ಸ್ಪೈಸ್‍ಜೆಟ್‍ನಲ್ಲಿ ಮುಂದುವರಿದ ತಾಂತ್ರಿಕ ದೋಷ: ಕಾಂಡ್ಲಾದಿಂದ ಬಂದ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ

- ಕೆಳೆದ 17 ದಿನಗಳಲ್ಲಿ 7 ತಾಂತ್ರಿಕ ವೈಫಲ್ಯ ಪತ್ತೆ ಹಿನ್ನೆಲೆ ತನಿಖೆಗೆ ಆದೇಶ

Advertisements

ಕರಾಚಿ: ಮಂಗಳವಾರ ಗುಜರಾತ್‍ನ ಕಾಂಡ್ಲಾದಿಂದ ಬಂದ ಸ್ಪೈಸ್‍ಜೆಟ್ ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ನಂತರ ಸುರಕ್ಷಿತವಾಗಿ ಮುಂಬೈನಲ್ಲಿ ಲ್ಯಾಂಡ್ ಮಾಡಲಾಗಿದೆ.

ಜುಲೈ 5 ರಂದು, ಸ್ಪೈಸ್‍ಜೆಟ್ ಕ್ಯೂ400 ವಿಮಾನವು 23,000 ಕಿ.ಮೀ ಎತ್ತರದಲ್ಲಿ ಹಾರಾಟದಲ್ಲಿದ್ದಾಗ ವಿಂಡ್‍ಶೀಲ್ಡ್ ಹೊರ ಫಲಕವು ಬಿರುಕು ಬಿಟ್ಟಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಸಿಬ್ಬಂದಿ ವರ್ಗಕ್ಕೆ ಒತ್ತಡ ಹೆಚ್ಚಾಗಿ ಮುಂಬೈನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ ಎಂದು ಸ್ಪೈಸ್‌ಜೆಟ್ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದ ಜನರನ್ನು ಲೂಟಿ ಮಾಡಲು ನೆರವಾಗುವಂತೆ ಸಂವಿಧಾನವನ್ನು ಬರೆಯಲಾಗಿದೆ: ಸಾಜಿ ಚೆರಿಯನ್ 

Advertisements

ಅಲ್ಲದೇ ಕಳೆದ ವಾರವು ಇದೇ ರೀತಿ ನಡೆದಿದ್ದು, ದೆಹಲಿಯಿಂದ ದುಬೈಗೆ ತೆರಳುತ್ತಿದ್ದ ಬೋಯಿಂಗ್ 737 ಮ್ಯಾಕ್ಸ್ ವಿಮಾನದಲ್ಲಿ ಇಂಧನ ಕಡಿಮೆಯಾದ ಹಿನ್ನೆಲೆ ಕರಾಚಿಯಲ್ಲಿ ಲ್ಯಾಂಡ್ ಮಾಡಬೇಕಾಯಿತು. ಈ ವಿಮಾನದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು.

ಕಳೆದ 17 ದಿನಗಳಲ್ಲಿ ಕಡಿಮೆ ವೆಚ್ಚದ ವಿಮಾನಯಾನವು ತಾಂತ್ರಿಕ ದೋಷದ ಏಳನೇ ಪ್ರಕರಣ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಎಲ್ಲ ಪ್ರಕರಣಗಳ ಕುರಿತು ಸರಿಯಾಗಿ ತನಿಖೆಯಾಗಬೇಕು ಎಂದು ಡಿಜಿಸಿಪಿ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಇದನ್ನೂ ಓದಿ: ಬಕ್ರೀದ್ ಹಬ್ಬದಲ್ಲಿ ಅನಧಿಕೃತವಾಗಿ ಗೋಹತ್ಯೆಗೆ ಮುಂದಾದ್ರೆ ಕಾನೂನು ಕ್ರಮ: ಡಿಸಿ ಎಚ್ಚರಿಕೆ 

Advertisements

Live Tv

Advertisements
Exit mobile version