ಮುಂಬೈ: ಸನ್‍ರೈಸರ್ಸ್ ಹೈದರಾಬಾದ್ ತಂಡದ ವೇಗಿ ಭುವನೇಶ್ವರ್ ಕುಮಾರ್ ಐಪಿಎಲ್ ಇತಿಹಾಸದಲ್ಲಿ 1,400 ಡಾಟ್ ಬೌಲ್‍ಗಳನ್ನು ಎಸೆದು ಅತಿ ಹೆಚ್ಚು ಡಾಟ್ ಬಾಲ್ ಎಸೆದ ದಾಖಲೆ ಬರೆದಿದ್ದಾರೆ.
2022ರ ಆವೃತ್ತಿಯ ಪವರ್ ಪ್ಲೇನಲ್ಲಿ ಆರಂಭಿಕ ಹಂತದಲ್ಲಿ ಅಷ್ಟೇನು ಹೇಳಿಕೊಳ್ಳುವಷ್ಟು ತಮ್ಮ ಕೈಚಳಕ ತೋರಿಸುವುದಿಲ್ಲ. ಆದರೆ ಡೆತ್ ಓವರ್‌ಗಳಲ್ಲಿ ಎದುರಾಳಿ ತಂಡದ ಬ್ಯಾಟ್ಸ್‌ಮ್ಯಾನ್‌ಗಳು ರನ್ ಹೊಡೆಯಲು ತಿಣುಕಾಡುವಂತೆ ಬೌಲಿಂಗ್ ಮಾಡುತ್ತಿದ್ದು, ಈ ಮೂಲಕ ಹೈದರಾಬಾದ್ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಇದನ್ನೂ ಓದಿ: ಬಾಕ್ಸಿಂಗ್ ರಿಂಗ್‍ನಲ್ಲಿಯೇ ಹೃದಯಾಘಾತ – ಚಾಂಪಿಯನ್ ಮೂಸಾ ಯಮಕ್ ವಿಧಿವಶ
Silencing batsmen and run-rates since 2014. ????????@BhuviOfficial | #OrangeArmy #ReadyToRise #TATAIPL pic.twitter.com/nZIeLLaoQo
— SunRisers Hyderabad (@SunRisers) May 19, 2022
- Advertisement3
ಈ ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಭುವನೇಶ್ವರ್ ಕುಮಾರ್ ಮೇಡನ್ ಓವರ್‌ಗೈದು 1 ವಿಕೆಟ್ ಪಡೆದುಕೊಂಡಿದ್ದರು. ಉತ್ತರ ಪ್ರದೇಶದ ಬೌಲರ್ ಆದ ಅವರು ಟೀಂ ಇಂಡಿಯಾದ ಪರ ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಸಹ ಆಡಿದ ಅನುಭವವನ್ನು ಹೊಂದಿದ್ದಾರೆ. ಈ ಹಿಂದೆ ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಅವರನ್ನು 4.2 ಕೋಟಿ ನೀಡಿ ಎಸ್‍ಆರ್‌ಹೆಚ್ ತಂಡದಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ಇದನ್ನೂ ಓದಿ: ವಿರೋಚಿತ ಸೋಲು – ಕಣ್ಣೀರಿಟ್ಟ ರಿಂಕು ಸಿಂಗ್
- Advertisement
ಎಸ್‍ಆರ್‌ಹೆಚ್ ತಂಡವು ಈಗಾಗಲೇ ಪ್ಲೇ ಆಫ್‍ನಿಂದ ಬಹುತೇಕ ಹೊರಬಿದ್ದಿದ್ದು. ಲೀಗ್‍ನ ಒಂದೇ ಒಂದು ಪಂದ್ಯ ಬಾಕಿ ಉಳಿದಿದೆ. ಪ್ಲೇ ಆಫ್‍ನ ಓಟದಲ್ಲಿ ಉಳಿಯಬೇಕಾದರೆ ಅವರು ತಮ್ಮ ಮುಂದಿನ ಪಂದ್ಯವನ್ನು ಭಾರೀ ಅಂತರದಿಂದ ಗೆಲ್ಲಬೇಕಾದ ಅನಿವಾರ್ಯವಿದೆ. ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಮುಂದಿನ ಪಂದ್ಯಗಳನ್ನು ಸೋಲಬೇಕು ಆಗ ಹೈದರಾಬಾದ್‍ಗೆ ಪ್ಲೇ ಆಫ್ ಬಾಗಿಲು ತೆರೆದುಕೊಳ್ಳಲಿದೆ.