ಬೆಳಗಾವಿ: ಬಾರ್ ಹಾಗೂ ಪಬ್‌ಗಳಲ್ಲಿ (Bar And Pub) ಕುಳಿತು ಡ್ರಿಂಕ್ಸ್ (Drinks) ಮಾಡಲು ಮಾರುಕಟ್ಟೆಯಲ್ಲಿ ಈಗಾಗಲೇ ವಿಶೇಷ ಮಾಸ್ಕ್‌ಗಳನ್ನು (Speical Mask) ಬಿಡುಗಡೆ ಮಾಡಲಾಗಿದೆ. ಮಾಲೀಕರು ಅಥವಾ ನಿರ್ವಾಹಕರು ಆ ಮಾಸ್ಕ್‌ಗಳನ್ನು ಪಡೆದು ಬರುವ ಗ್ರಾಹಕರಿಗೆ ನೀಡಬೇಕು. ಇದರಿಂದ ಅವರು ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡಬಹುದು ಎಂದು ಸಚಿವ ಆರ್.ಅಶೋಕ್ (R Ashoka) ತಿಳಿಸಿದ್ದಾರೆ.
ನಗರದಲ್ಲಿ ಮಾಸ್ಕ್ ಕಡ್ಡಾಯಕ್ಕೆ ಪಬ್, ಬಾರ್ ಮಾಲೀಕರ ವಿರೋಧದ ಕುರಿತು ಮಾತನಾಡಿದ ಸಚಿವರು, ಬಾರ್, ಪಬ್‌ಗಳಲ್ಲಿ ಕುಳಿತು ಡ್ರಿಂಕ್ಸ್ ಮಾಡಲು ಸ್ಪೆಷಲ್ ಮಾಸ್ಕ್ ರಿಲೀಸ್ ಮಾಡಿದ್ದಾರೆ. ಬರುವ ಗ್ರಾಹಕರಿಗೆ ಆ ಮಾಸ್ಕ್ಗಳನ್ನು ನೀಡಬೇಕು. ಇದರಿಂದ ಯಾರಿಗೂ ತೊಂದರೆಯಾಗೋದಿಲ್ಲ. ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡಬಹುದು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 74 ದಿನದ ಸಿಜೆಐ ಅವಧಿಯಲ್ಲಿ ಯುಯು ಲಲಿತ್‌ಗಿದ್ರು 40+ ಸಿಬ್ಬಂದಿ
ಜನರ ಪ್ರಾಣ ಉಳಿದರೆ ಎಲ್ಲಾ ಸಿಗುತ್ತದೆ. ಜನರ ಪ್ರಾಣಕ್ಕೇ ಕಂಟಕ ಬಂದ್ರೆ ಏನು ಸಿಗುತ್ತದೆ? ನಿಮಗ್ಯಾರಿಗೋ ಬಾರ್ ವ್ಯಾಪಾರ ಆಗಬೇಕು ಅಂತಾ ಜನರ ಪ್ರಾಣ ತೆಗೆಯೋದು ಒಳ್ಳೆಯದಲ್ಲ. ನಾನು ಅವರಲ್ಲಿ ವಿನಂತಿ ಮಾಡ್ತೀನಿ, ದಯಮಾಡಿ ಸಹಕಾರ ನೀಡಬೇಕು ಎಂದು ಕೋರಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ವಿದೇಶಿಯರಿಗೆ ಟಫ್ ರೂಲ್ಸ್ – ಫೈಜರ್ ಲಸಿಕೆ ನೀಡಲು ನಿರ್ಧಾರ
ಕೋವಿಡ್ (Covid 19) ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿಯ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಕೋವಿಡ್ ಯೂನಿಟ್ಸ್, ಆಕ್ಸಿಜನ್ ಪ್ಲಾಂಟ್, ಐಸಿಯು (ICU) ಘಟಕ ಸೇರಿದಂತೆ ಎಲ್ಲ ಸೌಲಭ್ಯಗಳ ಪರಿಶೀಲನೆ ನಡೆಸಲಾಗಿದೆ. ಅಂತೆಯೇ ರಾಜ್ಯದ ಎಲ್ಲೆಡೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಬೇಕು. ಎಲ್ಲಿಯೂ ಸಹ ಆಕ್ಸಿಜನ್, ಅಂಬುಲೆನ್ಸ್ ಹಾಗೂ ಔಷಧಗಳ ಕೊರತೆ ಆಗಬಾರದು ಎಂದು ಸಲಹೆ ನೀಡಿದ್ದಾರೆ.
ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಮಾತನಾಡಿ, ಏನೋ ಮಾಡಲು ಹೋಗಿ, ಇನ್ನೇನೋ ಆಗೋದು ಬೇಡ. ಎಲ್ಲರೂ ಜಾಗ್ರತೆಯಿಂದ ಇದ್ದು, ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.