ನಟಿ ಶ್ರೀಲೀಲಾ (Sreeleela) ತೆಲುಗಿನಲ್ಲಿ (Tollywood) ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸದ್ಯ ‘ರಾಬಿನ್‌ಹುಡ್’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮೂಲಕ ಮತ್ತೆ ನಿತಿನ್‌ಗೆ ನಾಯಕಿಯಾಗಿ ಶ್ರೀಲೀಲಾ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದನ್ನೂ ಓದಿ:ಮಾ.30ರಂದು ರಿಲೀಸ್ ಆಗಲಿದೆ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾ
- Advertisement 2-
ಇತ್ತೀಚೆಗೆ ಶ್ರೀಲೀಲಾ ನಟಿಸಿರುವ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡೋದ್ರಲ್ಲಿ ಸೋತಿದೆ. ಹಾಗಂತ ಅವರಿಗೆ ಅವಕಾಶಗಳ ಕೊರತೆಯಿಲ್ಲ. ‘ಪುಷ್ಪ 2’ನಲ್ಲಿ (Pushpa 2) ಅಲ್ಲು ಅರ್ಜುನ್ (Allu Arjun) ಜೊತೆ ಶ್ರೀಲೀಲಾ ಸೊಂಟ ಬಳುಕಿಸಿದ್ದು, ಪಡ್ಡೆಹುಡುಗರಿಗೆ ಕಿಕ್ ಕೊಟ್ಟಿತ್ತು. ಈಗ ‘ರಾಬಿನ್‌ಹುಡ್’ ಜೊತೆ ನಟಿ ಬರುತ್ತಿದ್ದಾರೆ.
- Advertisement 3-
- Advertisement 4-
‘ರಾಬಿನ್‌ಹುಡ್’ ‘(Robinhood) ಸಿನಿಮಾದಲ್ಲಿ ನಿತಿನ್ (Nithin) ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದಾರೆ. 2ನೇ ಬಾರಿ ನಿತಿನ್‌ಗೆ ಅವರು ಜೋಡಿಯಾಗಿದ್ದಾರೆ. ಇದೇ ಮಾ.28ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾ ಹಿಟ್ ಆದರೆ ಮತ್ತಷ್ಟು ಅವಕಾಶಗಳು ನಟಿಯನ್ನು ಅರಸಿ ಬರಲಿದೆ. ಈ ಚಿತ್ರದ ಮೂಲಕ ನಿತಿನ್ ಜೊತೆ ಮತ್ತೊಮ್ಮೆ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಈ ಹಿಂದೆ ‘ಎಕ್ಸ್ಟ್ರಾ ಆರ್ಡಿನರಿ ಮ್ಯಾನ್’ ಸಿನಿಮಾದಲ್ಲಿ ನಿತಿನ್‌ಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದರು. ಆದರೆ ಇದು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಹಾಗಾಗಿ ‘ರಾಬಿನ್‌ಹುಡ್’ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ‘ಪುಷ್ಪ 2’ ನಿರ್ಮಿಸಿದ್ದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. 2ನೇ ಬಾರಿಯಾದರೂ ನಿತಿನ್ ಮತ್ತು ಶ್ರೀಲೀಲಾ ಜೋಡಿ ಕಮಾಲ್ ಮಾಡುತ್ತಾ? ಎಂದು ಕಾದುನೋಡಬೇಕಿದೆ.
ಅಂದಹಾಗೆ, ಶಿವಕಾರ್ತಿಕೇಯನ್ ಜೊತೆ ತಮಿಳು ಸಿನಿಮಾ, ಪವನ್ ಕಲ್ಯಾಣ್ ಜೊತೆ ತೆಲುಗು ಸಿನಿಮಾ, ಕಾರ್ತಿಕ್ ಆರ್ಯನ್ ಜೊತೆ ಬಾಲಿವುಡ್ ಚಿತ್ರ, ಸೈಫ್ ಪುತ್ರ ಇಬ್ರಾಹಿಂ ಅಲಿ ಖಾನ್ ಜೊತೆಯೊಂದು ಚಿತ್ರ ಸೇರಿದಂತೆ ಹಲವಾರು ಅವಕಾಶಗಳು ನಟಿಯ ಕೈಯಲ್ಲಿವೆ.