ತುಮಕೂರು: ಜೆಡಿಎಸ್ ತೊರೆಯುವ ಬಗ್ಗೆ ನಾನೆಲ್ಲೂ ಹೇಳಿಲ್ಲ. ಒಂದು ವೇಳೆ ರೇವಣ್ಣ ಅವರೇ ಪಕ್ಷ ಬಿಡಬಹುದೇನೊ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ಹೇಳಿದರು.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಸಾಗಸಂದ್ರದಲ್ಲಿ ಲೋಕೋಪಯೋಗಿ ಇಲಾಖೆಯಿಂದ 4 ಕೋಟಿ ವೆಚ್ಚದಲ್ಲಿ ನಿಟ್ಟೂರು ಹೊಸಕೆರೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ತುರುವೇಕೆರೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕರು, ನಾನು ಪಕ್ಷ ಬಿಡುವುದಾಗಿ ಕುಮಾರಸ್ವಾಮಿ ಅವರಿಗೆ ಯಾರು ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮೋದಿ ಭೇಟಿಗಾಗಿ 900 ಕಿಮೀ ಕಾಲ್ನಡಿಗೆ ಹೋರಟ ಯುವಕ
Advertisement
Advertisement
ವಿದ್ಯುತ್ ಕಾಯ್ದೆ ತಿದ್ದುಪಡಿ ಮಾಡಿ ರೈತರಿಗೆ ಮೀಟರ್ ಅಳವಡಿಸಿದರೆ ಬಿಜೆಪಿ ಅಂತ್ಯಕ್ಕೆ ನಾಂದಿಯಾಗಲಿದೆ. ಅಗತ್ಯ ವಸ್ತುಗಳ ಜೊತೆಗೆ ಅಡುಗೆ ಅನಿಲ ದರ ಮತ್ತೊಮ್ಮೆ ಏರಿಕೆಯಾಗಿದೆ. ಇಂಧನಗಳ ಬೆಲೆ ಗಗನಕ್ಕೇರಿದೆ. ಇದಕ್ಕೆ ಸಾರ್ವಜನಿಕರೆ ಉತ್ತರ ನೀಡಬೇಕಿದೆ ಎಂದರು. ಇದನ್ನೂ ಓದಿ: ವಿಶೇಷವಾದ ಬಂಧ, ಪ್ರೀತಿಯ ಶುದ್ಧ ರೂಪ: ರಾಧಿಕಾ ಪಂಡಿತ್
Advertisement
Advertisement
ಚುನಾವಣೆ ಸಂದರ್ಭದಲ್ಲಿ ಜಾತಿಗೊಂದು ನಿಗಮ ಮಂಡಳಿ ರಚಿಸಿದ್ದ ಸರ್ಕಾರ ಅದನ್ನು ಅನುಷ್ಠಾನಕ್ಕೆ ತರಲೇ ಇಲ್ಲ. ಅಧ್ಯಕ್ಷರ ನೇಮಕ ಮಾಡಿಲ್ಲ. ಅನುದಾನ ಬಿಡುಗಡೆ ಮಾಡಿಲ್ಲ. ಮಾದಲೂರು ಕೆರೆಗೆ ನೀರು ಹರಿಯಲಿದೆ ಎಂದು ಯಡಿಯೂರಪ್ಪ ಅವರೇ ನಿಯಮ ಬಾಹಿರ ಹೇಳಿಕೆ ನೀಡಿದ್ದರು. ಆದರೆ ಸಚಿವ ಮಾಧುಸ್ವಾಮಿ ಅವರ ಹೇಳಿಕೆ ಕಾನೂನಾತ್ಮಕವಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಶಂಕರಪ್ಪ, ಸದಸ್ಯರಾದ ಎಂ.ಡಿ.ದೊಡ್ಡಕೆಂಪಯ್ಯ, ಓಂಕಾರಮೂರ್ತಿ, ಮುಖಂಡರಾದ ರವಿಕುಮಾರ್, ಸಿದ್ದರಾಮೇಶ್, ಮಂಜಣ್ಣ, ಪರಮೇಶ್, ಲೋಕೋಪಯೋಗಿ ಇಲಾಖೆ ಎಇಇ ವಿಜಯ್‍ಕುಮಾರ್ ಇದ್ದರು.