– ಸಿಎಸ್‌ಕೆ ಬಹುತೇಕ ಪ್ಲೇ ಆಫ್‌ನಿಂದ ಹೊರಕ್ಕೆ
ಚೆನ್ನೈ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಮತ್ತೆ ಹೀನಾಯ ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಬಹುತೇಕ ಈ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿದೆ. ಆದ್ರೆ ಸನ್ ರೈಸರ್ಸ್ ಹೈದರಾಬಾದ್ ಇದೇ ಮೊದಲ ಬಾರಿಗೆ ಸಿಎಸ್‌ಕೆ ವಿರುದ್ಧ ಚೆಪಾಕ್ ಮೈದಾನದಲ್ಲಿ ಗೆದ್ದು ಇತಿಹಾಸ ನಿರ್ಮಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 19.5 ಓವರ್‌ಗಳಲ್ಲಿ 154 ರನ್‌ಗಳಿಗೆ ಆಲೌಟ್ ಆಯಿತು. 155 ರನ್‌ಗಳ ಸವಾಲಿನ ಮೊತ್ತ ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ 18.4 ಓವರ್‌ಗಳಲ್ಲೇ ಗುರಿ ಪೂರೈಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಜಿಗಿತ ಕಂಡಿತು.
ಸಿಎಸ್‌ಕೆ ಪರ ದೇವಾಲ್ ಬ್ರೇವಿಸ್ ಸ್ಫೋಟಕ 42 ರನ್, ಆಯುಷ್ ಮಾತ್ರೆ 30 ರನ್, ಜಡೇಜಾ 21 ರನ್, ದೀಪಕ್ ಹೂಡ 22 ರನ್ ಹೊರತುಪಡಿಸಿದ್ರೆ ಉಳಿದವರು ಅಲ್ಪಮೊತ್ತಕ್ಕೆ ನೆಲಕಚ್ಚಿದರು.
ಹೈದರಾಬಾದ್ ಪರ ಹರ್ಷಲ್ ಪಟೇಲ್ ಪ್ರಮುಖ 4 ವಿಕೆಟ್ ಕಿತ್ತರೆ, ಪ್ಯಾಟ್ ಕಮ್ಮಿನ್ಸ್, ಜಯದೇವ್ ಉನದ್ಕಟ್ 2 ವಿಕೆಟ್ ಹಾಗೂ ಶಮಿ, ಕಮಿಂಡು ಮೆಂಡೀಸ್ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನೂ 155 ರನ್‌ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಬಳಿಕ ಇಶಾನ್ ಕಿಶನ್ ತಾಳ್ಮೆಯ ಆಟ, ಕೊನೆಯಲ್ಲಿ ಕಮಿಂಡು ಮೆಂಡೀಸ್, ನಿತೀಶ್ ರೆಡ್ಡಿ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನಿಂದ ತಂಡಕ್ಕೆ ಗೆಲುವು ಒಲಿದು ಬಂದಿತು.
ಹೈದರಾಬಾದ್ ಪರ ಟ್ರಾವಿಸ್ ಹೆಡ್ 19ರನ್, ಇಶಾನ್ ಕಿಶನ್ 44 ರನ್, ಅನಿಕೇತ್ 19 ರನ್, ಕಮಿಂಡು ಮೆಂಡೀಸ್ 32 ರನ್, ನಿತೀಶ್ ರೆಡ್ಡಿ 19ರನ್ ಗಳಿಸಿದ್ರೆ ವೈಡ್, ನೋಬಾಲ್, ಬೈಸ್‌ನಿಂದಲೇ 15 ರನ್ ತಂಡಕ್ಕೆ ಸೇರ್ಪಡೆ ಆಯ್ತು.