ನವದೆಹಲಿ: ದೆಹಲಿಯಿಂದ ಲೇಹ್ಗೆ ಹೊರಟಿದ್ದ ಸ್ಪೈಸ್ಜೆಟ್ (Spice Jet) ವಿಮಾನದ ಎಂಜಿನ್ವೊಂದು ವೈಫಲ್ಯವಾದ ಕಾರಣ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿದೆ.
Sಉ121 ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತ್ತು. 150 ಪ್ರಯಾಣಿಕರನ್ನು ಹೊತ್ತ ಸ್ಪೈಸ್ಜೆಟ್ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಸಿಬ್ಬಂದಿಗೆ ಒಂದು ಎಂಜಿನ್ನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿತ್ತು. ಮುನ್ನೆಚ್ಚರಿಕೆಯಾಗಿ ಪೈಲಟ್ ವಿಮಾನವನ್ನು ದೆಹಲಿಗೆ ಹಿಂತಿರುಗಲು ನಿರ್ಧರಿಸಿದರು. ಇದನ್ನೂ ಓದಿ: ವಿಸ್ಪರ್ಸ್ ಆಫ್ ದಿ ರಿವರ್: ಸ್ಯಾಂಡಲ್ವುಡ್ನಲ್ಲೊಂದು ವಿಭಿನ್ನ ಪ್ರಯತ್ನ
ಲ್ಯಾಡಿಂಗ್ ವೇಳೆ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ವೈದ್ಯಕೀಯ ಮತ್ತು ಅಗ್ನಿಶಾಮಕ ಸೇವೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲಾಗಿತ್ತು. ವಿಮಾನವು ದೆಹಲಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಬಳಿಕ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿರತವಾಗಿ ಕೆಳಗಿಳಿಸಲಾಯಿತು. ಸದ್ಯ ನಿರ್ವಹಣಾ ತಂಡಗಳು ವಿಮಾನದ ತಪಾಸಣೆ ನಡೆಸುವ ನಿರೀಕ್ಷೆಯಿದೆ.

