ತುಮಕೂರು: ಮೇಲುಕೋಟೆ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು, ಅರಸಿಕೆರೆ ಶಾಸಕ ಶಿವಲಿಂಗೇಗೌಡರು ಪಕ್ಷ ತೊರೆಯುವ ಮಾತುಕೇಳಿ ಬಂದಿದ್ದು 2023ರ ನಂತರ ಯಾವ ಬೆಳವಣಿಗೆ ಬೇಕಾದರೂ ನಡೆಯಬಹುದು ಎಂದು ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.
Advertisement
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ನಾನೂ ಸೇರಿದಂತೆ ಕೆಲವಷ್ಟು ಜನ ಯಾವ ನಿರ್ಧಾರಬೇಕಾದರೂ ತೆಗೆದುಕೊಳ್ಳಬಹುದು ಎಂದು ಹೇಳುವ ಮೂಲಕ ಸಾಮೂಹಿಕವಾಗಿ ಪಕ್ಷ ತೊರೆಯುವ ಮುನ್ಸೂಚನೆ ಕೊಟ್ಟಿದ್ದಾರೆ. ಇದೇ ಪಕ್ಷದಲ್ಲಿ ಇರುತ್ತೇನೆ ಎಂದು ಯಾರೂ ಕೂಡ ಬಾಂಡ್ ಪೇಪರಲ್ಲಿ ಬರೆದುಕೊಟ್ಟಿಲ್ಲ, ಸ್ವಾಭಿಮಾನಕ್ಕೆ ಧಕ್ಕೆ ತಂದುಕೊಂಡು ಅಧಿಕಾರ ಅನುಭವಿಸುವ ಅಗತ್ಯ ಇಲ್ಲ ಎಂದು ಪಕ್ಷದ ವಿರುದ್ಧದ ಅಸಮಾಧಾನ ಮುಂದುವರಿಸಿದ್ದಾರೆ. ಇದನ್ನೂ ಓದಿ: ಕನ್ನಡ ಸಂಘಟನೆಗಳು ಬಂದ್ ಕರೆಯನ್ನು ಕೈಬಿಡಬೇಕು: ಅಶ್ವತ್ಥ ನಾರಾಯಣ
Advertisement
Advertisement
ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷ ಸೋತಿದ್ದರಿಂದ ನನಗೆ ಬೇಜಾರು ಅಥವಾ ಸಂತೋಷ ಯಾವುದೂ ಇಲ್ಲ. ನಾನು ಜೆಡಿಎಸ್ ಪರ ಕೆಲಸ ಮಾಡಿಲ್ಲ. ಹಾಗಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಕಾಂಗ್ರೆಸ್‍ಗೆ ಮತಹಾಕಿರಬಹುದು ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದು ಮತ್ತು ಜೆಡಿಎಸ್ ಹೀನಾಯ ಸೋಲುಕಂಡಿದ್ದು ಎಂದು ಸ್ವಪಕ್ಷವನ್ನು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಬಟ್ಟೆ ಮಾಸ್ಕ್ ಬೇಡ.. ಎನ್95, ಕೆ95 ಮಾಸ್ಕ್‌ಗಳನ್ನೇ ಬಳಸಿ – ತಜ್ಞರ ಸಲಹೆ
Advertisement
ಜೆಡಿಎಸ್ ನಾಯಕರ ನಡವಳಿಕೆಯಿಂದ ಪಕ್ಷ ಸೋತಿದೆ. ನಾನು ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ. ನಾನು ಬಿಡಲ್ಲ ಅಂದ್ರು ನನ್ನ ಪಕ್ಷದಿಂದ ಹೊರಹಾಕಿದ್ದಾರೆ. ಹಾಗಂತ ನಾನೇ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದಿದ್ದೇನೆ ಅನ್ನುವಷ್ಟು ದೊಡ್ಡ ಮನುಷ್ಯ ನಾನಲ್ಲ. ನನಗೆ ಯೋಗ್ಯತೆ ಇಲ್ಲ ಎಂದು ನಮ್ಮ ನಾಯಕರೇ ಆಚೆ ಹಾಕಿರುವಾಗ ಇನ್ನೊಬ್ಬರನ್ನು ಗೆಲ್ಲಿಸ್ತೀನಿ ಅನ್ನೋದು ಉತ್ಪ್ರೇಕ್ಷೆ ಎಂದರು.