ಸ್ಪುಟ್ನಿಕ್ ಲಸಿಕೆ ಓಮಿಕ್ರಾನ್‌ಗೆ ಪರಿಣಾಮಕಾರಿ – ರಷ್ಯಾ

Public TV
1 Min Read
Sputnik V Russia Corona Covid Vaccine 2

ಮಾಸ್ಕೋ: ಸ್ಪುಟ್ನಿಕ್-ವಿ ಲಸಿಕೆ ಕೋವಿಡ್-19 ರೂಪಾಂತರ ಓಮಿಕ್ರಾನ್ ಸೋಂಕಿನ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿದೆ ಎಂದು ರಷ್ಯಾ ತಿಳಿಸಿದೆ.

ಪ್ರಪಂಚದಾದ್ಯಂತ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವಂತೆ ಅದರ ಬಗೆಗಿನ ಭೀತಿಯೂ ತಾರಕಕ್ಕೇರುತ್ತಿದೆ. ಆದರೆ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಈ ಹೊಸ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತಿದೆ ಎಂದು ವರದಿ ನೀಡಿದೆ.

ರಷ್ಯಾದ ಆರೋಗ್ಯ ಸಚಿವಾಲಯದ ಭಾಗವಾಗಿರುವ ಗಮಲೇಂಯ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿದ ಸ್ಪುಟ್ನಿಕ್-ವಿ ಓಮಿಕ್ರಾನ್ ವಿರುದ್ಧ ಹೋರಾಡುವಲ್ಲಿ ಹೆಚ್ಚಿನ ಪರಿಣಾಮ ತೋರುತ್ತಿರುವುದು ಕಂಡು ಬಂದಿದೆ. ಇದನ್ನೂ ಓದಿ: ಭಾರತದಲ್ಲಿ ಓಮಿಕ್ರಾನ್‌ ಸೆಂಚುರಿ – 101 ಮಂದಿಗೆ ಸೋಂಕು

Sputnik 2

ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಸ್ಪುಟ್ನಿಕ್-ವಿ ಲಸಿಕೆ ಇತರ ಲಸಿಕೆಗಳಿಗಿಂತಲೂ ರೋಗಿಗಳಲ್ಲಿ ಮೂರರಿಂದ ಏಳು ಪಟ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಹಾಗೆಯೇ ಶೇ.80 ರಷ್ಟು ಪರಿಣಾಮಕಾರಿ ಫಲಿತಾಂಶವನ್ನು ತೋರಿದೆ ಎಂದು ತಿಳಿದು ಬರುತ್ತದೆ.

ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಬೂಸ್ಟರ್ ಆಗಿ ಪಡೆಯುವುದು ಕೂಡಾ ಹೆಚ್ಚು ಪರಿಣಾಮಕಾರಿ ಎಂಬ ಇನ್ನೊಂದು ಮಾಹಿತಿ ನೀಡಿದೆ. ಈ ಲಸಿಕೆಯನ್ನು ಪಡೆದುಕೊಂಡ 2-3 ತಿಂಗಳ ಬಳಿಕ ಓಮಿಕ್ರಾನ್ ವೈರಸ್ ವಿರುದ್ಧ ಅತೀ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಘಾನಾದಿಂದ ಆಗಮಿಸಿದ ವ್ಯಕ್ತಿಗೆ ಸೋಂಕು – ತುರ್ತು ಸಭೆ ನಡೆಸಿದ ಮಂಗಳೂರು ಡಿಸಿ

sputnik light 1

ಈ ಹಿಂದಿನ ವರದಿಗಳ ಪ್ರಕಾರ ಸ್ಪುಟ್ನಿಕ್-ವಿಯ ಎರಡು ಡೋಸ್‌ಗಳನ್ನು 21 ದಿನಗಳ ಅಂತರದಲ್ಲಿ ಪಡೆದುಕೊಳ್ಳಬೇಕು. ಸ್ಪುಟ್ನಿಕ್-ವಿಯ ಎರಡು ಡೋಸರ್‌ಗಳು ಕೊರೊನಾ ಸೋಂಕಿನ ವಿರುದ್ಧ ಶೇ.91 ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಹಾಗೂ ಒಂದು ಡೋಸ್ ಶೇ.79.4% ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಗಮಲೇಂಯ ತಿಳಿಸಿತ್ತು. ಇದನ್ನೂ ಓದಿ: ಬೀದಿನಾಯಿಗಳಿಗೆ ಆಹಾರ ನೀಡಿದ್ದಕ್ಕೆ 8 ಲಕ್ಷ ದಂಡ

ರಷ್ಯಾ ರಕ್ಷಣಾ ಸಚಿವಾಲಯ ಮತ್ತು ಮಾಸ್ಕೋದ ಗಮಲೇಂಯ ಸಂಶೋಧನಾ ಸಂಸ್ಥೆ ಜಂಟಿಯಾಗಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು ಈ ಲಸಿಕೆಯನ್ನು ಕಳೆದ ವರ್ಷ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪುತ್ರಿಗೆ ನೀಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *