹಿಗಳನ್ನು ನೀಡುತ್ತಾ ಬಂದಿದೆ. ಇದೀಗ ನಿಮ್ಮ ಮನರಂಜನೆಯನ್ನು ದುಪ್ಪಟ್ಟುಗೊಳಿಸಲು ಜಗವನು ಕಾಯುವ ಕರುಣೆಯ ತಾಯಿ ‘ಪಾರ್ವತಿ’ಯ (Parvathi) ಕಥೆಯನ್ನು ಪ್ರಸ್ತುತಪಡಿಸಲು ಸಜ್ಜಾಗಿದೆ ಅದೇ ಶ್ರೀ ದೇವಿ ಮಹಾತ್ಮೆ.
ಪುರಾಣಗಳ ಪ್ರಕಾರ ಸತಿಯು ಅತ್ಯಂತ ಸುಂದರವಾಗಿರುತ್ತಾಳೆ. ತಪಸ್ವಿ ಶಿವನಿಗೆ ಮನಸೋಲುವ ಸತಿ, ಮುಂದೆ ಪಾರ್ವತಿಯಾಗಿ ಹೇಗೆ ಮರು ಜನ್ಮತಾಳುತ್ತಾಳೆ. ಮಹಾಕಾಳಿಯ ರುದ್ರಾವತಾರವನ್ನು ಏಕೆ ಧರಿಸುತ್ತಾಳೆ ಎಂಬುದರ ಜೊತೆಗೆ ಜಗನ್ಮಾತೆಯ ಮಹಿಮೆಯನ್ನು, ಪವಾಡಗಳನ್ನು ಅರ್ಥಗರ್ಭಿತವಾಗಿ ಎಳೆ ಎಳೆಯಾಗಿ ಮನಮುಟ್ಟುವಂತೆ ಜನರಿಗೆ ತಿಳಿಸುವುದೇ ‘ಶ್ರೀ ದೇವೀ ಮಹಾತ್ಮೆ’ಯ ಮುಖ್ಯ ಉದ್ದೇಶ. ಇದನ್ನೂ ಓದಿ:ವಿಶ್ವಮಟ್ಟದಲ್ಲಿ ದಾಖಲೆ ಬರೆದ ಕನ್ನಡದ ‘ಕೆಂಡ’ ಸಿನಿಮಾ
ಇನ್ನು ಈ ಧಾರಾವಾಹಿಯು ಅದ್ದೂರಿಯಾಗಿ, ಅಮೋಘ ಸೆಟ್‌ಗಳು ಮತ್ತು ಅತ್ಯದ್ಭುತವಾಗಿರುವ ಗ್ರಾಫಿಕ್ಸ್ ತಂತ್ರಜ್ಞಾನಗಳಿಂದ ಚಿತ್ರೀಕರಣಗೊಳ್ಳುತ್ತಿದೆ. ಟಿವಿಯಲ್ಲಿ ಪ್ರಸಾರವಾಗುತ್ತಿರುವ ಪ್ರೋಮೋಗಳಿಗೆ ಜನರು ಮನಸೋತಿದ್ದು, ಧಾರಾವಾಹಿಯನ್ನು ನೋಡಲು ಕಾತರತೆಯಿಂದ ಕಾಯುತ್ತಿದ್ದಾರೆ. ಶಿವನ ಪಾತ್ರವನ್ನು ಅರ್ಜುನ್ ರಮೇಶ್ (Arjun Ramesh), ಪಾರ್ವತಿಯ ಪಾತ್ರವನ್ನು ಜೀವಿತಾ ವಸಿಷ್ಠ (Jeevitha Vasista) ನಿರ್ವಹಿಸುತ್ತಿದ್ದಾರೆ. ಜೊತೆಗೆ ಈ ಪೌರಾಣಿಕ ಧಾರಾವಾಹಿಯು ಅತ್ಯುತ್ತಮ ತಾರಾಗಣವನ್ನು ಹೊಂದಿದ್ದು, ನಂದಿ ಮೂವೀಸ್ ನಿರ್ಮಾಣ ಸಂಸ್ಥೆಯು ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.
ಬರುತ್ತಿದೆ ಪಾರ್ವತಿ ಜಗನ್ಮಾತೆಯಾದ ಕಥೆ ‘ಶ್ರೀ ದೇವಿ ಮಹಾತ್ಮೆ’ (Sri Devi Mahatme) ನಿಮ್ಮ ಮನೆ ಮನದಂಗಳದಲ್ಲಿ ಇದೇ ಜುಲೈ 1 ರಿಂದ ಸೋಮ-ಶನಿವಾರ ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ. ದೇವಿಯ ಮಹಿಮೆಯನ್ನು ಕಣ್ತುಂಬಿಕೊಳ್ಳುತ್ತ ಪುನೀತರಾಗಿ.