ಟೆಲ್ ಅವೀವ್: ವಿಮಾನದಿಂದ ಇಳಿದ ಕೂಡಲೇ ಆತಿಥೇಯ ದೇಶದ ಪ್ರಧಾನಿಯಿಂದ ಆತ್ಮೀಯ ಸ್ವಾಗತ, ಇದಾದ ಬಳಿಕ ಭಾರತ ರಾಷ್ಟ್ರಗೀತೆ ಮೊಳಗಿಸಿ ಗೌರವ, ಸ್ವಾಗತ ಸಿಕ್ಕಿದ ಬಳಿಕ ಅಲ್ಲೇ ವಿಶೇಷ ಭಾಷಣ. ಇದು 70 ವರ್ಷದ ಬಳಿಕ ಇಸ್ರೇಲಿಗೆ ಆಗಮಿಸಿದ ಭಾರತದ ಪ್ರಧಾನಿಗೆ ಆ ದೇಶದ ನೀಡಿದ ವಿಶೇಷ ಸ್ವಾಗತದ ಹೈಲೈಟ್ಸ್.
ಪ್ರಮುಖ ನಗರವಾಗಿರುವ ಟೆಲ್ ಅವೀವ್‍ಗೆ ಪ್ರಧಾನಿ ಇದ್ದ ಏರ್‍ಇಂಡಿಯಾ ವಿಮಾನ ಭಾರತೀಯ ಕಾಲಮಾನ ಸಂಜೆ 6.30ರ ವೇಳೆಗೆ ಲ್ಯಾಂಡ್ ಆಯ್ತು. ವಿಮಾನ ನಿಲ್ದಾಣದಲ್ಲಿ ನಿಗಧಿತ ಸ್ಥಳದಲ್ಲಿ ಲ್ಯಾಂಡ್ ಆದ ಕೂಡಲೇ ಪ್ರಧಾನಿ ಮೋದಿ ಅವರಿಗೆ ವಿಶೇಷ ಸ್ವಾಗತ ನೀಡುವ ಪ್ರಕ್ರಿಯೆ ಆರಂಭವಾಯಿತು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯುಹು ನಿಲ್ದಾಣಕ್ಕೆ ಆಗಮಿಸಿದರು. ಏರ್‍ಸ್ಟ್ರೇರ್ ಮೂಲಕ ಮೋದಿ ಕೆಳಗಡೆ ಇಳಿಯುತ್ತಿದ್ದಂತೆ ಬೆಂಜಮಿನ್ ಮೋದಿ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡರು. ಮೋದಿ ಅವರು ಈ ಗೌರವಕ್ಕೆ ಥ್ಯಾಂಕ್ಸ್ ಎಂದು ಹೇಳಿದರು. ಇದಾದ ಬಳಿಕ ಮೋದಿ ಅವರಿಗೆ ಬೆಂಜಮಿನ್ ನೆತನ್ಯುಹು ಇಸ್ರೇಲ್ ಅಧಿಕಾರಿಗಳನ್ನು ಮೋದಿಗೆ ಪರಿಚಯಿಸಿದರು.
Advertisement
ನಂತರ ಕೆಂಪು ಹಾಸಿನ ಮೇಲೆ ನಡೆದ ಇಬ್ಬರು ಪ್ರಧಾನಿಗಳು ಸ್ವಲ್ಪ ದೂರ ನಡೆದು ನಿಂತರು. ಕೂಡಲೇ ಭಾರತದ ರಾಷ್ಟ್ರಗೀತೆ ಮೊಳಗಿತು. ಈ ವಿಶೇಷ ವಂದನೆಯ ಸ್ವೀಕರಿಸಿದ ಬಳಿಕ ಇಬ್ಬರು ನಾಯಕರು ಅಲ್ಲೇ ನಿರ್ಮಾಣವಾಗಿದ್ದ ವೇದಿಕೆಯನ್ನು ಏರಿದರು.
