ಕೊಹಿಮ: ವ್ಯಕ್ತಿಯ ಹಿಂಬದಿಗೆ ಜೇನು ನೊಣ ಗೂಡು ಕಟ್ಟಿದ ಘಟನೆಯೊಂದು ನಾಗಾಲ್ಯಾಂಡ್ನಲ್ಲಿ ನಡೆದಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ತಮ್ಮ ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ಇಂತಹ ಜಾಗದಲ್ಲಿ ಜೇನು ಗೂಡು ಕಟ್ಟಿದೆ. ಇದು ಕೇವಲ ನಾಗಾಲ್ಯಾಂಡ್ನಲ್ಲಿ ಆಗಲು ಸಾಧ್ಯ” ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.
Advertisement
ವಿಡಿಯೋದಲ್ಲಿ ವ್ಯಕ್ತಿ ಜನಗಳ ಮಧ್ಯೆ ಮೆಟ್ಟಿಲ ಮೇಲೆ ನಿಂತಿದ್ದಾರೆ. ಈ ವೇಳೆ ಅವರ ಸ್ಥಿತಿ ನೋಡಿ ಅಕ್ಕಪಕ್ಕದ ಜನರು ನಗುತ್ತಿರುವ ಸದ್ದು ವಿಡಿಯೋದಲ್ಲಿ ಕೇಳಿಸಿದೆ. ಈ ವೇಳೆ ಕ್ಯಾಮೆರಾವನ್ನು ಅವರ ಮುಂದೆ ತೆಗೆದುಕೊಂಡು ಹೋದಾಗ ಅವರು ತಮ್ಮ ಮುಖವನ್ನು ಮುಚ್ಚಿಕೊಂಡಿದ್ದಾರೆ.
Advertisement
This is really a Beehive in an unlikely place. This can happen only in Nagaland!
Sources; @MmhonlumoKikon from Nagaland pic.twitter.com/fpqpD5JJku
— Kiren Rijiju (@KirenRijiju) August 21, 2019
Advertisement
ಈ ವಿಡಿಯೋವನ್ನು ಮೊದಲು ನಾಗಾಲ್ಯಾಂಡ್ ಶಾಸಕ ತಮ್ಮ ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಬಳಿಕ ಸಚಿವ ಕಿರಣ್ ರಿಜಿಜು ಅವರು ಈ ವಿಡಿಯೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದುವರೆಗೂ 38 ಸಾವಿರಕ್ಕೂ ಹೆಚ್ಚು ವ್ಯೂ ಬಂದಿದೆ.
Advertisement
ನೆಟ್ಟಿಗರು ಈ ವಿಡಿಯೋವನ್ನು ನೋಡಿ ತಮ್ಮ ವಿವಿಧವಾಗಿ ಕಮೆಂಟ್ ಮಾಡಿದ್ದಾರೆ. ಕೆಲವರು “ಈ ವಿಡಿಯೋ ನೋಡಿ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು “ಅವರು ಬಹುಶಃ ತಿಂಡಿಯಲ್ಲಿ ಸಿಹಿಯನ್ನು ತಿಂದಿದ್ದರು ಎನಿಸುತ್ತದೆ” ಎಂದು ಹಾಸ್ಯವಾಗಿ ಕಮೆಂಟ್ ಮಾಡಿದ್ದಾರೆ.
ನಾಗಾಲ್ಯಾಂಡ್ ವಿವಿಧ ರೀತಿಯ ಜೇಣು ನೊಣಗಳಿಗೆ ನೆಲೆಯಾಗಿದೆ. ಜೇನು ಸಾಕಣೆ ಕ್ಷೇತ್ರದಲ್ಲಿ ಜನರನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿ ಪ್ರತಿ ವರ್ಷ ಡಿಸೆಂಬರ್ 5ರಂದು ‘ನಾಗಾಲ್ಯಾಂಡ್ ಹನಿ ಬೀ ದಿನ’ ಆಚರಿಸುತ್ತದೆ.