ಚಂಡೀಗಢ: ಸಚಿವರು, ಎಂಎಲ್‍ಎಗಳು ತಮ್ಮ – ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು. ರಾಜಧಾನಿ ಚಂಡೀಗಢದಲ್ಲಿ ಅಲ್ಲ ಎಂದು ಚುನಾವಣೆ ಗೆದ್ದ ಒಂದು ದಿನದ ನಂತರ ಶಾಸಕರನ್ನು ಪಂಜಾಬ್ ಸಿಎಂ ಆಗಿ ಆಯ್ಕೆಯಾಗಿರುವ ಭಗವಂತ್ ಮಾನ್ ತರಾಟೆಗೆ ತೆಗೆದುಕೊಂಡರು.
Advertisement
ಎಎಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಭಗವಂತ್ ಮಾನ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು, ಮತ ಕೇಳಲು ಹೋದ ಎಲ್ಲ ಸ್ಥಳಗಳಿಗೆ ನಾವು ಕೆಲಸ ಮಾಡಬೇಕು. ಎಲ್ಲ ಶಾಸಕರು ಚಂಡೀಗಢದಲ್ಲಿ ಉಳಿಯದೆ ಅವರು ಆಯ್ಕೆಯಾದ ಪ್ರದೇಶಗಳಲ್ಲಿ ಕೆಲಸ ಮಾಡಬೇಕು. ಎಂಎಲ್‍ಎಗಳು ತಾವು ಆಯ್ಕೆಯಾದ ಕ್ಷೇತ್ರಗಳಲ್ಲಿ ಸರಿಯಾಗಿ ಕೆಲಸ ಮಾಡಬೇಕು ಎಂದು ಖಡಕ್ ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಭೂದಾಖಲೆಗಳನ್ನು ‘ರೈತನ ಮನೆ ಬಾಗಿಲಿಗೆ’ ತಲುಪಿಸುವುದು ಒಂದು ಅತ್ಯುತ್ತಮ ಸೇವೆ: ಆರ್.ಅಶೋಕ್
Advertisement
ಮುಖ್ಯಮಂತ್ರಿ ಹೊರತುಪಡಿಸಿ 17 ಮಂದಿ ಕ್ಯಾಬಿನೆಟ್ ಮಂತ್ರಿಗಳನ್ನು ಹೊಂದಬಹುದು. ಇದರಿಂದ ಯಾರೂ ಅಸಮಾಧಾನಗೊಳ್ಳಬೇಕಾಗಿಲ್ಲ. ನೀವೆಲ್ಲರೂ ಕ್ಯಾಬಿನೆಟ್ ಮಂತ್ರಿಗಳು ಎಂದು ಅವರು ತಮ್ಮನ್ನು ಒಳಗೊಂಡಂತೆ 92 ಶಾಸಕರ ಸಭೆಯಲ್ಲಿ ಹೇಳಿದರು.
Advertisement
Advertisement
ಕೆಲಸ ಮಾಡಬೇಕಾದರೆ ಯಾವುದೇ ರೀತಿಯ ದುರಹಂಕಾರ ಬೇಡ ಎಂದು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. ನಿಮಗೆ ಮತ ಹಾಕದವರಿಗಾಗಿ ಕೆಲಸ ಮಾಡಿ. ನೀವು ಪಂಜಾಬಿ ಶಾಸಕರು. ನಮ್ಮ ಸರ್ಕಾರವನ್ನು ಅವರು ಆಯ್ಕೆ ಮಾಡಿದ್ದಾರೆ ಎಂದು ಸ್ಫೂರ್ತಿ ತುಂಬಿದರು.
ನಿನ್ನೆ ಪಂಜಾಬ್ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದಿದ್ದು, ಈ ಚುನಾವಣೆಯಲ್ಲಿ ಎಎಪಿ ಭರ್ಜರಿ ಜಯವನ್ನು ಗಳಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ಸೋಲಿತು. ಎಎಪಿಗೆ 117 ಸ್ಥಾನಕ್ಕೆ 92 ಸ್ಥಾನ ಗೆಲ್ಲುವ ಮೂಲಕ ಭರ್ಜರಿ ಜಯವನ್ನು ಗಳಿಸಿತ್ತು. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