ಕೊಪ್ಪಳ: ವಿದ್ಯಾರ್ಥಿಗಳು ವಿಚಾರವಂತರಾಗಬೇಕು, ಶ್ರೇಷ್ಟ ದಾರ್ಶನಿಕರ ಮಾತಿನಂತೆ ದೇವಾಲಯದ ಮುಂದೆ ಜನರು ಸಾಲುಗಟ್ಟಿ ನಿಲ್ಲುವಂತೆ, ವಿದ್ಯಾರ್ಥಿಗಳು ಗ್ರಂಥಾಲಯದ ಮುಂದೆ ಸಾಲುಗಟ್ಟಿ ನಿಂತಾಗಲೇ ದೇಶಕ್ಕೆ ಹೊಸ ಭವಿಷ್ಯವಿದೆ ಎಂದು ಕೊಪ್ಪಳ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
Advertisement
ತಾಲೂಕಿನ ಹೊಸಬಂಡಿ ಹರ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಉಚಿತ ಪುಸ್ತಕಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜ್ಞಾನಕ್ಕಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ. ನೀವೆಲ್ಲ ಜ್ಞಾನವಂತರಾಗಬೇಕು. ಹೀಗಾಗಿ ಆಧ್ಯಯನ ಬಹಳ ಮುಖ್ಯ. ಮೊಬೈಲ್ ಬಂದಾಗಿನಿಂದ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಯಾಗುತ್ತಿದೆ, ಹಾಗಾಗಿದಿರಲಿ. ತಮ್ಮ ಅಧ್ಯಯನಕ್ಕೆ ಪೂರಕವಾದ ಪುಸ್ತಕಗಳನ್ನೇ ಇಂದು ನೀಡಲಾಗುತ್ತಿದೆ. ಓದಿ, ಜ್ಞಾನವಂತರಾಗಿ ಎಂದು ಕಿವಿ ಮಾತು ಹೇಳಿದರು. ಇದನ್ನೂ ಓದಿ: ನುಡಿದಂತೆ ನಡೆದ ಜಗ್ಗೇಶ್- 1 ಲಕ್ಷ ರೂ. ಚೆಕ್ ಹಸ್ತಾಂತರ
Advertisement
Advertisement
ಮುನಿರಾಬಾದ್ ಪಿಎಸ್‍ಐ ಸುಪ್ರೀತ ಮಾತನಾಡಿ, ತಾವೆಲ್ಲ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಾಗಿದ್ದು, ಸರ್ಕಾರಿ ನೌಕರಿ ಪಡೆಯಲೇಬೇಕೆಂಬ ಪ್ರಬಲ ಇಚ್ಛೆ ತಮ್ಮದಾಗಿರುತ್ತದೆ. ಯಾವ ವಲಯದ ಹುದ್ದೆ ಪಡೆಯ ಬೇಕಾದರೂ ನಿರಂತರ ಓದು ಅವಶ್ಯಕ, ಜ್ಞಾನವೆಂಬುದು ಯಾರ ಸ್ವತ್ತಲ್ಲ, ಒಳ್ಳೆಯ ಪುಸ್ತಕಗಳನ್ನು ಸಂಗ್ರಹಿಸಿ ನಿರಂತರ ಅಧ್ಯಯನಶೀಲರಾದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ದಿಸೆಯಲ್ಲಿ ಸದಾ ನಿಮ್ಮೊಂದಿಗೆ ತನು, ಮನ, ಧನಗಳಿಂದ ನಾನು ಸಹಕಾರಕ್ಕೆ ಸಿದ್ಧನಿದ್ದೇನೆ. ನಿಮ್ಮ ಕನಸಿನ ಈಡೇರಿಕೆಗೆ ಈ ಪುಸ್ತಕಗಳು ದಾರಿ ತೋರಿಸುತ್ತವೆ ಎಂದರು. ಇದನ್ನೂ ಓದಿ: ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ಅತ್ಯಾಚಾರಿಗಳ ಬಂಧನ