ನವದೆಹಲಿ: ಪ್ರತಿ ಇನ್ನಿಂಗ್ಸ್‌ನಲ್ಲೂ ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುವ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad )ತಂಡವು ಐಪಿಎಲ್‌ನಲ್ಲಿ (IPL 2024) ಮತ್ತೊಂದು ಐತಿಹಾಸಿಕ ದಾಖಲೆ ಬರೆದಿದೆ.
ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಹೈದರಾಬಾದ್ ತಂಡದ ಬ್ಯಾಟರ್‌ಗಳು ಆರಂಭದಿಂದಲೇ ಅಬ್ಬರಿದರು. ಸಿಕ್ಸರ್, ಬೌಂಡರಿ ಸಿಡಿಸುತ್ತಾ ಡೆಲ್ಲಿ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿದ್ದಾರೆ. ಮೊದಲ 6 ಓವರ್‌ಗಳಲ್ಲೇ 125 ರನ್ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಪವರ್ ಪ್ಲೇನಲ್ಲಿ ಅತಿಹೆಚ್ಚು ರನ್ ಸಿಡಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ. ಈ ಹಿಂದೆ 6 ಓವರ್‌ಗಳಲ್ಲಿ 105 ರನ್ ಸಿಡಿಸಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್ (KKR) ಅಗ್ರ ಸ್ಥಾನದಲ್ಲಿತ್ತು.
Advertisement
Advertisement
ಆರಂಭಿಕರಾಗಿ ಕಣಕ್ಕಿಳಿದಿದ್ದ ಟ್ರಾವಿಸ್ ಹೆಡ್ (Travis Head) ಹಾಗೂ ಅಭಿಷೇಕ್ ಶರ್ಮಾ (Abhishek Sharma) ಜೋಡಿ ಜೊತೆಯಾಗಿ ಅಬ್ಬರಿಸಲು ಶುರು ಮಾಡಿದರು. ಮೊದಲ ಓವರ್‌ನಲ್ಲೇ 19 ರನ್ ಸಿಡಿಸಿದ್ದ ಈ ಜೋಡಿ 2,3,4,5,6ನೇ ಓವರ್‌ಗಳಲ್ಲಿ ಕ್ರಮವಾಗಿ 21, 22, 21, 20, 22 ರನ್ ಚಚ್ಚಿ ಹೊಸ ದಾಖಲೆ ಬರೆಯಿತು. ಈ ವೇಳೆ ಟ್ರಾವಿಸ್ ಹೆಡ್ ಕೇವಲ 26 ಎಸೆತಗಳಲ್ಲಿ ಭರ್ಜರಿ 84 ರನ್ ಗಳಿಸಿದ್ದರೆ, ಅಭಿಷೇಕ್ ಶರ್ಮಾ 10 ಎಸೆತಗಳಲ್ಲಿ ಸ್ಫೋಟಕ 40 ರನ್ ಚಚ್ಚಿದ್ದರು. ಮೊದಲ 6 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ ಈ ಜೋಡಿ 125 ರನ್ ಬಾರಿಸುವ ಮೂಲಕ ಮತ್ತೊಂದು ದಾಖಲೆ ತನ್ನ ಹೆಸರಿಗೆ ಸೇರಿಸಿಕೊಂಡಿತು. ಇದರಲ್ಲಿ ಬರೋಬ್ಬರಿ 13 ಬೌಂಡರಿ 11 ಸಿಕ್ಸರ್‌ಗಳು ಸೇರಿದ್ದವು. ನಂತರ ಅಭಿಷೇಕ್ ಶರ್ಮಾ 12 ಎಸೆತಗಳಲ್ಲಿ 46 ರನ್ ಸಿಡಿಸಿ ಔಟಾದರು.
Advertisement
Advertisement
ಪವರ್ ಪ್ಲೇನಲ್ಲಿ ದಾಖಲೆ ರನ್ ಸಿಡಿಸಿದ ಟಾಪ್-5 ತಂಡಗಳು
ಸನ್ ರೈಸರ್ಸ್ ಹೈದರಾಬಾದ್ – 125 ರನ್- 2024ರಲ್ಲಿ
ಕೋಲ್ಕತ್ತಾ ನೈಟ್‌ರೈಡರ್ಸ್ – 105 – 2017ರಲ್ಲಿ
ಚೆನ್ನೈ ಸೂಪರ್ ಕಿಂಗ್ಸ್ – 100 ರನ್ – 2014ರಲ್ಲಿ
ಚೆನ್ನೈ ಸೂಪರ್ ಕಿಂಗ್ಸ್ – 90 ರನ್ – 2015ರಲ್ಲಿ
ಕೊಚ್ಚಿ ಟಸ್ಕರ್ಸ್ ಕೇರಳ – 87 ರನ್ – 2011ರಲ್ಲಿ
ತಂಡವೊಂದರ ಗರಿಷ್ಠ ಸ್ಕೋರರ್‌ನಲ್ಲೂ ಸನ್‌ರೈಸರ್ಸ್ ಟಾಪ್
ಸನ್ ರೈಸರ್ಸ್ ಹೈದರಾಬಾದ್ – 287 ರನ್
ಸನ್ ರೈಸರ್ಸ್ ಹೈದರಾಬಾದ್ – 277 ರನ್
ಕೋಲ್ಕತ್ತಾ ನೈಟ್ ರೈಡರ್ಸ್ – 272 ರನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು – 263 ರನ್
ಲಕ್ನೋ ಸೂಪರ್ ಜೈಂಟ್ಸ್ – 257 ರನ್