– ವಿನೇಶ್ ಫೋಗಟ್ ಅನರ್ಹ; ಷಡ್ಯಂತ್ರ್ಯದ ಶಂಕೆ ವ್ಯಕ್ತಪಡಿಸಿದ ಕಾಂಗ್ರೆಸ್
ಪ್ಯಾರಿಸ್: ವಿನೇಶ್ ಫೋಗಟ್ (Vinesh Phoga) ಅನರ್ಹತೆಯ ವಿಚಾರದಲ್ಲೂ ರಾಜಕೀಯ ಕೆಸರೆರಚಾಟ ನಡೆದಿದೆ. ಈ ಹಿಂದೆ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ, ಬಿಜೆಪಿ ಮಾಜಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿದ್ದ ಕಾರಣಕ್ಕೆ ಈಗ ವಿನೇಶ್ ವಿರುದ್ಧ ಷಡ್ಯಂತ್ರ್ಯ ನಡೆದಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ಸಂಸದ ಬಲವಂತ್ ವಾಂಖೆಡೆ (Balwant Wankhede) ಆರೋಪ ಮಾಡಿದ್ದಾರೆ.
ವಿನೇಶ್ ಫೋಗಟ್ ಅನರ್ಹತೆಯ ಹಿಂದೆ ಷಡ್ಯಂತ್ರ ಇರುವಂತಿದೆ. ಆಕೆ ದೆಹಲಿಯ (New Delhi) ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದನ್ನು ಇಡೀ ದೇಶ ನೋಡಿತ್ತು. ಆದರೆ, ಆಕೆಗೆ ಆಗ ನ್ಯಾಯ ಸಿಕ್ಕಿರಲಿಲ್ಲ. ಈಗ ವಿನೇಶ್ ಪದಕ (Olympic Medal) ಗೆದ್ದು ಬಂದ್ರೆ ಆಕೆಯನ್ನು ಸ್ವಾಗತಿಸಿ, ಗೌರವಿಸಬೇಕಾಗುತ್ತದೆ. ಇದು ಕೆಲವರಿಗೆ ಇಷ್ಟ ಇರಲಿಲ್ಲ ಎಂದು ಬಲ್ವಂತ್ ವಾಂಖೆಡೆ ಲೇವಡಿ ಮಾಡಿದ್ದಾರೆ.
Advertisement
Advertisement
ಅಲ್ಲದೇ ವಿನೇಶ್ ಫೋಗಟ್ ಅನರ್ಹಗೊಳಿಸಿದ ವಿಚಾರವನ್ನು ಕ್ರೀಡಾಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಲೋಕಸಭೆಯಲ್ಲಿ (Lok Sabha) ಪ್ರಸ್ತಾಪಿಸಿದರು. ವಿನೇಶ್ ವಿಚಾರದಲ್ಲಿ ಏನೆಲ್ಲಾ ಬೆಳವಣಿಗೆ ನಡೆಯಿತು ಎಂಬುದರ ಬಗ್ಗೆ ಲೋಕಸಭೆಗೆ ವಿವರಿಸಿದ್ರು. ವಿನೇಶ್‌ಗೆ ತರಬೇತಿ ನೀಡುವ ವಿಚಾರದಲ್ಲಿ ಯಾವುದೇ ಲೋಪ ಆಗಿಲ್ಲ. ತರಬೇತಿಗೆ ಕೇಂದ್ರ 75 ಲಕ್ಷ ರೂ. ಖರ್ಚು ಮಾಡಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಶೀಘ್ರದಲ್ಲೇ ವೈದ್ಯಕೀಯ ಕಾಲೇಜುಗಳಿಗೆ 650 ಸಹಾಯಕ ಪ್ರಾಧ್ಯಾಪಕರು, 1,200 ದಾದಿಯರ ನೇಮಕ: ಶರಣಪ್ರಕಾಶ್ ಪಾಟೀಲ್
Advertisement
Advertisement
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕರು ವಿನೇಶ್ ವಿಚಾರದಲ್ಲಿ ಕೇಂದ್ರದ ನಿಲುವು ಸರಿಯಿಲ್ಲ ಎಂದರು. ಬಳಿಕ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿ, ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: 20 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ಮೌಲ್ಯ ತಲುಪಿದ ಭಾರತದ ಮೊದಲ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ವಿನೇಶ್ ಅವರನ್ನು ಹೊರಗಿಡುವ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಮುಖ್ಯಸ್ಥೆ ಪಿ.ಟಿ ಉಷಾ ಅವರಿಗೆ ಸೂಚಿಸಿದ್ದರು. ಈ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾಗಿದ್ದ ವಿನೇಶ್ ಅವರನ್ನು ಭೇಟಿಯಾದ ಪಿ.ಟಿ ಉಷಾ ಅವರು, ಎಲ್ಲ ರೀತಿಯಿಂದಲೂ ಅಗತ್ಯ ಸಹಕಾರ ನೀಡುವುದಾಗಿ ಧೈರ್ಯ ಹೇಳಿದ್ದರು. ಇದನ್ನೂ ಓದಿ: ತಲೆಗೂದಲು ಕಟ್, ರಕ್ತ ಹೊರತೆಗೆತ, ಕಠಿಣ ವ್ಯಾಯಾಮ, ಆಹಾರದಿಂದ ದೂರ – ತೂಕ ಇಳಿಸಲು ಏನೆಲ್ಲಾ ಮಾಡಿದ್ರು ವಿನೇಶ್?