CricketLatestSports

ಯುವಿ, ಹೆನ್ರಿಕ್ಸ್ ಅಬ್ಬರದ ಅರ್ಧಶತಕ, ಬೆಂಗಳೂರಿಗೆ 208 ರನ್ ಟಾರ್ಗೆಟ್

ಹೈದರಾಬಾದ್: ಐಪಿಎಲ್‍ನ ಮೊದಲ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದ್ರಾಬಾದ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 208 ರನ್‍ಗಳ ಗುರಿಯನ್ನು ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಹೈದ್ರಾಬಾದ್ ಆರಂಭದಲ್ಲಿ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡರೂ ಯುವರಾಜ್ ಸಿಂಗ್ ಮತ್ತು ಮಾರ್ಕ್ ಹೆನ್ರಿಕ್ಸ್ ಅವರ ಅರ್ಧಶತಕದಿಂದಾಗಿ 4 ವಿಕೆಟ್ ನಷ್ಟಕ್ಕೆ 207 ರನ್‍ಗಳಿಸಿತು.

ಯುವಿ ಹೆನ್ರಿಕ್ಸ್ ಜುಗಲ್ ಬಂದಿ: 10.3 ಓವರ್‍ಗೆ 93 ರನ್‍ಗಳಿಸಿದ್ದಾಗ ಶಿಖರ್ ಧವನ್ ಔಟಾದರು. ಕ್ರೀಸ್‍ಗೆ ಆಗಮಿಸಿದ ಯುವಿ ಆರಂಭದಲ್ಲಿ ನಿಧಾನವಾಗಿ ಆಡಿದ್ದರೂ ಬರಬರುತ್ತಾ ಭರ್ಜರಿ ಸಿಕ್ಸರ್, ಬೌಂಡರಿಗಳನ್ನು ಸಿಡಿಸಿ ಪ್ರೇಕ್ಷಕರಿಗೆ ಮನೋರಂಜನೆ ನೀಡಿದರು. ಹೆನ್ರಿಕ್ಸ್ ಮತ್ತು ಯುವಿ 3ನೇ ವಿಕೆಟ್‍ಗೆ 29 ಎಸೆತಗಳಲ್ಲಿ 58 ರನ್ ಜೊತೆಯಾಟವಾಡಿದರು. ಹೆನ್ರಿಕ್ಸ್ 52 ರನ್(37 ಎಸೆತ, 7 ಬೌಂಡರಿ, 2 ಸಿಕ್ಸರ್)ಸಿಡಿಸಿ ಔಟಾದರೆ ಯುವಿ 62 ರನ್(27 ಎಸೆತ, 7ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟಾದರು.

ಶಿಖರ್ ಧವನ್ 40 ರನ್(31 ಎಸೆತ, 5 ಬೌಂಡರಿ) ಗಳಿಸಿದರೆ, ನಾಯಕ ಡೇವಿಡ್ ವಾರ್ನರ್ 14 ರನ್ ಗಳಿಸಿದರು. ದೀಪಕ್ ಹೂಡಾ 16 ರನ್ ಗಳಿಸಿ ಔಟಾಗದೇ ಉಳಿದರೆ ಕೊನೆಯಲ್ಲಿ ಬೆನ್ ಕಟ್ಟಿಂಗ್ 6 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ 16 ರನ್‍ಗಳಿಸಿ ಔಟಾಗದೇ ಉಳಿದರು.

ಟೈಮಲ್ ಮಿಲ್ಸ್, ಅಂಕಿತ್ ಚೌಧರಿ, ಚಹಲ್, ಸ್ಟುವರ್ಟ್ ಬಿನ್ನಿ ತಲಾ ಒಂದೊಂದು ವಿಕೆಟ್ ಪಡೆದರು.

rcb vs srs 8

rcb vs srs 9

rcb vs srs 10

rcb vs srs 11

rcb vs srs 12

rcb vs srs 13

rcb vs srs 1

rcb vs srs 2

rcb vs srs 3

rcb vs srs 4 1

rcb vs srs 5

rcb vs srs 6

rcb vs srs 7

Related Articles

Leave a Reply

Your email address will not be published. Required fields are marked *