DistrictsKarnatakaLatestMain PostSports

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತ ಅಥ್ಲೀಟ್ ಪೂವಮ್ಮ

ಮಂಗಳೂರು: ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ಹಾಗೂ ಕರ್ನಾಟಕದ ಅಥ್ಲೀಟ್ ಮಚ್ಚೆಟ್ಟಿರ ರಾಜು ಪೂವಮ್ಮ ಕೇರಳದ ಅಥ್ಲೀಟ್ ಜಿತಿನ್ ಪೌಲ್ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಮಂಗಳೂರು ಹೊರವಲಯದ ಅಡ್ಯಾರ್ ಗಾರ್ಡನ್‍ನ ವಿ.ಕೆ.ಶೆಟ್ಟಿ ಅಡಿಟೋರಿಯಂನಲ್ಲಿ ಕೊಡವ ಸಂಪ್ರದಾಯದಂತೆ ಮದುವೆ ನೆರವೇರಿತು. ಪೂವಮ್ಮ ಅವರ ತಂದೆ ಮಚ್ಚೆಟ್ಟಿರ ಜಿ. ತಮ್ಮಯ್ಯ (ರಾಜು), ತಾಯಿ ಜಾನಕಿ (ಜಾಜಿ), ಜಿತಿನ್ ಪೌಲ್ ಅವರ ತಾಯಿ ಜಾನ್ಸಿ ಸೇರಿದಂತೆ ಕುಟುಂಬದವರು, ಬಂಧುಮಿತ್ರರು ಸ್ನೇಹಿತರು ಈ ವೇಳೆ ಉಪಸ್ಥಿತರಿದ್ದರು. ಇದನ್ನೂ ಓದಿ: ಬೌಲರ್‌ಗಳ ಮೇಲಾಟ – ಒಂದೇ ದಿನ 18 ವಿಕೆಟ್ ಪತನ

ಜನವರಿ 1 ರಂದು ಕೇರಳದ ತ್ರಿಶ್ಶೂರ್‌ನಲ್ಲಿ ಮತ್ತೊಂದು ಕಾರ್ಯಕ್ರಮ ಜರುಗಲಿದೆ. ಇದೀಗ ಪೂವಮ್ಮ ಮತ್ತು ಜಿತಿನ್ ಕ್ರೀಡಾ ದಂಪತಿಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ. ಕೊಡಗು ಮೂಲಕ 31 ವರ್ಷದ ಪೂವಮ್ಮ 2014ರ ಇಂಚೋನ್ ಏಷ್ಯಾಡ್‍ನಲ್ಲಿ 1 ಚಿನ್ನ, 1 ಕಂಚು ಮತ್ತು 2018ರ ಜಕಾರ್ತ್ ಏಷ್ಯಾಡ್‍ನಲ್ಲಿ 2 ಚಿನ್ನ ಜಯಿಸಿದ್ದರು. ಇದನ್ನೂ ಓದಿ: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಪಾಂಡ್ಯ ದಂಪತಿ

ಪೂವಮ್ಮ ಒಲಿಂಪಿಕ್ಸ್‌ನಲ್ಲಿ 2 ಬಾರಿ ಮತ್ತು ಅಂತರಾಷ್ಟ್ರೀಯ ಅಥ್ಲೀಟ್ ಕೂಟದಲ್ಲಿ 4 ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಜಿತಿನ್ ಪೌಲ್ 400 ಮೀಟರ್ ಅಡೆತಡೆ ಓಟದ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿದ್ದು, ಏಷ್ಯನ್ ಗೇಮ್ಸ್ ಮತ್ತು ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

Leave a Reply

Your email address will not be published.

Back to top button