ಜವಾರಿ ಕೋಳಿ ತಿಂದು ದೇವಸ್ಥಾನಕ್ಕೆ ಹೋಗಿದ್ದಾರಾ ರಾಹುಲ್?- ಎಸ್ ಆರ್ ಪಾಟೀಲ್ ಸ್ಪಷ್ಟನೆ ನೀಡಿದ್ದು ಹೀಗೆ

Public TV
1 Min Read
RAHUL FOOD

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕನಕಗಿರಿಯಲ್ಲಿರೋ ದೇವಸ್ಥಾನಕ್ಕೆ ಜವಾರಿ ಕೋಳಿ ತಿಂದು ತೆರಳಿದ್ದಾರೆ ಎಂಬ ಬಿಎಸ್ ಯಡಿಯೂರಪ್ಪ ಅವರ ಆರೋಪಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್ ಆರ್ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಮೊದಲು ಹಿಂದುತ್ವವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಹಿಂದೂ ಧರ್ಮಕ್ಕೂ ಪರಧರ್ಮ ಸಹಿಷ್ಣುತೆ ಎಂಬ ಅನೇಕ ವಿಚಾರಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. ಅವರ ಆರೋಪ ಶುದ್ಧ ಸುಳ್ಳಾಗಿದೆ. ನಾನು ಅವರ ಜೊತೆನೇ ಇದ್ದೇನೆ ಅಂದ್ರು.

FOOD 1

ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಬಂದು ಇಂದು 4ನೇ ದಿನವಾಗಿದೆ. ಹೀಗಾಗಿ ಅವರ ಆಹಾರವೇನು ಎಂದು ನನಗೆ ತಿಳಿದಿದೆ. ಯಾಕಂದ್ರೆ ನಾನು ಮೊನ್ನೆಯಿಂದ ಅವರ ಜೊತೆ ಇದ್ದೇನೆ. ಹೀಗಿರುವಾಗ ಒಬ್ಬರು ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪನವರು ಈ ರೀತಿ ಟ್ವೀಟ್ ಮಾಡುವುದು ಸರಿಯಲ್ಲ ಅಂತ ಹೇಳಿದ್ರು.

ಕಾಂಗ್ರೆಸ್ ನವರದ್ದು ಮಜವಾದ ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಮಾಜವಾದವನ್ನು ನಾವು ಭಾರತೀಯ ಜನತಾ ಪಕ್ಷದವರಿಂದ ಕಲಿಯಬೇಕಾಗಿಲ್ಲ. ನಮ್ಮಿಂದ ಅವರು ಕಲಿಯಬೇಕು. ಎಲ್ಲಾ ಜಾತಿ-ಧರ್ಮದವರನ್ನು ಒಂದು ಮಾಡಿಕೊಂಡು ನಾವು ಹೋಗುತ್ತಿದ್ದೇವೆ. ಹೀಗಾಗಿ ಅವರು ನಮ್ಮಿಂದ ಕಲಿಯಬೇಕು ಎಂದು ತಿಳಿಸಿದ್ದಾರೆ.

FOOD 2

ರಾಹುಲ್ ಗಾಂಧಿಯವರು ದೇವಾಲಯಕ್ಕೆ ಹೋಗುವಾಗ ಪರಿಶುದ್ಧ ಮನಸ್ಸು ಹಾಗೂ ನಿಷ್ಠೆಯಿಂದ ಹೋಗಿದ್ದಾರೆ. ಅಂದ್ರೆ ನಿಜವಾದ ದೈವಭಕ್ತಿಯಿಂದಲೇ ಹೋಗಿದ್ದಾರೆ. ಅವರು ಅಲ್ಲಿಗೆ ಗಿಮಿಕ್ ಮಾಡಲು ಹೋಗಿಲ್ಲ. ನಿಜವಾಗ್ಲೂ ದೇವರ ಮೇಲೆ ನಂಬಿಕೆ, ವಿಶ್ವಾಸದಿಂದಲೇ ಅವರು ದೇವಸ್ಥಾನಕ್ಕೆ ತೆರಳಿದ್ದಾರೆ ಎಂದು ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಧರ್ಮಸ್ಥಳಕ್ಕೆ ಮೀನು ತಿಂದು ಹೋಗಿದ್ದರು. ಇದೀಗ ರಾಹುಲ್ ಗಾಂಧಿ ಅವರು ಜವಾರಿ ಕೋಳಿ ತಿಂದು ಕೊಪ್ಪಳ ಜಿಲ್ಲೆಯಲ್ಲಿರೋ ಕನಕಗಿರಿಯ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಅವರು ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಎಲ್ಲರನ್ನೂ ಸಮನಾಗಿ ಕಾಣುವುದು ಸಮಾಜವಾದ, ನಿಮ್ಮದು ಮಜವಾದ ಅಂತ ಯಡಿಯೂರಪ್ಪ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದರು.

FOOD 3

FOOD 4

cm fish 1 1

Share This Article
Leave a Comment

Leave a Reply

Your email address will not be published. Required fields are marked *