ಕನ್ನಡ ಪ್ರೇಕ್ಷಕರಿಗೆ ಶ್ರೀಲೀಲಾ ಗುಡ್ ನ್ಯೂಸ್

Public TV
1 Min Read
sreeleela 3

ನ್ನಡದ ‘ಕಿಸ್’ ನಟಿ ಶ್ರೀಲೀಲಾ (Sreeleela) ತೆಲುಗು ಅಂಗಳದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚ್ತಿದ್ದಾರೆ. ಸ್ಟಾರ್ ನಟರಿಗೆ ಸಾಲು ಸಾಲು ಸಿನಿಮಾಗಳಿಗೆ ಹೀರೋಯಿನ್ ಆಗುವ ಮೂಲಕ ರಶ್ಮಿಕಾ, ಪೂಜಾ, ಕೃತಿ ಶೆಟ್ಟಿಗೆ ಶ್ರೀಲೀಲಾ ಠಕ್ಕರ್ ಕೊಡ್ತಿದ್ದಾರೆ. ಹೀಗಿರುವಾಗ ಶ್ರೀಲೀಲಾ ಕನ್ನಡ ಸಿನಿಮಾ ಮಾಡಲ್ವಾ ಎಂದು ಎದುರು ನೋಡ್ತಿದ್ದವರಿಗೆ ನಟಿ ಸಿಹಿ ಸುದ್ದಿ ನೀಡಿದ್ದಾರೆ.

sreeleela‘ಭರಾಟೆ’ ಬ್ಯೂಟಿ ಶ್ರೀಲೀಲಾ ಈಗ ಟಾಲಿವುಡ್‌ನ(Tollywood) ಡ್ರೀಮ್‌ ಗರ್ಲ್‌ ಆಗಿ ಮೆರೆಯುತ್ತಿದ್ದಾರೆ. ಒಂದು ಸಿನಿಮಾಗೆ 3ರಿಂದ 4 ಕೋಟಿ ರೂಪಾಯಿ ಸಂಭಾವನೆ ಜಾರ್ಜ್ ಮಾಡುವ ಮೂಲಕ ಸೆನ್ಸೇಷನ್ ಕ್ರಿಯೆಟ್ ಮಾಡ್ತಿದ್ದಾರೆ. ಇದನ್ನೂ ಓದಿ:ಗ್ಲೋಬಲ್ ಸ್ಟಾರ್ ಆಗಲು ಭಾರತ ಬಿಡಬೇಕಾ? ಪ್ರಿಯಾಂಕಾಗೆ ದೀಪಿಕಾ ಟಾಂಗ್

sreeleela 6ತೆಲುಗಿನಲ್ಲೇ ಬ್ಯುಸಿ ನಟಿಯಾಗಿರೋ ಶ್ರೀಲೀಲಾ ಕಡೆಯದಾಗಿ ‘ಬೈಟು ಲವ್’ ಚಿತ್ರದಲ್ಲಿ ಧನ್ವೀರ್‌ಗೆ ಜೋಡಿಯಾಗಿ ನಟಿಸಿದ್ರು. ಸದ್ಯ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ಜೊತೆ ‘ಜ್ಯೂನಿಯರ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರ ಕನ್ನಡದ ಜೊತೆ ತೆಲುಗಿನಲ್ಲಿಯೂ ರಿಲೀಸ್ ಆಗಲಿದೆ.

ಈ ಚಿತ್ರ ಬಿಟ್ಟು ಇದೀಗ ಕನ್ನಡದ ಹೊಸ ಚಿತ್ರಕ್ಕೆ ಶ್ರೀಲೀಲಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯದಲ್ಲೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಿನಿಮಾ ಬಗ್ಗೆ ಅನೌನ್ಸ್ ಮಾಡೋದಾಗಿ ನಟಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಯಾವ ಹೀರೋಗೆ ಶ್ರೀಲೀಲಾ ಹೀರೋಯಿನ್‌ ಆಗಲಿದ್ದಾರೆ. ಸಿನಿಮಾ ಸಂಪೂರ್ಣ ಮಾಹಿತಿ ನೀಡೋದಾಗಿ ತಿಳಿಸಿದ್ದಾರೆ. ಈ ಮೂಲಕ ಕನ್ನಡಕ್ಕೆ ಮತ್ತೆ ಶ್ರೀಲೀಲಾ ಬರೋದಿಲ್ಲ ಎಂದವರಿಗೂ ನಟಿ ಉತ್ತರಿಸಿದ್ದಾರೆ.

Share This Article