ಮೈಸೂರು: ಸೈಕಲ್‌ನಲ್ಲಿ (Cycle) ವೇಗವಾಗಿ ಹೋಗುತ್ತಿದ್ದ ಬಾಲಕ ಸೈಕಲ್ ನಿಯಂತ್ರಣವನ್ನು ಕಳೆದುಕೊಂಡು ಟೆಂಪೋ (Tempo) ಚಕ್ರದಡಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಮೈಸೂರಿನ (Mysuru) ಅಭಿಷೇಕ್ ವೃತ್ತದಲ್ಲಿ ನಡೆದಿದೆ.
ಬಾಲಾಜಿ (10) ಮೃತ ಬಾಲಕ ಎಂದು ಗುರುತಿಸಲಾಗಿದೆ. ಮೃತ ಬಾಲಾಜಿ ಮೂಲತಃ ಯಳಂದೂರಿನವನಾಗಿದ್ದು, ರಾಮಣ್ಣ ಎಂಬವರ ಪುತ್ರ. ಬಾಲಾಜಿ 5ನೇ ತರಗತಿ ವಿದ್ಯಾರ್ಥಿಯಾಗಿದ್ದು, ಗೆಳೆಯನೊಂದಿಗೆ ಸೈಕಲ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ಬಾರ್‌ನಲ್ಲಿ ಗಲಾಟೆ – ಯುವಕನ ಮರ್ಮಾಂಗಕ್ಕೆ ಹೊಡೆದು ಹತ್ಯೆ
ವೇಗವಾದ ಸೈಕಲ್ ಚಾಲನೆಯಿಂದ ಮಕ್ಕಳು (Children) ಸೈಕಲ್ ನಿಯಂತ್ರಣವನ್ನು ಕಳೆದುಕೊಂಡಿದ್ದು, ಟೆಂಪೋ ಚಕ್ರದಡಿಗೆ ಸಿಲುಕಿ ಬಾಲಾಜಿ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ಬಾಲಕ ಸಣ್ಣಪುಟ್ಟ ಗಾಯಗಳಿಂದ ಬಚಾವ್ ಆಗಿದ್ದು, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ವಿವಿ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಕ್ಕಳಿಗೆ ಜಾಮೂನಿನಲ್ಲಿ ವಿಷ ಹಾಕಿದ ತಂದೆ – ಬಳಿಕ ತಾನೂ ಆತ್ಮಹತ್ಯೆಗೆ ಯತ್ನ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]