ಕನ್ನಡದ ನಟಿ ಶ್ರೀಲೀಲಾ ಸಿನಿಮಾಗಿಂತ ವೈಯಕ್ತಿಕ ವಿಚಾರವಾಗಿ ಹೆಚ್ಚು ಸುದ್ದಿಯಾಗ್ತಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಸೆಲ್ಫಿ ಫೋಟೋ ಹಂಚಿಕೊಂಡಿದ್ದಾರೆ. ಈ ಹೊಸ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಇದನ್ನೂ ಓದಿ: ತೆಲುಗಿಗೆ ‘ಕಾಂತಾರ’ ಲೀಲಾ- ‘ಮೂಡ್ ಆಫ್ ತಮ್ಮುಡು’ ಚಿತ್ರದ ಟೀಸರ್ ಔಟ್
ತೆಲುಗಿನ ‘ಪುಷ್ಪ 2′ ಚಿತ್ರದ ಕಿಸ್ಸಿಕ್ ಹಾಡು ಹಿಟ್ ಆದ್ಮೇಲೆ ಬಾಲಿವುಡ್ ಮಂದಿ ಶ್ರೀಲೀಲಾಗೆ ಭರ್ಜರಿ ಅವಕಾಶ ನೀಡುತ್ತಿದ್ದಾರೆ. ಸದ್ಯ ಕಾರ್ತಿಕ್ ಜೊತೆ `ಆಶಿಕಿ 3’ ಸಿನಿಮಾ ಮಾಡ್ತಿದ್ದಾರೆ. ಹೀಗಿರುವಾಗ ಸಿನಿಮಾಗಿಂತ ಪರ್ಸನಲ್ ವಿಚಾರವಾಗಿ ಮತ್ತಷ್ಟು ಸುದ್ದಿಯಾಗಿದ್ದಾರೆ. ಆಗಾಗ ಇಬ್ಬರ ಡೇಟಿಂಗ್ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಅದಕ್ಕೆ ಪೂರಕವೆಂಬಂತೆ ಕಾರ್ತಿಕ್ ಜೊತೆಗಿನ ಶ್ರೀಲೀಲಾ ಕ್ಯೂಟ್ ಸೆಲ್ಫಿ ಡೇಟಿಂಗ್ ಸುದ್ದಿಗೆ ಪುಷ್ಠಿ ನೀಡಿದೆ. ಇದನ್ನೂ ಓದಿ:ತಡವಾಗಿ ಆಮೀರ್ ಖಾನ್ ಪ್ರಶಂಸೆ- ಈಗ ಎಚ್ಚರವಾದ್ರಾ ಎಂದು ಪ್ರಶ್ನಿಸಿದ ನೆಟ್ಟಿಗರು
ಕಾರ್ತಿಕ್ ಹಿಡಿದ ಕ್ಯಾಮೆರಾಗೆ ಮುದ್ದಾಗಿ ನಟಿ ಸ್ಟೈಲ್ ಮಾಡಿದ್ದಾರೆ. ಇದನ್ನು ಫ್ಯಾನ್ಸ್ ಕ್ಯೂಟ್ ಕಪಲ್ ಎಂದು ಹೊಗಳಿದ್ದಾರೆ. ಇನ್ನೂ ಇಬ್ಬರೂ ಡೇಟಿಂಗ್ ಮಾಡ್ತಿದ್ದೀರಾ ಎಂದು ನೇರವಾಗಿಯೇ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
View this post on Instagram
ಇತ್ತೀಚೆಗೆ ಅವಾರ್ಡ್ ಫಂಕ್ಷನ್‌ವೊಂದರಲ್ಲಿ ಕಾರ್ತಿಕ್ ಆರ್ಯನ್ ತಾಯಿಗೆ ಯಾವ ಥರದ ಸೊಸೆ ಬೇಕು ಎಂದು ಕರಣ್ ಜೋಹರ್ ಕೇಳಿದರು. ಅದಕ್ಕೆ ನಟನ ತಾಯಿ, ಡಾಕ್ಟರ್ ಆಗಿರುವ ಸೊಸೆ ಬೇಕು ಎಂದಿದ್ದರು. ಎಲ್ಲರಿಗೂ ಗೊತ್ತಿರುವಂತೆ ಶ್ರೀಲೀಲಾ ಅವರು ಎಂಬಿಬಿಎಸ್ ಓದಿಕೊಂಡಿದ್ದಾರೆ. ಅಲ್ಲಿ ಕಾರ್ತಿಕ್ ತಾಯಿ ಡಾಕ್ಟರ್ ಸೊಸೆ ಬೇಕು ಎಂದ ಕೂಡಲೇ ಎಲ್ಲರ ಕಣ್ಣು ಶ್ರೀಲೀಲಾ ಮೇಲೆ ಬಿದ್ದಿತ್ತು.
ಅಂದಿನ ಆ ಹೇಳಿಕೆ ನಂತರ ಇದೀಗ ಕಾರ್ತಿಕ್ ಆರ್ಯನ್ ಜೊತೆಗಿನ ಶ್ರೀಲೀಲಾ ಪೋಸ್ಟ್ ವೈರಲ್ ಆಗಿದೆ. ಇದರಿಂದ ಗಾಸಿಪ್ ಪ್ರಿಯರ ಬಾಯಿಗೆ ಆಹಾರವಾಗಿದ್ದಾರೆ.