ಆರೋಗ್ಯಕರ ಪಾಲಕ್ ದಾಲ್ ಕಿಚಡಿ ರೆಸಿಪಿ ನಿಮಗಾಗಿ..

Public TV
2 Min Read
palak dal kichdi 1

ಸಿರು ಸೊಪ್ಪುಗಳನ್ನು ಸೇವಿಸುವುದರಿಂದ ನಾವು ಆರೋಗ್ಯವಂತರಾಗಿರಬಹುದು. ಸೊಪ್ಪುಗಳಲ್ಲಿ ಒಂದಾದ ಪಾಲಕ್ ಸೊಪ್ಪನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಪಾಲಕ್ ಸೊಪ್ಪು ಅಧಿಕ ಪೋಷಕಾಂಶಗಳನ್ನು ಹೊಂದಿದ್ದು, ಕಡಿಮೆ ಕ್ಯಾಲೊರಿಯನ್ನು ಹೊಂದಿರುತ್ತದೆ. ಇದನ್ನು ನಮ್ಮ ನಿತ್ಯದ ಆಹಾರ ಕ್ರಮದಲ್ಲಿ ಬಳಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ಥಿರಗೊಳಿಸಿ, ಕ್ಯಾನ್ಸರ್‌ನಂತಹ ರೋಗಗಳನ್ನು ತಡೆಗಟ್ಟುತ್ತದೆ. ಅಲ್ಲದೇ ಮೂಳೆಗಳನ್ನು ಬಲಿಷ್ಟಗೊಳಿಸುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಆರೋಗ್ಯಕರ ಪಾಲಕ್ ದಾಲ್ ಕಿಚಡಿಯನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಹೀಗೆ ಮಾಡಿ ಇನ್ಸ್ಟೆಂಟ್ ಮಗ್ ಬ್ರೌನಿ

palak dal kichdi

ಬೇಕಾಗುವ ಸಾಮಗ್ರಿಗಳು:
ಹೆಚ್ಚಿದ ಪಾಲಕ್ – 1 ಕಪ್
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಟೊಮೆಟೊ – 2
ಅಕ್ಕಿ – ಒಂದೂವರೆ ಕಪ್
ಬೇಳೆ – 1 ಕಪ್
ಜೀರಿಗೆ – 1 ಚಮಚ
ಸಾಸಿವೆ – 1 ಚಮಚ
ಕೊತ್ತಂಬರಿ ಪುಡಿ – 1 ಚಮಚ
ಅರಶಿಣ ಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಅಚ್ಚ ಖಾರದ ಪುಡಿ – ಸ್ವಲ್ಪ
ಕರಿ ಬೇವು – 5ರಿಂದ 6 ಎಲೆ
ತುಪ್ಪ – 1 ಚಮಚ
ಹಸಿರು ಮೆಣಸು – ಅಗತ್ಯಕ್ಕೆ ತಕ್ಕಷ್ಟು
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ನೀರು – 1 ಗ್ಲಾಸ್

palak dal kichdi 2

ಮಾಡುವ ವಿಧಾನ:
* ಮೊದಲಿಗೆ ಅಕ್ಕಿ ಮತ್ತು ಬೇಳೆಯನ್ನು 2ರಿಂದ 3 ಬಾರಿ ಚೆನ್ನಾಗಿ ತೊಳೆದು 15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
* ಬಳಿಕ ಒಂದು ಕುಕ್ಕರಿಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿಗಿಡಿ. ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ, ಕರಿಬೇವು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
* ನಂತರ ಇದಕ್ಕೆ ಹೆಚ್ಚಿದ ಟೊಮೆಟೋ, ಈರುಳ್ಳಿ ಮತ್ತು ಹಸಿರು ಮೆಣಸು ಹಾಕಿ ಸ್ವಲ್ಪ ಹೊತ್ತು ಬೇಯಲು ಬಿಡಿ.
* ಈಗ ಇದಕ್ಕೆ ಅರಶಿಣ ಪುಡಿ, ಕೊತ್ತಂಬರಿ ಪುಡಿ ಮತ್ತು ಅಚ್ಚ ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಬಳಿಕ ನೆನೆಸಿಟ್ಟಿದ್ದ ಬೇಳೆ ಮತ್ತು ಅಕ್ಕಿಯನ್ನು ಹಾಕಿಕೊಂಡು ಒಂದು ಗ್ಲಾಸ್ ನೀರನ್ನು ಸೇರಿಸಿಕೊಂಡು 2 ನಿಮಿಷಗಳ ಕಾಲ ಬೇಯಲು ಬಿಡಿ. ಈಗ ಇದಕ್ಕೆ ಹೆಚ್ಚಿದ ಪಾಲಕ್ ಸೊಪ್ಪನ್ನು ಹಾಕಿಕೊಂಡು ಕುಕ್ಕರ್ ಮುಚ್ಚಳವನ್ನು ಮುಚ್ಚಿ 10ರಿಂದ 12 ನಿಮಿಷಗಳವರೆಗೆ ಬೇಯಿಸಿಕೊಳ್ಳಿ.
* ಕುಕ್ಕರ್ 2 ವಿಶಲ್ ಆದ ಬಳಿಕ ಕಿಚಡಿಯನ್ನು ಕುಕ್ಕರ್‌ನಿಂದ ತೆಗೆದು ಒಂದು ಪಾತ್ರೆಗೆ ಹಾಕಿಕೊಂಡು ಅದರ ಮೇಲೆ ಒಂದು ಚಮಚ ತುಪ್ಪವನ್ನು ಹಾಕಿಕೊಳ್ಳಿ.
* ಈಗ ಬಿಸಿ ಬಿಸಿ ಪಾಲಕ್ ದಾಲ್ ಕಿಚಡಿ ಸವಿಯಲು ಸಿದ್ಧ. ಇದನ್ನೂ ಓದಿ: ಸಖತ್ ರುಚಿ ಈ ಚೆಟ್ಟಿನಾಡ್ ಆಲೂಗಡ್ಡೆ ಫ್ರೈ

Web Stories

Share This Article