ಬಾಲಿವುಡ್‌ಗೆ ನಟಿ- ಸ್ಟಾರ್ ನಟನ ಪುತ್ರನಿಗೆ ಶ್ರೀಲೀಲಾ ನಾಯಕಿ

Public TV
1 Min Read
SREELEELA 1 3

ನ್ನಡದ ನಟಿ ಶ್ರೀಲೀಲಾ (Sreeleela) ಇದೀಗ ಟಾಲಿವುಡ್‌ನಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಸ್ಯಾಂಡಲ್‌ವುಡ್, ಟಾಲಿವುಡ್‌ನಲ್ಲಿ ಮಿಂಚಿದ ಬಳಿಕ ಬಾಲಿವುಡ್‌ಗೆ (Bollywood) ‘ಕಿಸ್’ ನಟಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸ್ಟಾರ್ ನಟನ ಪುತ್ರನ ಜೊತೆ ನಟಿ ರೊಮ್ಯಾನ್ಸ್ ಮಾಡಲಿದ್ದಾರೆ. ಇದನ್ನೂ ಓದಿ:ರಾಜ-ರಾಣಿ ಶೋ: ಸೆಲೆಬ್ರಿಟಿ ದಂಪತಿಗಳ ಕಚಗುಳಿ

sreeleela 1

ಟಾಲಿವುಡ್ ಬಳಿಕ ಬಾಲಿವುಡ್‌ನಲ್ಲಿ ನಟಿಗೆ ಅದೃಷ್ಟದ ಬಾಗಿಲು ತೆರೆದಿದೆ. ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂಗೆ (Ibrahim Ali Khan) ಶ್ರೀಲೀಲಾ ಜೋಡಿಯಾಗ್ತಿದ್ದಾರೆ ಎನ್ನಲಾಗಿದೆ. ‘ಡೈಲರ್’ ಎಂಬ ಹಿಂದಿ ಸಿನಿಮಾದಲ್ಲಿ ಶ್ರೀಲೀಲಾ ಲೀಡ್ ರೋಲ್‌ನಲ್ಲಿ ನಟಿಸಲು ಕರೆ ಬಂದಿದೆಯಂತೆ. ಇದೇ ಆಗಸ್ಟ್‌ನಿಂದ ಸಿನಿಮಾ ಶೂಟಿಂಗ್ ಕೂಡ ಶುರುವಾಗಲಿದ್ದು, ಶ್ರೀಲೀಲಾ ಕೂಡ ಸಾಥ್ ನೀಡುತ್ತಿದ್ದಾರೆ.

sreeleela 1 1ಮೊದಲ ಹಿಂದಿ ಸಿನಿಮಾದಲ್ಲೇ ನಟಿಗೆ ಉತ್ತಮ ಪಾತ್ರ ಸಿಕ್ಕಿದೆಯಂತೆ. ಇದೇ ಮೊದಲ ಬಾರಿಗೆ ಯುವ ನಟ ಇಬ್ರಾಹಿಂ ಜೊತೆ ಶ್ರೀಲೀಲಾ ನಟಿಸುತ್ತಿರುವ ಕಾರಣ, ಈ ಜೋಡಿಯನ್ನು ಸಿನಿಮಾದಲ್ಲಿ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.

ಅಂದಹಾಗೆ, ಭಗವಂತ ಕೇಸರಿ, ಗುಂಟೂರು ಖಾರಂ ಸಿನಿಮಾ ಬಳಿಕ ನಟಿ ಸೈಲೆಂಟ್ ಆಗಿದ್ದರು. ಇದೀಗ ಮತ್ತೆ ಸಿನಿಮಾ ಟ್ರ್ಯಾಕ್‌ಗೆ ನಟಿ ಮರಳಿದ್ದಾರೆ. ತೆಲುಗಿನ ನಟ ರವಿತೇಜ (Ravi Teja) ಜೊತೆ ಕೂಡ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಮತ್ತೆ ಶ್ರೀಲೀಲಾ ಜಮಾನ ಶುರುವಾಗೋದು ಗ್ಯಾರಂಟಿ ಅಂತಿದ್ದಾರೆ ನೆಟ್ಟಿಗರು.

Share This Article