ಶೇ. 50ರಷ್ಟು ವಿಮಾನವಷ್ಟೇ ಕಾರ್ಯ ನಿರ್ವಹಿಸಲು ಸ್ಪೈಸ್‍ಜೆಟ್‍ಗೆ ಆದೇಶ

Public TV
1 Min Read
SpiceJet

ನವದೆಹಲಿ: ತಾಂತ್ರಿಕ ಕಾರಣದಿಂದಾಗಿ ಪದೇ ಪದೇ ತುರ್ತು ಭೂಸ್ಪರ್ಶ ಮಾಡುತ್ತಿದ್ದ ಸ್ಪೈಸ್‍ಜೆಟ್ ಏರ್‌ಲೈನ್ಸ್‌ಗೆ 8 ವಾರಗಳವರೆಗೆ ಶೇ. 50ರಷ್ಟು ವಿಮಾನಗಳನ್ನು ಮಾತ್ರ ಕಾರ್ಯನಿರ್ವಹಿಸುವಂತೆ ನಾಗರಿಕ ವಿಮಾನಯಾನ ಸಂಸ್ಥೆ ಆದೇಶಿಸಿದೆ.

ವಿವಿಧ ಸ್ಪಾಟ್ ಚೆಕ್‍ಗಳು, ತಪಾಸಣೆಗಳ ಕುರಿತು ಸ್ಪೈಸ್‍ಜೆಟ್ ಸಲ್ಲಿಸಿದ್ದ ಶೋಕಾಸ್ ನೋಟಿಸ್‌ಗೆ ಉತ್ತರಿಸಿದ ಹಿನ್ನೆಲೆಯಲ್ಲಿ, ಸುರಕ್ಷಿತ ಮತ್ತು ವಿಶ್ವಾಸಾರ್ಹ ವಾಯು ಸಾರಿಗೆ ಸೇವೆಗಾಗಿ ಸ್ಪೈಸ್‍ಜೆಟ್‍ನ ವಿಮಾನ ಹಾರಾಟ ಸಂಖ್ಯೆಯನ್ನು 50%ಗೆ ನಿರ್ಬಂಧಿಸಲಾಗಿದೆ. ಇದನ್ನು 8 ವಾರಗಳ ಅವಧಿಗೆ ಅನುಮೋದನೆ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ಆದೇಶದಲ್ಲಿ ತಿಳಿಸಿದ್ದಾರೆ.

spicejet

ಈ ಬಗ್ಗೆ ನಾಗರಿಕ ವಿಮಾನಯಾನ ಸಂಸ್ಥೆ ಆದೇಶ ಹೊರಡಿಸಿದ್ದು, ಸ್ಪೈಸ್‌ಜೆಟ್ ಸುರಕ್ಷಿತ, ಸಮರ್ಥ ಮತ್ತು ವಿಶ್ವಾಸಾರ್ಹ ವಾಯು ಸಾರಿಗೆ ಸೇವೆಯನ್ನು ಸ್ಥಾಪಿಸುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಏರ್‌ಲೈನ್ ಪ್ರವೃತ್ತಿಯನ್ನು ತಡೆಯಲು ಈ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಸ್ಪೈಸ್ ಇನ್ನೂ 8 ವಾರಗಳಲ್ಲಿ ಸುರಕ್ಷಿತ ಮತ್ತು ವಿಶ್ವಾಸಾರ್ಹ ವಾಯು ಸಾರಿಗೆ ಸೇವೆಗಾಗಿ ತನ್ನ ಪ್ರಯತ್ನಗಳನ್ನು ಮಾಡುವ ಅಗತ್ಯವಿದೆ ಎಂದು ಹೇಳಿದೆ. ಇದು ಇತ್ತೀಚಿನ ದಿನಗಳಲ್ಲಿ ಯಾವುದೇ ವಿಮಾನಯಾನ ಸಂಸ್ಥೆಯು ಎದುರಿಸಿದ ಅತ್ಯಂತ ಕಠಿಣ ಕ್ರಮವಾಗಿದೆ. ಇದನ್ನೂ ಓದಿ: ಬ್ರೇಕಿಂಗ್ ನ್ಯೂಸ್ ಬೇಕಾ? TMCಯ 38 ಶಾಸಕರು ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ: ಮಿಥುನ್ ಚಕ್ರವರ್ತಿ

spicejet

ಕಳೆದ ಕೆಲವು ದಿನಗಳಿಂದ ಸ್ಪೈಸ್‍ಜೆಟ್ ವಿಮಾನಗಳು ಪ್ರಯಾಣದ ಸಂದರ್ಭದಲ್ಲಿ ಹಲವು ಬಾರಿ ತಾಂತ್ರಿಕ ದೋಷಗಳನ್ನು ಎದುರಿಸಿವೆ. ಘಟನೆಗಳು ಒಂದೊಂದಾಗಿ ವರದಿಯಾಗುತ್ತಿದ್ದಂತೆ ಪ್ರಯಾಣಿಕರಲ್ಲಿ ನಡುಕವೂ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಶೋಕಾಸ್ ನೋಟಿಸ್‍ನ್ನು ನೀಡಲಾಗಿತ್ತು. ಇದನ್ನೂ ಓದಿ: ತಿಹಾರ್‌ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ – ಯಾಸಿನ್‌ ಮಲಿಕ್‌ ಆಸ್ಪತ್ರೆಗೆ ದಾಖಲು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *