ಜೈಪುರ: ರಾಜಸ್ಥಾನ ಸಚಿವ ಮಹೇಶ್ ಜೋಶಿ ಅವರ ಪುತ್ರ ರೋಹಿತ್ ಜೋಶಿ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಎಫ್‌ಐಆರ್ ದಾಖಲಾಗಿದೆ.
ಕಳೆದ ವರ್ಷ ಜೈಪುರ ಮತ್ತು ದೆಹಲಿಯಲ್ಲಿ 23 ವರ್ಷದ ಯುವತಿಯ ಮೇಲೆ ರೋಹಿತ್ ಜೋಶಿ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೈಪುರ ಮೂಲದ ಯುವತಿಯ ಮೇಲೆ 2021ರ ಜನವರಿ 8 ರಿಂದ ಏಪ್ರಿಲ್ 17ರ ನಡುವೆ ಈ ವರ್ಷದಲ್ಲಿ ಅನೇಕ ಬಾರಿ ರೋಹಿತ್ ಜೋಶಿ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದ್ದು, ಈ ಕುರಿತಂತೆ ದೆಹಲಿ ಪೊಲೀಸರು ರೋಹಿತ್ ಜೋಶಿ ವಿರುದ್ಧ ಜೀರೋ ಎಫ್‍ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: 1945 ರಲ್ಲಿದ್ದಂತೆ, ವಿಜಯವು ನಮ್ಮದಾಗಿರುತ್ತದೆ: ಪುಟಿನ್ ಪ್ರತಿಜ್ಞೆ
Advertisement
Advertisement
ಈ ಸಂಬಂಧ ಮೇ 8ರಂದು ಉತ್ತರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 376(ಅತ್ಯಾಚಾರ), 328(ಅಪರಾಧ ಮಾಡುವ ಉದ್ದೇಶದಿಂದ ನೋವುಂಟು ಮಾಡುವುದು, ಇತ್ಯಾದಿ), 312(ಗರ್ಭಪಾತಕ್ಕೆ ಕಾರಣ), 366(ಅಪಹರಣ, ಮಹಿಳೆಯನ್ನು ಅಪಹರಣ ಮಾಡುವುದು ಅಥವಾ ಮದುವೆಗೆ ಒತ್ತಾಯಿಸುವುದು ಇತ್ಯಾದಿ), 377(ಅಸ್ವಾಭಾವಿಕ ಅಪರಾಧಗಳು) ಮತ್ತು 506(ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Advertisement
Advertisement
ಕಳೆದ ವರ್ಷ ಫೇಸ್‍ಬುಕ್ ಮೂಲಕ ರೋಹಿತ್ ಜೋಶಿ ಅವರ ಪರಿಚಯವಾಗಿತ್ತು. ಇಬ್ಬರೂ ಜೈಪುರದಲ್ಲಿ ಭೇಟಿಯಾದ್ದೆವು ಮತ್ತು 2021ರ ಜನವರಿ 8 ರಂದು ರಾಜಸ್ಥಾನದ ಸವಾಯಿ ಮಾಧೋಪುರಕ್ಕೆ ನನ್ನನ್ನು ಆಹ್ವಾನಿಸಿದ್ದರು. ನಮ್ಮ ಮೊದಲ ಭೇಟಿಯ ಸಮಯದಲ್ಲಿ ಆತ ಹೆಚ್ಚಿಗೆ ಮದ್ಯ ಕುಡಿದು ಅದರ ಲಾಭ ಪಡೆದ ಮರುದಿನ ಬೆಳಗ್ಗೆ ನಾನು ಎದ್ದಾಗ ಬೆತ್ತಲೆ ಫೋಟೋಗಳು ಮತ್ತು ವೀಡಿಯೊಗಳನ್ನು ತೋರಿಸಿದ. ಇದರಿಂದ ನಾನು ಆತಂಕಗೊಂಡು ಅಳಲು ಪ್ರಾರಂಭಿಸಿದೆ ಎಂದು ಯುವತಿ ತಿಳಿಸಿದ್ದಾಳೆ. ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು- ಶಾಲೆಯ ಮೇಲೆ ರಷ್ಯಾ ಬಾಂಬ್ ದಾಳಿ, 60 ಮಂದಿ ಸಾವು
ಮತ್ತೊಮ್ಮೆ ಭೇಟಿಯಾದ ವೇಳೆ ರೋಹಿತ್ ಜೋಶಿ ದೆಹಲಿಯಲ್ಲಿ ನನ್ನ ಮೇಲೆ ದೌರ್ಜನ್ಯವೆಸಗಿದ್ದ. ರೋಹಿತ್ ನಾವಿಬ್ಬರೂ ಪತಿ, ಪತ್ನಿ ಎಂದು ಹೋಟೆಲ್‍ನಲ್ಲಿ ನೋಂದಾಯಿಸಿ ಉಳಿಯುವಂತೆ ಮಾಡಿದ. ನಂತರ ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಆದರೆ ನಂತರ ಆತ ಕುಡಿದು ನನ್ನನ್ನು ಬೈದ, ಹೊಡೆದ. ನನ್ನ ಅಶ್ಲೀಲ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಎಂದು ಯುವತಿ ಆರೋಪಿಸಿದ್ದಾಳೆ.
2021ರ ಆಗಸ್ಟ್ 11 ರಂದು, ನಾನು ಗರ್ಭಿಣಿಯಾಗಿದ್ದೇನೆ ಎಂದು ಗೊತ್ತಾಯಿತು, ನನಗೆ ಅವನು ಮಾತ್ರೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ. ಆದರೆ ನಾನು ತೆಗೆದುಕೊಳ್ಳಲಿಲ್ಲ ಎಂದು ತಿಳಿಸಿದ್ದಾಳೆ.