ಹೈದರಾಬಾದ್: ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಬ್ಯಾಟರ್‌ಗಳರು ಸಿಕ್ಸರ್, ಬೌಂಡರಿಗಳನ್ನು ಸಿಡಿಸಿದ ಪರಿಣಾಮ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ಐಪಿಎಲ್‌ನಲ್ಲಿ (IPL) ಹೊಸ ದಾಖಲೆ ಬರೆದಿದೆ.
ಮೂರು ವಿಕೆಟ್ ನಷ್ಟಕ್ಕೆ 277 ರನ್ ಹೊಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ತಂಡ ಎಂಬ ಹೆಗ್ಗಳಿಕೆಗೆ ಎಸ್‌ಆರ್‌ಹೆಚ್ (SRH) ಪಾತ್ರವಾಯಿತು.
Advertisement
The moment when @SunRisers created HISTORY!
Final over flourish ft. Heinrich Klaasen 🔥
Head to @JioCinema and @StarSportsIndia to watch the match LIVE#TATAIPL | #SRHvMI pic.twitter.com/QVERNlftkb
— IndianPremierLeague (@IPL) March 27, 2024
Advertisement
ಈ ಹಿಂದೆ ಅತಿ ಹೆಚ್ಚು ರನ್ ಸಿಡಿಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹೆಸರಿನಲ್ಲಿ ಇತ್ತು. 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 263 ರನ್ ಹೊಡೆದಿತ್ತು. ಈ ಪಂದ್ಯದಲ್ಲಿ ಕ್ರಿಸ್ ಗೇಲ್ ಔಟಾಗದೇ 175 ರನ್ ಚಚ್ಚಿದ್ದರು.
Advertisement
ಟಾಸ್ ಸೋತು ಬ್ಯಾಟ್ ಮಾಡಿದ ಹೈದರಾಬಾದ್ ಬ್ಯಾಟರ್‌ಗಳು ಆರಂಭದಿಂದಲೇ ಚಚ್ಚಲು ಆರಂಭಿಸಿದರು. ಮೊದಲ ವಿಕೆಟಿಗೆ 4.1 ಓವರ್‌ಗಳಲ್ಲಿ 45 ರನ್ ಬಂದಿತ್ತು. ಎರಡನೇ ವಿಕೆಟಿಗೆ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ 23 ಎಸೆತಗಳಲ್ಲಿ 68 ರನ್ ಹೊಡೆದರು. ಟ್ರಾವಿಸ್ ಹೆಡ್ 62 (24 ಎಸೆತ, 9 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು. ಇದನ್ನೂ ಓದಿ: 42ನೇ ವಯಸ್ಸಿನಲ್ಲೂ ಎಷ್ಟೊಂದು ಉತ್ಸಾಹ – ಚಿರತೆಯಂತೆ ನೆಗೆದು ಕ್ಯಾಚ್ ಹಿಡಿದ ಮಹಿ; ವೀಡಿಯೋ ವೈರಲ್
Advertisement
ಅಭಿಷೇಕ್ ಶರ್ಮಾ ಮತ್ತು ಮಾರ್ಕ್ರಾಮ್ 19 ಎಸೆತಗಳಲ್ಲಿ 48 ರನ್ ಜೊತೆಯಾಟವಾಡಿದರು. ಅಭಿಷೇಕ್ ಶರ್ಮಾ 63 ರನ್ (23 ಎಸೆತ, 3 ಬೌಂಡರಿ, 7 ಸಿಕ್ಸರ್) ಹೊಡೆದು ವಿಕೆಟ್ ಒಪ್ಪಿಸಿದರು.
Abhishek Sharma's scintillating knock comes to an end but he's put @SunRisers on 🔝 with his astonishing strokes 🔥
Head to @JioCinema and @StarSportsIndia to watch the match LIVE#TATAIPL | #SRHvMI pic.twitter.com/OoHgAK6yge
— IndianPremierLeague (@IPL) March 27, 2024
ಶತಕದ ಜೊತೆಯಾಟ:
ಮಾರ್ಕ್ರಾಮ್ ಮತ್ತು ಹೆನ್ರಿಕ್ ಕ್ಲಾಸನ್ (Heinrich Klaasen) ಮುಂಬೈ ಬೌಲರ್‌ಗಳನ್ನು ಅಕ್ಷರಶ: ಚೆಂಡಾಡಿದರು. ಸಿಕ್ಸ್, ಬೌಂಡರಿ ಹೊಡೆದು ಬೆವರಿಳಿಸಿದರು. ಇಬ್ಬರು ಮುರಿಯದ ನಾಲ್ಕನೇ ವಿಕೆಟಿಗೆ 55 ಎಸೆತಗಳಲ್ಲಿ 116 ರನ್ ಹೊಡೆದು ತಂಡದ ಮೊತ್ತವನ್ನು 270 ರನ್‌ಗಳ ಗಡಿಯನ್ನು ದಾಟಿಸಿದರು. ಕ್ಲಾಸನ್ ಔಟಾಗದೇ 80 ರನ್ ( 34 ಎಸೆತ, 4 ಬೌಂಡರಿ, 7 ಸಿಕ್ಸರ್), ಮಾರ್ಕ್ರಾಮ್ ಔಟಾಗದೇ 42 ರನ್ ( 28 ಎಸೆತ, 2 ಬೌಂಡರಿ, 1 ಸಿಕ್ಸರ್) ಹೊಡೆದರು.
A SCORE CARD IN IPL HISTORY BOOKS. ⭐ pic.twitter.com/2Px678fztc
— Johns. (@CricCrazyJohns) March 27, 2024
ಸ್ಫೋಟಕ ಅರ್ಧಶತಕ:
ಟ್ರಾವಿಸ್ ಹೆಡ್ – 18 ಎಸೆತ, 9 ಬೌಂಡರಿ, 2 ಸಿಕ್ಸರ್
ಅಭಿಷೇಕ್ ಶರ್ಮಾ – 16 ಎಸೆತ, 2 ಬೌಂಡರಿ, 6 ಸಿಕ್ಸರ್
ಹೆನ್ರಿಕ್ ಕ್ಲಾಸನ್ – 23 ಎಸೆತ,1 ಬೌಂಡರಿ, 5 ಸಿಕ್ಸರ್
ರನ್ ಏರಿದ್ದು ಹೇಗೆ?
50 ರನ್ – 28 ಎಸೆತ
100 ರನ್ – 43 ಎಸೆತ
150 ರನ್ – 63 ಎಸೆತ
200 ರನ್ – 90 ಎಸೆತ
250 ರನ್ – 114 ಎಸೆತ
277 ರನ್ – 120 ಎಸೆತ