Advertisement
ಮೇರೆ ದೋಸ್ತೋ.. ಆಪ್ ಕೋ ಸ್ವಾಗತ್ ಎಂದು ಹಿಂದಿಯಲ್ಲೇ ಭಾಷಣ ಆರಂಭಿಸಿದ ಬೆಂಜಮಿನ್. `ಮೋದಿ ನಮ್ಮ ಬೆಸ್ಟ್ ಫ್ರೆಂಡ್, ಭಾರತೀಯರೆಂದರೆ ನಮಗೆ ಇಷ್ಟ. ನಿಮ್ಮ ಭೇಟಿಯಿಂದ ನಮ್ಮೆರೆಡು ರಾಷ್ಟ್ರಗಳ ಬಾಂಧವ್ಯ ವೃದ್ಧಿಯಾಗಲಿದೆ ಎಂದು ಹೇಳಿದರು. ನಂತರ ಮೋದಿ ಅವರು ಮಾತನಾಡಿ ನಮ್ಮ ಮಾತುಕತೆಯಿಂದ ಎರಡೂ ದೇಶಗಳ ಬಾಂಧವ್ಯ ವೃದ್ಧಿಸಲಿದೆ ಎಂದು ತಿಳಿಸಿದರು.
Advertisement
Advertisement
ಮೂರನೇ ವ್ಯಕ್ತಿ: ಇಸ್ರೇಲ್ ಪ್ರಧಾನಿಯವರೇ ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ಈ ರೀತಿಯ ವಿಶೇಷ ಸ್ವಾಗತ ನೀಡುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ ಧರ್ಮಗುರು ಪೋಪ್ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೀಡಿದ್ದರು. ಈಗ ಈ ವಿಶೇಷ ಸ್ವಾಗತವನ್ನು ಪಡೆದ ಮೂರನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.
ಇಸ್ರೇಲ್ ಪ್ರಧಾನಿಯವರ ಫೇಸ್‍ಬುಕ್ ಪೇಜ್‍ನಲ್ಲಿ ಮೋದಿ ಅವರಿಗೆ ನೀಡಿದ ವಿಶೇಷ ಗೌರವದ ವಿಡಿಯೋ ಅಪ್ಲೋಡ್ ಆಗಿದೆ. ಬೆಂಜಮಿನ್ ನೆತನ್ಯುಹು ಅವರು ಟ್ವಿಟ್ಟರ್ ನಲ್ಲಿ ಹಿಂದಿಯಲ್ಲಿ ಸ್ವಾಗತವನ್ನು ಕೋರಿದ್ದಾರೆ.
2003ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಇಸ್ರೇಲ್ ಪ್ರಧಾನಿ ಏರಿಯಲ್ ಶರೋನ್ ಭಾರತ ಪ್ರವಾಸ ಕೈಗೊಂಡಿದ್ದರು. ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 25 ವರ್ಷಗಳಾಗಿದ್ದರೂ ಉಳಿದ ದೇಶಗಳಿಗೆ ಹೋಲಿಸಿದರೆ ಉಭಯ ದೇಶಗಳ ನಾಯಕರು ಬಂದು ಹೋಗುವ ಪರಿಪಾಠ ಬಹಳ ಕಡಿಮೆ ಇದೆ. 2006ರಲ್ಲಿ ಗುಜರಾತ್ ಸಿಎಂ ಆಗಿದ್ದಾಗ ಇಸ್ರೇಲ್‍ಗೆ ಮೋದಿ ಭೇಟಿ ನೀಡಿದ್ದರು.
שלום עם ישראל! היום אני מתחיל ביקור מיוחד והיסטורי במטרה לחזק את הקשר בין הודו וישראל. pic.twitter.com/WpqmTtHscM
— Narendra Modi (@narendramodi) July 4, 2017
"When it comes to Israel-#India relations, the sky is the limit!"
–@IsraeliPM#ModiInIsrael #GrowingPartnership pic.twitter.com/cyDJ5vLsrz
— Israel Foreign Ministry (@IsraelMFA) July 4, 2017
भारतीय प्रधानमंत्री नरेंद्र मोदी, इजरायल में आपका स्वागत है!
Welcome to Israel, Indian Prime Minister Narendra Modi! pic.twitter.com/LM0zWKC1oi
— Prime Minister of Israel (@IsraeliPM) July 4, 2017
प्रधानमंत्री बेंजामिन नेतन्याहू ने बेन गुरियन हवाई अड्डे पर भारत के प्रधानमंत्री नरेंद्र मोदी का स्वागत किया pic.twitter.com/XJHRiH80wR
— Prime Minister of Israel (@IsraeliPM) July 4, 2017