ಮುಂಬೈ: ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆಬದಿಯ ಪಾದಚಾರಿಗಳ ಮೇಲೆಯೇ ಹರಿದ ಘಟನೆ ಮಹಾರಾಷ್ಟದ ರಾಜಧಾನಿಯ ಧಾರವಿ ಸಮೀಪ ನಡೆದಿದೆ.
ಧಾರವಿ ಸಮೀಪದ ಸಿಗ್ನಲ್ ಬಳಿ ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ ಹೋಗುತ್ತಿದ್ದ ಪಾದಚಾರಿಗಳ ಮೇಲೆಯೇ ಹರಿದಿದೆ. ಅಲ್ಲದೆ ಸಿಗ್ನಲ್ ಬಳಿ ನಿಂತಿದ್ದ ವಾಹನಗಳಿಗೆ ಗುದ್ದಿ ನಿಂತುಕೊಂಡಿದೆ. ಕಾರ್ ಹರಿದ ಪರಿಣಾಮ ಐವರು ಪಾದಚಾರಿಗಳಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆಯ ತೀವ್ರತೆಯು ಭಯಬೀಳಿಸುವಂತಿದೆ.
ಘಟನೆಯು ಕಳೆದ ವಾರ ಜೂನ್ 16ರಂದು ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ವೇಗವಾಗಿ ಕಾರ್ ನಿಯಂತ್ರಣ ತಪ್ಪಿ ಪಾದಚಾರಿಗಳ ಮೇಲೆಯೆ ಹರಿದಿದೆ. ವೇಗದ ನಿಯಂತ್ರಣ ಭಾರದೆ ಮುಂದೆ ನಿಂತಿದ್ದ ಆಟೋ, ಕಾರ್ ಹಾಗೂ ದ್ವಿಚಕ್ರವಾಹನಗಳಿಗೂ ಗುದ್ದಿ ನಿಂತಿದೆ. ಕಾರ್ ಗುದ್ದಿದ ರಭಸಕ್ಕೆ ಕಾರ್ ನಲ್ಲಿದ್ದ ಮಹಿಳೆ ಹೊರಗೆ ಬಿದ್ದಿದ್ದಾಳೆ.
ಘಟನೆಯಿಂದ ಸ್ಥಳದಲ್ಲಿದ್ದ ಪಾದಚಾರಿಗಳು ಗಾಬರಿಗೊಂಡು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಕೂಡಲೇ ಕಾರ್ ಚಾಲಕನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.