ರಾಯಚೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಐದು ಪಲ್ಟಿಯಾಗಿ ಅಂಗಡಿಗಳಿಗೆ ಗುದ್ದಿದ ಘಟನೆ ತಾಲೂಕಿನ ಕಸ್ಬೆ ಕ್ಯಾಂಪ್ ಬಳಿ ನಡೆದಿದೆ. ಅಪಘಾತದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮೃತನನ್ನು ಸಲೀಂ (34) ಎಂದು ಗುರುತಿಸಲಾಗಿದೆ. ಸಿಂಧನೂರಿನಿಂದ ರಾಯಚೂರಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ರಸ್ತೆಯ ತಿರುವಿನಲ್ಲಿ ಕಾರು ಅತಿಯಾದ ವೇಗದಲ್ಲಿ ಚಲಾಯಿಸಿರುವುದು ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ವೇಗದ ಪರಿಣಾಮ ಅಪಘಾತದ ಬಳಿಕ ಕಾರು ರಸ್ತೆ ಪಕ್ಕದ ಅಂಗಡಿಗಳಿಗೂ ಗುದ್ದಿದೆ. ಇದನ್ನೂ ಓದಿ: ಮೇರಾ ಬಿಲ್ ಮೇರಾ ಅಧಿಕಾರ್ – ಬಿಲ್ ಕೇಳಿ 1 ಕೋಟಿ ರೂ. ಬಹುಮಾನ ಗೆಲ್ಲಿ
ಈ ಸಂಬಂಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹವನ್ನು ರಿಮ್ಸ್ ಆಸ್ಪತ್ರೆಗೆ ಶವಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ ನಿಧನ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]