ವಿಜಯನಗರ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ (Vijayanagara) ಜಿಲ್ಲೆಯಲ್ಲಿ ಬಿರು ಬಿಸಿಲು ದಿನೇದಿನೇ ಹೆಚ್ಚಾಗುತ್ತಲೇ ಇದೆ. ಅದಕ್ಕಾಗೇ ಮೃಗಾಲಯದಲ್ಲೂ ಪ್ರಾಣಿ, ಪಕ್ಷಿಗಳು ಹಾಗೂ ವನ್ಯಮೃಗಗಳಿಗೆ ಬಿಸಿಲಿನ ತಾಪ ತಟ್ಟದಂತೆ ಜಿಲ್ಲೆಯ ಕಮಲಾಪುರದ (Kamalapura) ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳು, ವನ್ಯಮೃಗಗಳಿಗೆ ಸ್ಪ್ರಿಂಕ್ಲರ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಿಸಿಲಿನ ತಾಪ ತಟ್ಟದಂತೆ ಹಾಗೂ ಪ್ರಾಣಿಗಳು ಆಯಾಸಗೊಳ್ಳದಂತೆ ನೋಡಿಕೊಳ್ಳಲಾಗುತ್ತಿದೆ.
ಈ ಕಮಲಾಪುರದ ಮೃಗಾಲಯದಲ್ಲಿನ ಪ್ರಾಣಿ, ಪಕ್ಷಿ, ಹುಲಿ ಸಫಾರಿ, ಲಯನ್ ಸಫಾರಿ ವೀಕ್ಷಣೆಗೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರು ವನ್ಯ ಜೀವಿಗಳ ಕಣ್ತುಂಬಿಕೊಳ್ಳಲು ಬಂದಾಗಲೆಲ್ಲಾ ಈ ಮೃಗಗಳು ಕಣ್ಣಿಗೆ ಕಾಣುತ್ತವೆ. ಇದೇ ಕಾರಣಕ್ಕೆ ಪ್ರಾಣಿಗಳು ಆಯಾಸವಾಗಬಾರದು ಎಂದು ಬಿಸಿಲಿನಿಂದ ರಕ್ಷಣೆ ಪಡೆಯಲು ಮೃಗಾಲಯದಲ್ಲೀಗ ತಂಪಾದ ವಾತಾವರಣದ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಸೌದಿ ಆಗಸದಲ್ಲಿ ಮೋದಿಗೆ ಯುದ್ಧ ವಿಮಾನಗಳ ಸ್ವಾಗತ!
ಮೃಗಾಲಯದಲ್ಲಿ ಗಿಡಮರಗಳನ್ನ ಬೆಳೆಸಲಾಗಿದ್ದರೂ ಪ್ರಾಣಿಗಳು, ವನ್ಯಮೃಗಗಳು ಬಿಸಿಲಿನ ತಾಪಕ್ಕೆ ಹೈರಾಣಾಗದಂತೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಜಿಂಕೆ, ಹುಲಿ, ಸಿಂಹ, ನೀರಾನೆ, ಜಿರಾಫೆಗಳಿಗೆ ಬೇಸಿಗೆ ವೇಳೆ ವಿಶೇಷ ಆಹಾರ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ. ಇದು ಬಿಸಿಲಿನ ತಾಪಮಾನದಿಂದ ವನ್ಯಜೀವಿಗಳನ್ನು ಕಾಪಾಡುವ ರಕ್ಷಣಾ ಕವಚವಾಗಿದೆ. ಇದನ್ನೂ ಓದಿ: ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣ – ಗನ್ ಮ್ಯಾನ್ ವಿಠ್ಠಲ್ ಪೊಲೀಸರ ವಶಕ್ಕೆ
ಮೃಗಾಲಯದಲ್ಲಿ (Zoo) ಪ್ರಾಣಿಗಳು, ವನ್ಯಮೃಗಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿರುವುದರಿಂದ ಪ್ರಾಣಿಗಳು ಸಹ ಚಿಮ್ಮುವ ನೀರಿನ ಜೊತೆ ಚೆಲ್ಲಾಟವಾಡುವ ದೃಶ್ಯಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತಿರುವುದು ವಿಶೇಷವಾಗಿದೆ.