– ಬುಡಕಟ್ಟು ಜನರ ಮತದಾನ ಜಾಗೃತಿಗೆ ವಿಭಿನ್ನ ಪ್ರಯತ್ನ
– ಚುನಾವಣೆಗೆ ಸಕಲ ಸಿದ್ಧತೆ; ಒಟ್ಟು 546 ಮತಗಟ್ಟೆ; 4.70 ಲಕ್ಷ ಮತದಾರರು
ಮಡಿಕೇರಿ: ಕೊಡಗು ಜಿಲ್ಲೆಯ ಕಾಡಂಚಿನ ಭಾಗದಲ್ಲಿರುವ ಬುಡಕಟ್ಟು ಹಾಗೂ ಆದಿವಾಸಿ ಜನರು ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಕೊಡಗು (Kodagu) ಜಿಲ್ಲಾಡಳಿತ ಸಾಂಪ್ರದಾಯಿಕ ಶೈಲಿಯಲ್ಲಿ ಮತಗಟ್ಟೆಗಳನ್ನು (Polling Booths) ನಿರ್ಮಾಣಮಾಡಿದೆ. ಬುಡಕಟ್ಟು ಜನರ ಸಂಪ್ರದಾಯ, ಸಂಸ್ಕೃತಿ ಬಿಂಬಿಸುವ ಅಲಂಕಾರ, ಹಸಿರು ಪ್ರಕೃತಿಯ ಸಂಪನ್ಮೂಲ ಹೊಂದಿದ ಚಿತ್ರಪಟಗಳನ್ನು ಬಿಡಿಸಿ ಪ್ರತಿಯೊಬ್ಬರಿಂದಲೂ ಮತದಾನ ಮಾಡಿಸಲು ಮುಂದಾಗಿದೆ.
Advertisement
ʻಕಾಫಿ ಅರಣ್ಯ ವನ್ಯಜೀವಿʼ ಥೀಮ್ ನಲ್ಲಿ ಮತಗಟ್ಟೆ:
ಈ ಬಾರಿ ಕೊಡಗು ಜಿಲ್ಲಾಡಳಿತ ʻಕಾಫಿ ಅರಣ್ಯ ವನ್ಯಜೀವಿʼ ಥೀಮ್‌ನಲ್ಲಿ ಮತಗಟ್ಟೆಗಳನ್ನ ಸ್ಥಾಪನೆ ಮಾಡಿದ್ದು, ಮಡಿಕೇರಿ ನಗರ ಹಿಂದೂಸ್ತಾನಿ ಶಾಲೆಯಲ್ಲಿ ಹೊಸ ಪ್ರಯೋಗ ಮಾಡಲು ಕೊಡಗು ಜಿಲ್ಲಾಡಳಿತ ಮುಂದಾಗಿದೆ. ಶಾಲೆಗಳ ಆವರಣದಲ್ಲಿ ಬಾಳೆ ಕಂಬ, ಮಾವಿನ ಎಲೆಗಳ ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಇದು ಮತದಾನ ಜಾಗೃತಿಯೊಂದಿಗೆ ವನ್ಯಸಂಪತ್ತಿನ ಬಗ್ಗೆ ಅರಿವು ಮೂಡಿಸುವ ಉದ್ದೇಶವೂ ಆಗಿದೆ. ಇದನ್ನೂ ಓದಿ: ಏಪ್ರಿಲ್ 27, 28ಕ್ಕೆ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ – ವಿದ್ಯಾರ್ಥಿಗಳೇ, ಪೋಷಕರೇ ಬನ್ನಿ ಮಾಹಿತಿ ಪಡೆದುಕೊಳ್ಳಿ
Advertisement
Advertisement
ಕೊಡಗಿನಲ್ಲಿ 546 ಮತಗಟ್ಟೆ- 4.70 ಲಕ್ಷ ಮತದಾರರು:
ಕೊಡಗು ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ವ್ಯವಸ್ಥಿತವಾಗಿ ಚುನಾವಣೆಗಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಈಗಾಗಲೇ ಮತಗಟ್ಟೆಗಳಲ್ಲಿ ಸ್ವಚ್ಛಾ ಕಾರ್ಯಗಳನ್ನೂ ನಡೆಸಲಾಗಿದೆ. ಏಪ್ರಿಲ್ 26ರಂದು ನಡೆಯುವ ಮೊದಲ ಹಂತದ ಚುನಾವಣೆಗಾಗಿ ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 4,70,766 ಮತದಾರರು ಮತದಾನಕ್ಕೆ ಅರ್ಹರಿದ್ದು, ಮಡಿಕೇರಿ ಕ್ಷೇತ್ರದಲ್ಲಿ 1,16,143 ಪುರುಷ, 1,14,425 ಮಹಿಳೆ, 9 ಇತರರು ಸೇರಿ 2,30,568 ಮಂದಿ, ವೀರಾಜಪೇಟೆ ಕ್ಷೇತ್ರದಲ್ಲಿ 1,14,425 ಪುರುಷರು, 1,17,601 ಮಹಿಳೆಯರು, 7 ಇತರರು ಸೇರಿ 2,32,033 ಮಂದಿ ಮತದಾರರಿದ್ದಾರೆ. 2 ಕ್ಷೇತ್ರಗಳಲ್ಲಿ ತಲಾ 273 ರಂತೆ ಒಟ್ಟು 546 ಮತಗಟ್ಟೆಗಳಿವೆ. 2 ಕ್ಷೇತ್ರಗಳು ಒಳಗೊಂಡಂತೆ 604 ಪಿಆರ್‌ಒ, 604 ಎಪಿಆರ್‌ಒ, 1,208 ಪಿಓ ಗಳು ಸೇರಿ ಒಟ್ಟು 2,416 ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ. ಒಟ್ಟು 108 ಮತಗಟ್ಟೆಗಳನ್ನು ವಲ್ನರೇಬಲ್, ಕ್ರಿಟಿಕಲ್ ಎಂದು ಗುರುತಿಸಲಾಗಿದೆ.
Advertisement
ಒಟ್ಟು 14 ಚೆಕ್‌ಪೋಸ್ಟ್‌ಗಳಿವೆ, 23 ವಿಶೇಷ ಮತಗಟ್ಟೆಗಳನ್ನೂ ರಚನೆ ಮಾಡಲಾಗಿದೆ. 10 ಸಖಿ ಬೂತ್, 6 ಸಾಂಪ್ರದಾಯಿಕ ಮತಗಟ್ಟೆ, 2 ದಿವ್ಯಾಂಗ ಮತಗಟ್ಟೆ, 2 ಯುವಮತದಾರರ ಬೂತ್ ಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟರಾಜಾ ತಿಳಿಸಿದ್ದಾರೆ. ಇದನ್ನೂ ಓದಿ: ಸನಾತನ ಧರ್ಮ ಅಪಮಾನಿಸುವವರ ವಿರುದ್ಧ ನನ್ನ ಹೋರಾಟ – ಯೂಟ್ಯೂಬರ್ ಮನೀಶ್ ಕಶ್ಯಪ್ ಬಿಜೆಪಿ ಸೇರ್ಪಡೆ